Thursday, August 28, 2025
HomeUncategorizedಸದಾಶಿವ ಆಯೋಗ ವರದಿ ಜಾರಿ ವಿಚಾರ : ಸಿಎಂ ಮೇಲೆ ವಾಗ್ದಾಳಿ ನಡೆಸಿದ ಸಂಸದ ಗೋವಿಂದ್...

ಸದಾಶಿವ ಆಯೋಗ ವರದಿ ಜಾರಿ ವಿಚಾರ : ಸಿಎಂ ಮೇಲೆ ವಾಗ್ದಾಳಿ ನಡೆಸಿದ ಸಂಸದ ಗೋವಿಂದ್ ಕಾರಜೋಳ

ವಿಜಯಪುರ : ಸದಾಶಿವ ಆಯೋಗ ವರದಿ ಜಾರಿ ವಿಚಾರ. ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಂದು ಕಮೀಶನ್ ನೇಮಕಕ್ಕೆ ಸಂಸದ ಗೋವಿಂದ ಕಾರಜೋಳ ವಿರೋಧ ವ್ಯಕ್ತಪಡಿಸಿದ್ದು. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ‌ ಡಿಸಿಎಂ ಸಂಸದ ಗೋವಿಂದ ಕಾರಜೋಳ ಸಿಎಂ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಓರ್ವ ದಲಿತ ವಿರೋಧಿ ಮಹಾ ಮೋಸಗಾರ. ಮತ್ತೊಂದು ಆಯೋಗ ಅವರು ರಚನೆ ಮಾಡಲು ನಿರ್ಣಯಿಸಿದ್ದು ನಾವು ಒಪ್ಪಲ್ಲ.ಇಡೀ‌ ರಾಜ್ಯದಾದ್ಯಂತ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಲಿತರು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಕಾರಜೋಳ ಕ್ಯಾಬಿನೆಟ್ ನಲ್ಲಿ‌ ನಿನ್ನೆ ಒನ್ ಮ್ಯಾನ್ ಕಮಿಷನ್ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ದ ಮುಂಬುರುವ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ.  ಸಿಎಂ ಸಿದ್ದರಾಮಯ್ಯರನ್ನು  ರಾಜ್ಯದಲ್ಲಿ ನಾವು ಓಡಾಡಲು ಬಿಡಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕರುಗಳು‌ ಮನೆಗೆ ಮುತ್ತಿಗೆ ಹಾಕ್ತೇವೆ. ರಾಜ್ಯದ 30 ಜಿಲ್ಲೆಗಳಲ್ಲಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತೆ ಮತ್ತು ಸದಾಶಿವ ಆಯೋಗದ ವರದಿ ಜಾರಿಗೆ ನವೆಂಬರ್​ 15 ರವರೆಗೆ ಗಡುವು ನೀಡುತ್ತೇವೆ ಎಂದು ಹೇಳಿದರು.

ಒಂದು ವೇಳೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದ ಸಂಸದ ಗೋವಿಂದ ಕಾರಜೋಳ ಸ್ವಾತಂತ್ರ್ಯ ನಂತ್ರ ಶೇಕಡಾ 15 % ಎಸ್​ಸಿ ಗೆ ಶೇಕಡಾ 3% ಎಸ್​ಟಿ ಗೆ ಮೀಸಲಾತಿ ತರಲಾಯಿತು. ಆಗ ಐದಾರು ಜಾತಿಗಳು ಎಸ್​ಸಿಯಲ್ಲಿ ಇದ್ದವು ಬಳಿಕ ಬಹಳಷ್ಟು ಜಾತಿಗಳು ಸೇರಿದವು. ಬಹಳಷ್ಟು ಜಾತಿಗಳು ಬಳಿಕ ಇದರಲ್ಲಿ ಸೇರಿದ ಕಾರಣ ಅಸ್ಪೃಶ್ಯ ಜನಾಂಗದವರು ತಮಗೆ ಮೀಸಲಾತಿ ಸಿಗುತ್ತಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಎಂ ಕೃಷ್ಣ ಅವರು ಒಂದು ಆಯೋಗ ರಚನೆ‌ ಮಾಡಿದ್ರು. ಸದಾಶಿವ ನಾಲ್ಕು ವರ್ಷಗಳ ಕಾಲ ರಾಜ್ಯದ ಮ‌ನೆ ಮ‌ನೆಗೆ ಸುತ್ತಾಡಿ 2012 ರಲ್ಲಿ ವರದಿ ಕೊಟ್ಟರು, ಬಳಿಕ ಆಗ ಚುನಾವಣೆ ಬಂತು. ಕಾಂಗ್ರೆಸ್ ನವರು 2013 ರಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇವೆ ಎಂದು ಚುನಾವಣೆ ಯಲ್ಲಿ ಹೇಳಿದ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಜನರು ಬೆಂಬಲಿಸದರು. ದಲಿತರು ನಂಬಿ‌ ಕಾಂಗ್ರೆಸ್​ಗೆ ಮತ ನೀಡಿದರು.

ಆದರೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲಿಲ್ಲ.2018 ರಲ್ಲಿ ಮತ್ತೊಮ್ಮೆ ಇವರಿಗೆ ಜನ ಮತ ಹಾಕದ ಕಾರಣ ಇವರು ಅಧಿಕಾರಕ್ಕೆ ಬರಲಿಲ್ಲ.ಆಗ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಸದಾಶಿವ ಆಯೋಗ ವರದಿ ಜಾರಿ ಮಾಡದಿದ್ದೆ ಕಾರಣ ಅಂತ ವರದಿ ಕೊಟ್ರು..
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾವನೂರ ವರದಿ ಹಿಡಿದು ಇಲ್ಲಿಯವರೆಗಿನ‌ ಗಣತಿ ವರದಿ ಪಡೆದುಕೊಂಡು ಅಧ್ಯಯನ ಮಾಡಿದ್ದೇವೆ. ಆಗ ನಾಲ್ಕು ಗುಂಪುಗಳಾಗಿ ಮಾಡಿ ವರದಿ ಕೊಟ್ಟಾಗ ಬೊಮ್ಮಾಯಿ ವರು ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟರು. ಈ ವಿಚಾರವಾಗಿ ಕಾಂಗ್ರೆಸ್ ನವರು ಒಳ ಮೀಸಲಾತಿ ಕುರಿತು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ರು. ಮೀಸಲಾತಿಯಿಂದ ಬಂಜಾರ ,ಕೊರಮ ಜನಾಂಗ ಕೈಬಿಡುತ್ತಾರೆ ಅಂತ ಅಪಪ್ರಚಾರ ಮಾಡಿದ್ರು. ಎಂದು ಹೇಳಿದರು.

ಒಳ ಮೀಸಲಾತಿ ಕೊಡಲು ಸಮ್ಮತಿ ಇದೆ ಎಂದು‌ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಆಗಷ್ಟ್ -2024ರಂದು ಆದೇಶ ಮಾಡಿದೆ. ಆದೇಶ ಮಾಡಿ ಮೂರು ತಿಂಗಳಾದರೂ ರಾಜ್ಯ ಸರ್ಕಾರ ಇಲ್ಲಿಯವರೆಗೂ ಜಾರಿ ಮಾಡಿಲ್ಲ. 2023 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನವರು ಏನು ಹೇಳಿದ್ದರು. ಅಧಿಕಾರಕ್ಕೆ ಬಂದ ತಕ್ಷಣವೇ ಸದಾಶಿವ ಆಯೋಗ ವರದಿ ಜಾರಿ ಮಾಡ್ತೇವೆ ಎಂದಿದ್ದರು. ಒಳ ಮೀಸಲಾತಿಯ ದತ್ತಾಂಶ ನೋಡಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ವಿಚಾರವಾಗಿ ಮತ್ತೊಮ್ಮೆ‌ ಆಯೋಗ ಮಾಡುತ್ತೇವೆ ಎಂದು ಹೇಳುತ್ತಾರೆ. ಎಂದರು.

ಜಾತಿ ಗಣತಿ ವಿಚಾರ ಕಾಂಗ್ರೆಸ್ ನಲ್ಲೇ ಜಾತಿ ಗಣತಿ ವಿರೋಧ ಆಗ್ತಿದೆ.ಶಾಮನೂರು ಶಿವಶಂಕರಪ್ಪ, ಸೇರಿದಂತೆ ವೀರಶೈವ ಮಹಾಸಭಾ, ಒಕ್ಕಲಿಗರ ಸಂಘ ವರದಿ ಬಿಡುಗಡೆಗೆ ವಿರೋಧಿಸಿವೆ. ಮುಖ್ಯಮಂತ್ರಿ ಸಭೆಯಲ್ಲಿ ಹೇಳಿದ್ದೀವಿ. ನಾವು ವರದಿ ನೋಡಿದ ಬಳಿಕವೇ ಜಾತಿ ಗಣತಿ ಬಗ್ಗೆ ಮಾತನಾಡುತ್ತೇವೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments