Saturday, September 6, 2025
HomeUncategorizedಜಿಲ್ಲಾಸ್ಪತ್ರೆಯಿಂದ ಮಗು ಕಳ್ಳತನ ಪ್ರಕರಣ: ಮರಳಿ ತಾಯಿಯ ಮಡಿಲು ಸೇರಿದ ಮಗು

ಜಿಲ್ಲಾಸ್ಪತ್ರೆಯಿಂದ ಮಗು ಕಳ್ಳತನ ಪ್ರಕರಣ: ಮರಳಿ ತಾಯಿಯ ಮಡಿಲು ಸೇರಿದ ಮಗು

ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನವಜಾತಶಿಶು ಕಳ್ಳತನ ಪ್ರಕರಣ ಸುಖಾಂತ್ಯವಾಗಿದ್ದು. ಶಿಶುವನ್ನು ಕಳ್ಳತನ ಮಾಡಿದ್ದ ಕಳ್ಳಿಯರನ್ನು ಬಂಧಿಸುವಲ್ಲಿ ಪೋಲಿಸರು ಸಫಲರಾಗಿದ್ದಾರೆ. ಮತ್ತೆ ನವಜಾತ ಶಿಶು ತಾಯಿಯ ಮಡಿಲು ಸೇರಿದ್ದು. ಕುಟುಂಬದಲ್ಲಿ ಸಂತಸ ಮನೆ ಮಾಡಿದೆ ಎಂದು ಮಾಹಿತಿ ದೊರೆತಿದೆ.

ನೆನ್ನೆ(ನ.26) ಕಲಬುರಗಿಯ ಜಿಲ್ಲಾಸ್ಪತ್ರೆಯಿಂದ ಇಬ್ಬರು ಮಹಿಳೆಯರು ನಕಲಿ ದಾದಿಯರ ವೇಷವನ್ನು ಧರಿಸಿ ಮಗುವನ್ನು ಕಳ್ಳತನ ಮಾಡಿದ್ದರು. ಇದರ ಬಗ್ಗೆ ಪೋಲಿಸ್​​ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಪೋಲಿಸರು 48 ಗಂಟೆಯೊಳಗೆ ಮಗುವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯಿಂದ ಮಗುವನ್ನು ಕಳ್ಳತನ ಮಾಡಿದ್ದ ಕಳ್ಳಿಯರು ಖೈರುನ್​ ಎಂಬ ಮಹಿಳೆಗೆ 50 ಸಾವಿರ ಹಣಕ್ಕೆ ಮಾರಾಟ ಮಾಡಿದ್ದರು. ಮಗುವನ್ನು ಮಾಧ್ಯಮಗಳಲ್ಲಿ ಗಮನಿಸಿದ ಅಕ್ಕಪಕ್ಕದ ಮನೆಯವರು ಖೈರುನ್ ಮನೆಯಲ್ಲಿನ ಮಗುವಿಗೆ ಹೋಲಿಕೆ ಇದ್ದ ಕಾರಣದಿಂದ ಪೋಲಿಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಚರಣೆ ನಡೆಸಿದ ಪೋಲಿಸರು ಮಗುವನ್ನು ಯಶಸ್ವಿಯಾಗಿದ್ದಾರೆ.

ಮಗುವನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳಾದ ಉಮೇರಾ, ನಸರೀನ್​ ಹಾಗೂ ಫಾತಿಮಾಳನ್ನು ಪೋಲಿಸರು ಬಂಧಿಸಿದ್ದು. ಮಗುವನ್ನು ಪಡೆದುಕೊಂಡಿದ್ದ ಖೈರುನ್​ಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕೇವಲ 48 ಗಂಟೆಗಳಲ್ಲೆ ಪ್ರಕರಣವನ್ನು ಭೇದಿಸಿದ ಕಲಬುರಗಿ ಪೋಲಿಸರು ನೆನ್ನೆ ತಡರಾತ್ರಿಯೆ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ್ದು. ಖುದ್ದು ನಗರ ಪೋಲಿಸ್​ ಆಯುಕ್ತ ಡಾ. ಶರಣಪ್ಪ ಮಗುವನ್ನು ಹಸ್ತಾಂತರಿಸಿದ್ದಾರೆ. ಪೋಲಿಸರ ಕಾರ್ಯಚರಣೆಯ ಬಗ್ಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments