Sunday, August 24, 2025
Google search engine
HomeUncategorizedPower tv 6th anniversary : ಗೋಲ್ಡನ್​ ಸ್ಟಾರ್​ ಗಣೇಶ್​​​ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

Power tv 6th anniversary : ಗೋಲ್ಡನ್​ ಸ್ಟಾರ್​ ಗಣೇಶ್​​​ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ನಮಸ್ಕಾರ ನಮಸ್ಕಾರ ನಮಸ್ಕಾರ.. ಕಿರುತೆರೆಯಲ್ಲಿ ಹೀಗೆ ಕಾಮಿಡಿ ಟೈಮ್​​​ನಲ್ಲಿ ನಮಸ್ಕಾರ ಹೇಳುತ್ತಲೇ ಎಂಟ್ರಿ ಕೊಟ್ಟ ಪಾದರಸದಂಥ ಈ ಹುಡುಗ ಸಿಲ್ವರ್​ ಸ್ಕ್ರೀನ್​​ನಲ್ಲಿ ಮಾಡಿದ್ದು ಅಕ್ಷರಶಃ ಚಮತ್ಕಾರ. ಸಿನಿರಂಗದಲ್ಲಿ ಸುರಿದ ಮುಂಗಾರು ಮಳೆಯ ಸಿಂಚನದಲ್ಲಿ ಮಿಂದೇಳದ ಕಲಾರಸಿಕರೇ ಇಲ್ಲ. ಅಷ್ಟರ ಮಟ್ಟಿಗೆ ಈ ಹುಡುಗಾಟದ ಹುಡುಗ ಚಮಕ್​ ಕೊಟ್ಟಿದ್ದಾನೆ. ಚೆಲ್ಲಾಟವಾಡುತ್ತಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಮುಗುಳು ನಗೆಯಿಂದ ಜನ ಬೆನ್ನು ತಟ್ಟಿದ್ರು. ಅದೇ ಖುಷಿಯಲ್ಲಿ ಪಟಾಕಿ ಹೊಡೆದು ಎರಡೆರಡು ಬಾರಿ ಗಾಳಿಪಟ ಹಾರಿಸಿ, 99 ಪರ್ಸೆಂಟ್​ ಸಖತ್​ ಮನರಂಜನೆ ನೀಡಿದ ಈತ ಸುಂದರಾಂಗ ಜಾಣ. ಬಾನ ದಾರಿಯಲ್ಲಿ ಸರ್ಕಸ್​ ಮಾಡುತ್ತಲೇ ಕನ್ನಡಿಗರ ಮನದಲ್ಲಿ ಅರಮನೆ ಕಟ್ಟಿದ ಈತ ಗೋಲ್ಡನ್​ ಸ್ಟಾರ್​ ಗಣೇಶ್​.

ಕರುನಾಡಿನ ಮನೆ ಮನೆಯಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಚಿರಪರಿಚಿತರು. 1980ರ ಜುಲೈ 2ರಂದು ಬೆಂಗಳೂರಿನ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರು. ಡಿಪ್ಲೊಮಾ ಪದವಿ ಪಡೆದಿರೋ ಗಣೇಶ್ ಅವರು​ ಬದುಕು ಕಂಡುಕೊಂಡಿದ್ದು ಮಾತ್ರ ಅಪ್ಪಟ ಕಲಾವಿದರಾಗಿ. ಚಟಪಟ ಅರಳು ಹುರಿದಂತೆ ಮಾತನಾಡುವ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ..

‘ಗುಟ್ಟು’ ಸಾಕ್ಷ್ಯಚಿತ್ರಕ್ಕೆ ಮೊದಲು ಕ್ಯಾಮೆರಾ ಎದುರಿಸಿದ್ದ ಇವರಿಗೆ ಸೀರಿಯಲ್‍ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದ್ರೆ ಜನಪ್ರಿಯತೆ ತಂದು ಕೊಟ್ಟಿದ್ದು ‘‘ಕಾಮಿಡಿ ಟೈಮ್’’. ಅಲ್ಲಿಂದಲೇ ಶುರುವಾಗಿತ್ತು ಇವರ ಫ್ಯಾನ್​ ಫಾಲೋಯಿಂಗ್​.. ಅಂದು ಇವರ ನಮಸ್ಕಾರ ನಮಸ್ಕಾರ ನಮಸ್ಕಾರ ಟ್ರೆಂಡ್​ ಸೆಟ್ಟಿಂಗ್​ ಆಗಿತ್ತು. ಅದರಿಂದ ಸಿಕ್ಕ ಚಿಕ್ಕಪುಟ್ಟ ಸಿನಿಮಾಗಳಲ್ಲಿ ಸೈಕಲ್​ ತುಳಿದ ಇವರಿಗೆ ನಾಯಕ ನಟನಾಗಿ ನೇಮು, ಫೇಮು ತಂದುಕೊಟ್ಟಿದ್ದೇ 2006ರಲ್ಲಿ ತೆರೆಕಂಡ ಬ್ಲಾಕ್​ ಬಸ್ಟರ್​ ಚಿತ್ರ ಮುಂಗಾರು ಮಳೆ ಚಿತ್ರ.

ಅಂದಿನಿಂದ ಈವರೆಗೆ ನಾಯಕರಾಗಿ 36ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಹಿಟ್​ ಚಿತ್ರಗಳನ್ನ ನೀಡಿದ್ದಾರೆ. ಇತ್ತೀಚೆಗೆ ತೆರೆಕಂಡ ಕೃಷ್ಣಂ ಪ್ರಣಯಸಖಿ ಸೂಪರ್ ಡೂಪರ್ ಹಿಟ್ ಆಗಿದೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಇವರ ಚಿತ್ರಗಳಿಂದಾಗಿ, ಫ್ಯಾಮಿಲಿ ಎಂಟರ್​ಟೈನರ್​ ಅಂತಾನೇ ಫೇಮಸ್ಸಾಗಿದ್ದಾರೆ. ಸಿನಿರಂಗದ ಜೊತೆಗೆ ಹಲವು ರಿಯಾಲಿಟಿ ಶೋಗಳ ಹೋಸ್ಟ್​ ಕೂಡ ಆಗಿಯೂ ಜನ ಮನ ಗೆದ್ದಿರುವುದು ಇವರ ವಿಶೇಷತೆ.

ಗೋಲ್ಡನ್ ಸ್ಟಾರ್ ಗಣೇಶ್ 2008ರಲ್ಲಿ ಶಿಲ್ಪಾ ಅವರನ್ನು ವಿವಾಹವಾದರು. ಈ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ಮಕ್ಕಳು ಕೂಡ ಬಾಲನಟರಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿ ರಂಗದಲ್ಲಿ ಯಾವುದೇ ಗಾಡ್​ ಫಾದರ್​ ಇಲ್ಲದೇ ಝೀರೋ ಟು ಹೀರೋ ಆಗಿರುವ ಗಣೇಶ್ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಪ್ರತಿಭಾವಂತ ಕಲಾವಿದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಪವರ್​ ಟಿವಿ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಲು ಅತ್ಯಂತ ಹರ್ಷ ಪಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments