Tuesday, August 26, 2025
Google search engine
HomeUncategorizedಹಾಸನದ ಮಣ್ಣಿನಲ್ಲಿ ದೇವೇಗೌಡರ ಕುಟುಂಬದ ವಿರುದ್ದ ಗುಟುರು ಹಾಕಿದ ಟಗರು !

ಹಾಸನದ ಮಣ್ಣಿನಲ್ಲಿ ದೇವೇಗೌಡರ ಕುಟುಂಬದ ವಿರುದ್ದ ಗುಟುರು ಹಾಕಿದ ಟಗರು !

ಹಾಸನ: ಜಿಲ್ಲೆಯಲ್ಲಿ ನಡೆದ ಜನಕಲ್ಯಾಣ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ದೇವೇಗೌಡರು ಮತ್ತು ಅವರ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಸಮಾವೇಶದಲ್ಲಿ ಸಿಎಂ ಮಾತು ಆರಂಬಿಸುತ್ತಲೇ ಸಮಾವೇಶದಲ್ಲಿ ಭಾಗಿಯಾಗಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಸಹಸ್ರಾರು ಜನರು ಸಿಎಂ ಪರ ಘೋಷಣೆ ಕೂಗಿ ತಮ್ಮ ಅಭಿಮಾನ ತೋರ್ಪಡಿಸಿದರು. ಇದೊಂದು ಮಹತ್ವದ ಸಮಾವೇಶ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ ‘ ನೀವು ಎಷ್ಟೊತ್ತು ಕೂತಿರ್ತೊರೊ ಅಷ್ಟೊತ್ತು ಮಾತಾಡ್ತೇನೆ, ಯಾರು ಎದ್ದು ಹೋಗಬಾರದು ಎಂದು ಸೂಚನೆ ನೀಡಿ ಮಾತು ಆರಂಬಿಸಿದರು.

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಡೊಂದು ದೊಡ್ಡ ಸಮಾವೇಶ ಹಾಸನದಲ್ಲಿ ಆಗಿರಲಿಲ್ಲ. ಮಾದ್ಯಮದಲ್ಲಿ ಯಾಕೆ ಹಾಸನದಲ್ಲಿ ಸಮಾವೇಶ ಎಂದು ಚರ್ಚೆ ಆಗ್ತಾ ಇತ್ತು. ಮೈಸೂರಿನಲ್ಲಿ ಅನೇಕ ಸಮಾವೇಶ ಆಗಿದೆ, ಆದರೆ ಹಾಸನದಲ್ಲಿ ಆಗಿಲ್ಲ ಅದಕ್ಕೆ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ನಾನು ಹೇಳಿದೆ. ಇದು ಬರೀ ಪಕ್ಷದ ಕಾರ್ಯಕರ್ತರು ಮಾಡುತ್ತಿರೊ ಸಮಾವೇಶ ಅಲ್ಲ. ಸ್ವಾಭಿಮಾನಿ ಒಕ್ಕೂಟ ಹಾಗು ನಮ್ಮ ಪಕ್ಷದ ಬಗ್ಗೆ ಬೆಂಬಲ ಇರುವವರು ಮಾಡುತ್ತಿದ್ದಾರೆ.

ಕನ್ನಡ ಕಣ್ಮಣಿ ರಾಜಕುಮಾರ ಅವರು ಅಭಿಮಾನಿಗಳು ದೇವರು ಅಂತಿದ್ದರು, ನಾವು ನಿಮಗೆ ಮತದಾರರೇ ದೇವರು ಎಂದು ಹೇಳ್ತೇವೆ. ಚನ್ನಪಟ್ಟಣದಲ್ಲಿ ಈ ಜಿಲ್ಲೆಗೆ ಸೇರಿದ ಮಹಾ ನಾಯಕ ಅವರ ಮೊಮ್ಮಗ
ನಿಖಿಲ್ ಕುಮಾರ್ ಸ್ಪರ್ದೆ ಮಾಡಿದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗ ಸ್ಪರ್ದೆ ಮಾಡಿದ್ರು ಆದರೆ ಅವರು ಅಲ್ಲೆಲ್ಲಾ ಸೋತುಹೋಗಿದ್ದಾರೆ.

ಕೇವಲ ಕಾಂಗ್ರೆಸ್ ಪಕ್ಷದಿಂದ‌ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾದ್ಯ. ಈ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್​​ ಎಂದು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಒಮ್ಮೆ ಬಿಜೆಪಿ ಇನ್ನೊಮ್ಮೆ ನಮ್ಮ ಸಹಾಯದಿಂದ ಸಿಎಂ ಆಗಿದ್ದಾರೆ. ಬಿಜೆಪಿ ಕೂಡ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅದಿಕಾರಕ್ಕೆ ಬಂದ್ರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಸೇರಿಕೊಂಡು ಬಿಜೆಪಿ ಜೊತೆ ಅಧಿಕಾರಕ್ಕೆ ಬಂದ್ರು, ಆದರೆ ಅದನ್ನು ಉಳಿಸಿಕೊಳ್ಳೋಕೆ ಆಗ್ಲಿಲ್ಲ. ನಂತರ 2018 ರಲ್ಲಿ 38 ಜನ ಗೆದ್ದಿದ್ದ ಜೆಡಿಎಸ್ ನಮ್ಮ ಜೊತೆ ಸೇರಿ ಅಧಿಕಾರಕ್ಕೆ ಬಂದ್ರು, 38 ಶಾಸಕರಿದ್ದರು ಅವರನ್ನೆ ನಾವು ಸಿಎಂ ಮಾಡಿದೆವು. ಆದರೆ ಆಗಲು ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ ಎಂದು ದೇವೇಗೌಡರು ಮತ್ತು ಅವರ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments