Wednesday, August 27, 2025
HomeUncategorizedಬಿಷ್ಣೊಯ್​ ಸಮಾಜದ ಪ್ರಾಣಿ ರಕ್ಷಣಾ ಸಂಘದ ಯುವ ಮುಂಖಡನಾಗಿ ಆಯ್ಕೆಯಾದ ಲಾರೆನ್ಸ್​​ ಬಿಷ್ಣೊಯ್​

ಬಿಷ್ಣೊಯ್​ ಸಮಾಜದ ಪ್ರಾಣಿ ರಕ್ಷಣಾ ಸಂಘದ ಯುವ ಮುಂಖಡನಾಗಿ ಆಯ್ಕೆಯಾದ ಲಾರೆನ್ಸ್​​ ಬಿಷ್ಣೊಯ್​

ದೆಹಲಿ : ಸದ್ಯ ಅಹಮದಾಬಾದ್‌ನ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ 33 ವರ್ಷದ ಲಾರೆನ್ಸ್ ಬಿಷ್ಣೋಯ್ ನನ್ನು ಆಲ್ ಇಂಡಿಯಾ ಅನಿಮಲ್ ಪ್ರೊಟೆಕ್ಷನ್ ಬಿಷ್ಣೋಯ್ ಸೊಸೈಟಿಯ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾನೆ.

ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಮುಂಬೈನಲ್ಲಿ ಮೂರು ಡಜನ್‌ಗಿಂತಲೂ ಹೆಚ್ಚು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ, ಅಕ್ಟೋಬರ್ 29 ರಂದು ಸಂಜೆ ಅಬೋಹರ್‌ನಲ್ಲಿ ನಡೆದ ಬಿಷ್ಣೋಯ್ ಸಮಾಜದ ಸಭೆಯಲ್ಲಿ ಬಿಷ್ಣೋಯ್ ನನ್ನು ಆಯ್ಕೆ ಮಾಡಲಾಯಿತು. ಬಿಷ್ಣೋಯ್ ಸಮಾಜದ ಮುಖ್ಯಸ್ಥ ಇಂದರ್‌ಪಾಲ್ ಬಿಷ್ಣೋಯ್ ನೀಡಿದ ನೇಮಕಾತಿ ಪ್ರಮಾಣಪತ್ರದ ಪ್ರಕಾರ, ಬಿಷ್ಣೋಯ್ ಸಮುದಾಯದ ತತ್ವಗಳ ಪ್ರಕಾರ ಪ್ರಾಣಿಗಳ ರಕ್ಷಣೆಯನ್ನು ಮಾಡುವ ಕಾರ್ಯವನ್ನು ವಹಿಸಲಾಗಿದೆ.

ಪಂಜಾಬ್‌ನ ಅಬೋಹರ್‌ನಲ್ಲಿರುವ ದುತ್ರನ್‌ವಾಲಿ ಗ್ರಾಮದ ರವೀಂದರ್ ಪುತ್ರ ಲಾರೆನ್ಸ್ ಬಿಷ್ಣೋಯ್ ನನ್ನು ಆಲ್ ಇಂಡಿಯಾ ಅನಿಮಲ್ ಪ್ರೊಟೆಕ್ಷನ್ ಬಿಷ್ಣೋಯ್ ಸಮಾಜದ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ನೇಮಿಸಲಾಗಿದೆ ಎಂದು ಪ್ರಮಾಣೀಕರಿಸಲಾಗಿದೆ.ಪ್ರಾಣಿಗಳು, ಪರಿಸರವನ್ನು ರಕ್ಷಿಸುವುದು ಮತ್ತು ಕೆಲಸವನ್ನು ಮುಂದುವರಿಸಬೇಕಾಗಿದೆ. 1730 ರಲ್ಲಿ ರಾಜಸ್ಥಾನದಲ್ಲಿ ಖೇಜರಿ ಮರಗಳನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಮೃತಾ ದೇವಿ ಬಿಷ್ಣೋಯಿ ಮತ್ತು 363 ಬಿಷ್ಣೋಯಿಗಳ ಪರಂಪರೆಯನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments