Wednesday, August 27, 2025
Google search engine
HomeUncategorizedಅಧಿವೇಶನ ಆರಂಭ : ಆಡಳಿತ ಪಕ್ಷವನ್ನು ಕಟ್ಟಿಹಾಕಲು ಇವೆ ಸಾಲು ಸಾಲು ಆರೋಪಗಳು !

ಅಧಿವೇಶನ ಆರಂಭ : ಆಡಳಿತ ಪಕ್ಷವನ್ನು ಕಟ್ಟಿಹಾಕಲು ಇವೆ ಸಾಲು ಸಾಲು ಆರೋಪಗಳು !

ಬೆಳಗಾವಿ : ವಿಧಾನ ಸಭೆ ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಆಡಳಿತ ಪಕ್ಷ ಕಾಂಗ್ರೆಸ್​ನ್ನು ಕಟ್ಟಿಹಾಕಲು ವಿಪಕ್ಷಗಳು ತಯಾರಿ ನಡೆಸಿವೆ. ಯತ್ನಾಳ್ ಭಿನ್ನ ನಡೆ, ಅಂತರಿಕ ಜಗಳಗಳ ನಡುವೆಯು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ ಎಂದು ಮಾಹಿತಿ ದೊರೆತಿದೆ.

ಸದನದಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ನಡೆಸಿ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯ ಬಿಜೆಪಿ ತಯಾರಿ ನಡೆಸಿದ್ದು ಇದರ ನಡುವೆ ಬಿಜೆಪಿಯಲ್ಲಿನ ಒಳಜಗಳಗಳು ಇದಕ್ಕೆ ಅಡ್ಡಿ ಉಂಟು ಮಾಡುತ್ತವೆ ಎಂದು ಸಹ ವಿಮರ್ಶೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಆಗ್ರಹಿಸಿದ ಉದ್ದವ್​ ಠಾಕ್ರೆ ಮಗ !

ಇದಕ್ಕೆ ಪೂರಕವಾಗಿ ಯತ್ನಾಳ್​ ಆ್ಯಂಡ್​ ಟೀಮ್​ ಕೆಲವು ವಿಷಯಗಳ ಕುರಿತು ಪ್ರತ್ಯೇಕವಾಗಿ ಪ್ರಸ್ತಾಪಿಸಲು ಯೋಜನೆ ರೂಪಿಸಿದ್ದು. ಪಂಚಮ ಸಾಲಿ 2ಎ ಮೀಸಲಾತಿ ಕುರಿತು ಪ್ರತ್ಯೇಕ ಹೋರಾಟ ನಡೆಸಲು ಸಿದ್ದತೆ ನಡೆಸಿದೆ. ಇವೆಲ್ಲದರ ನಡುವೆಯು ಕೂಡ ವಿಪಕ್ಷಗಳಿಗೆ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಸಾಕಷ್ಟು ವಿಷಯಗಳಿವೆ ಎಂಬುದನ್ನು ಮರೆಯುವಂತಿಲ್ಲ.

ವಿಪಕ್ಷಗಳ ಪ್ರಮುಖ ಅಸ್ತ್ರಗಳು ಯಾವುವೆಂದರೆ !

  • ಮೂಡಾ ಪ್ರಕರಣದಲ್ಲಿ ಇಡಿ ತನಿಖಾ ವರದಿಯನ್ನು ಪ್ರಸ್ತಾಪಿಸಿನ ಸರ್ಕಾರಕ್ಕೆ ಮುಜುಗುರ ಉಂಟು ಮಾಡುವುದು .
  • ಬಳ್ಳಾರಿಯಲ್ಲಿ ಬಾಣಂತಿಯರ ಸಾವು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಆಗ್ರಹ.
  • ರಾಜ್ಯದಲ್ಲಿ ವಕ್ಪ್ ಆಸ್ತಿಯ ವಿವಾದ, ಜಮ್ಮೀರ್ ಅಹಮದ್ ರಾಜೀನಾಮೆ.
  • ಬ್ರಾಂಡ್ ಬೆಂಗಳೂರಿಗೆ ಅನುದಾನದ ಅಸ್ತ್ರ.
  •  ಗೃಹ ಲಕ್ಷ್ಮಿ ಹಣದ ವಿಳಂಬದ ಬಗ್ಗೆಯೂ ಚರ್ಚೆ.
  •  ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಮಹತ್ವ.
  •  ಮಹದಾಯಿ, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆ.
  • ಕಲ್ಬುರ್ಗಿಯಲ್ಲಿ ನಡೆದ ಕ್ಯಾಬಿನೆಟ್ ನಿರ್ಣಯಗಳ ಅನುಷ್ಠಾನಕ್ಕೆ ಪಟ್ಟು.

ಹೀಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ವಿಪಕ್ಷಗಳು ಸಿದ್ದತೆ ನಡೆಸಿವೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments