Saturday, August 23, 2025
Google search engine
HomeUncategorizedತಿಂಗಳಿನಿಂದ ಕರೆಂಟ್ ಇಲ್ಲದೆ ಪರದಾಡುತ್ತಿರುವ ಜನ: ಕಣ್ಣೆತ್ತಿ ನೋಡದ ಅಧಿಕಾರಿಗಳು

ತಿಂಗಳಿನಿಂದ ಕರೆಂಟ್ ಇಲ್ಲದೆ ಪರದಾಡುತ್ತಿರುವ ಜನ: ಕಣ್ಣೆತ್ತಿ ನೋಡದ ಅಧಿಕಾರಿಗಳು

ಚಾಮರಾಜನಗರ : ಚಂದ್ರನ ಮೇಲೆ ಖನಿಜಗಳನ್ನು ಹುಡುಕುವ ಮತ್ತು ಮಂಗಳನ ಮೇಲೆ ಮನುಷ್ಯರನ್ನು ಕಳುಹಿಸುವಂತಹ ಯೋಜನೆಗಳನ್ನು ಇಂದು ಜಗತ್ತು ಕೈಗೊಳ್ಳುತ್ತಿದೆ. ಆದರೆ ನಮ್ಮ ಕರ್ನಾಟಕದ ಕೆಲ ಭಾಗಗಳಲ್ಲಿ ಜನರು ವಿದ್ಯುತ್ ಇಲ್ಲದೆ ಪರಿತಪಿಸುತ್ತಿದ್ದಾರೆ ಎಂದರೆ ಬಹುತೇಕರಿಗೆ ನಂಬಲು ಕಷ್ಟವಾಗಬಹುದು. ಆದರೆ ಇದು ನಿಜವಾದ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತುಳಸಿಕೆರೆ ಗ್ರಾಮದಲ್ಲಿ ಜನರು ಕಳೆದ ಒಂದು ತಿಂಗಳಿನಿಂದ ಕರೆಂಟ್ ಇಲ್ಲದೆ  ಕತ್ತಲಲ್ಲೇ ಕಾಲ ಕಳೆಯುತ್ತಿದ್ದಾರೆ. ಜನರು ಬೆಳಕು ಇಲ್ಲ, ಕುಡಿಯುವ ನೀರು ಸಹ ಇಲ್ಲದೆ ಜನರು ಹಳ್ಳದ ನೀರು, ಕೊಲ್ಲಿಯ ಬೆಳಕು ಎನ್ನುವ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಓದಿಗೂ ಕುತ್ತು ಬಂದಿದೆ.

ಸೋಲಾರ್ ಪ್ಲಾಂಟ್ ‌ಕೆಟ್ಟಿರುವ ಪರಿಣಾಮ ಹಲವು ದಿನಗಳಿಂದ ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿರುವ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಹದೇಶ್ವರಬೆಟ್ಟ ಸಮೀಪದ ತುಳಸಿಕೆರೆ ಗ್ರಾಮದಲ್ಲಿ ಕಳೆದ
ಒಂದು ತಿಂಗಳಿನಿಂದ ಕೆಟ್ಟುನಿಂತಿರುವ ಸೋಲಾರ್ ಪ್ಲಾಂಟ್ ಗಳು ಇದ್ದರಿಂದ ಗ್ರಾಮವು ಕಗ್ಗತ್ತಲಿನಲ್ಲಿ ಮುಳುಗಿದೆ.

ಗ್ರಾಮಸ್ಥರು ಸಂಬಧಪಟ್ಟ ಚೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗದೆ ಜನರು ಕತ್ತಲಲ್ಲೇ ಕಾಲ ಕಳೆಯುತ್ತಿದ್ದಾರೆ.ಚುನಾವಣೆ ವೇಳೆ ಬರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗ ಎಲ್ಲಿ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments