Sunday, September 14, 2025
HomeUncategorizedಚಳಿಗಾಲದ ಅಧಿವೇಶ 2024 ; ಶಾಂತ ರೀತಿಯ ಹೋರಾಟಕ್ಕೆ ಅವಕಾಶ : ಎಡಿಜಿಪಿ ಹಿತೇಂದ್ರ

ಚಳಿಗಾಲದ ಅಧಿವೇಶ 2024 ; ಶಾಂತ ರೀತಿಯ ಹೋರಾಟಕ್ಕೆ ಅವಕಾಶ : ಎಡಿಜಿಪಿ ಹಿತೇಂದ್ರ

ಬೆಳಗಾವಿ : 10 ದಿನಗಳ ಚಳಿಗಾಲ ಅಧಿವೇಶನ ನಡೆಯುತ್ತಿದ್ದು ಈಗಾಗಲೇ ಪೂರ್ವ ಸಿದ್ಧತೆ ಪ್ರಾರಂಭಿಸಿದ್ದೇವೆ ಎಂದು ಎಡಿಜಿಪಿ ಹಿತೇಂದ್ರ ಅವರು ಶುಕ್ರವಾರ ಹೇಳಿದರು.

ಡಿಸೆಂಬರ್​ 9 ರಿಂದ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ ಮಾಧ್ಯಮದ ಜೊತೆ ಮಾತಾಡಿದ ಅವರು, ಪೂರ್ವ ಸಿದ್ಧತೆ ಈಗಾಗಲೇ ಪ್ರಾರಂಭ ಮಾಡಿದ್ದೇವೆ. ಸಿದ್ಧತೆ ಪರಿಶೀಲನೆ ಮಾಡಲು ಬಂದಿದ್ದೇನೆ. ಭದ್ರತೆ ಮತ್ತು ಸಾರ್ವಜನಿಕರು, ಶಾಸಕರು ಭದ್ರತೆ, ಪ್ರತಿಭಟನೆಗೆ ಬಂದೋಬಸ್ತ್ ಮಾಡಬೇಕು ಎಂದರು.

ಅದುವಲ್ಲದೇ, ಆರು ಸಾವಿರ ಜನ ಪೊಲೀಸರು, ಅರವತ್ತು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುತ್ತಿದೆ. ಟೆನ್ ಸಿಟಿ, ಮಠಗಳು, ಕಲ್ಯಾಣ ಮಂಟಪದಲ್ಲಿ ಪೊಲೀಸರಿಗೆ ವಸತಿ, ಊಟದ ವ್ಯವಸ್ಥೆ ಮಾಡಿದ್ದೇವೆ. ಸ್ವಲ್ಪ ಜಾಸ್ತಿ ಚಳಿ ಇರುವ ಕಾರಣಕ್ಕೆ ಮುಜಾಗೃತ ಕ್ರಮ ತೆಗೆದುಕೊಳ್ಳಲು ಹೇಳಿದ್ದೇವೆ ಎಂದು ಅವರು ತಿಳಿಸಿದರು.

ಎಂಇಎಸ್​ ಮಾವೇಳಾವ್​ ಮಾಡಲು ಮುಂದಾಗಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಕಳೆದ ವರ್ಷದಂತೆ ನಾವು ಕ್ರಮ ವಹಿಸುತ್ತೇವೆ. ಈ ಬಾರಿಯೂ ಅದೇ ಪದ್ದತಿ ಇದೆ. ಶಾಂತ ರೀತಿ ಪ್ರತಿಭಟನೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕರಿಗೆ ಅನಾನುಕೂಲ ಆಗುವುದಕ್ಕೆ ಅವಕಾಶ ಕೊಡಲ್ಲ. ಪ್ರತಿಭಟನೆಗಳ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿಗಾಗಿ ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ ಮುತ್ತಿಗೆ ವಿಚಾರದ ಬಗ್ಗೆ ಮಾತಾಡಿ, ಶಾಂತರೀತಿಯ ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಕೊಡ್ತಿವಿ. ಹೋರಾಟದ ಬೆಳವಣಿಗೆ ಮೇಲೆ ನಿಗಾವಹಿಸುತ್ತೇವೆ. ಸ್ವಾಮೀಜಿ ವಿರುದ್ಧ ನಾವಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಜರುಗಿಸುತ್ತೇವೆ ಎಂದು ಎಡಿಜಿಪಿ ಹಿತೇಂದ್ರ ಮಾತಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments