Tuesday, August 26, 2025
Google search engine
HomeUncategorizedBlack Paper: ಬಿಜೆಪಿಯ ಶ್ವೇತಪತ್ರಕ್ಕೆ ಬದಲಾಗಿ ‘ಕಪ್ಪುಪತ್ರ’ ಹೊರಡಿಸಿದ ಮಲ್ಲಿಕಾರ್ಜನ ಖರ್ಗೆ

Black Paper: ಬಿಜೆಪಿಯ ಶ್ವೇತಪತ್ರಕ್ಕೆ ಬದಲಾಗಿ ‘ಕಪ್ಪುಪತ್ರ’ ಹೊರಡಿಸಿದ ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮೊದಲೇ ಬಿಜೆಪಿ ಹಾಗೂ ಕಾಂಗ್ರೆಸ್ ತೆರಿಗೆ ಹಂಚಿಕೆ ಸೇರಿ ಹಲವು ವಿಷಯಗಳಲ್ಲಿ ವಾದ-ವಿವಾದ ಮಧ್ಯೆ ಜಟಾಪಟಿ ಆರಂಭವಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ಸಂಸತ್ತಿನಲ್ಲಿ ಕಪ್ಪುಪತ್ರವನ್ನು ಹೊರಡಿಸುವ ಮೂಲಕ ಆಡಳಿತಾರೂಢ ಪಕ್ಷಕ್ಕೆ ತಿರುಗೇಟು ನೀಡಿದೆ.

ಹೌದು,10 ವರ್ಷ ಅನ್ಯಾಯ ಕಾಲ ಎಂಬ ಪೋಸ್ಟರ್‌ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ. ಯುಪಿಎ 1 ಹಾಗೂ ಯುಪಿಎ 2ನೇ ಅವಧಿಯಲ್ಲಿ ದೇಶದಲ್ಲಾದ ಆರ್ಥಿಕ ನಿರ್ವಹಣೆ ಕೊರತೆ, ತಪ್ಪು ನಿರ್ಧಾರಗಳು, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಲು ಮುಂದಾಗಿದೆ.

ಇದಕ್ಕೆ ಪ್ರತಿಯಾಗಿ ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಕಾಂಗ್ರೆಸ್‌ ಕೂಡ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಅನ್ಯಾಯ ಕಾಲ ಪೋಸ್ಟರ್‌ ಬಿಡುಗಡೆ

ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧʼ 10 ವರ್ಷ ಅನ್ಯಾಯ ಕಾಲʼ ಎಂಬ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. “ಕೇಂದ್ರ ಸರ್ಕಾರವು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿದೆ. ಇದರಿಂದಾಗಿ ದೇಶದ ಬಡವರು ಬಸವಳಿದಿದ್ದಾರೆ.

2014-24ರವರೆಗೆ ಬಿಜೆಪಿ ಆಡಳಿತವು ವಿಫಲವಾಗಿದೆ. ರೈತರ ವಿಷಯದಲ್ಲೂ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಕನಿಷ್ಠ ಬೆಂಬಲ ನೀಡಿಲ್ಲ, ರೈತರ ಆದಾಯ ದ್ವಿಗುಣ ಮಾಡಿಲ್ಲ.” ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ಹಸಿ ಹಸಿ ಸುಳ್ಳುಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಅವರು ಭಾಷೆಯನ್ನು ಅಸ್ತ್ರವಾಗಿ ಬಳಸಿಕೊಂಡು, ಭಾಷಣ ಮಾಡಿಕೊಂಡು ಜನರ ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಆದರೆ, ದೇಶದ ಯುವಕರಿಗೆ ಉದ್ಯೋಗ, ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹಣಿಯಲಾಗುತ್ತಿದೆ. ಪ್ರತಿಪಕ್ಷ ನಾಯಕರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಖರ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹುಕ್ಕಾ ಸೇವನೆ ಹಾಗೂ ಮಾರಾಟ ನಿಷೇಧ

ಕೇಂದ್ರ ಅಥವಾ ರಾಜ್ಯ ಸರ್ಕಾರದ ಆದಾಯ, ಖರ್ಚು ಸೇರಿ ಎಲ್ಲ ಆರ್ಥಿಕ ಚಟುವಟಿಕೆಗಳು, ಸಾಧನೆಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುವುದನ್ನೇ ಶ್ವೇತಪತ್ರ ಎನ್ನುತ್ತಾರೆ. ಆದರೆ, ಸಂಸತ್‌ನಲ್ಲಿ ಕಪ್ಪುಪತ್ರ ಹೊರಡಿಸುವ ಪ್ರಕ್ರಿಯೆ, ನಿಯಮ ಇಲ್ಲ. ಇದನ್ನು, ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯ ದ್ಯೋತಕವಾಗಿಯೂ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ಆರ್ಥಿಕ ಪ್ರಗತಿ ಕುರಿತು ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಲು ಸಂಸತ್‌ ಬಜೆಟ್‌ ಅಧಿವೇಶನವನ್ನು ಒಂದು ದಿನ ಮುಂದೂಡಿದೆ ಎಂದು ತಿಳಿದುಬಂದಿದೆ. ಜನವರಿ 31ರಂದು ಆರಂಭವಾದ ಸಂಸತ್‌ ಬಜೆಟ್‌ ಅಧಿವೇಶನವು ಫೆಬ್ರವರಿ 9ರಂದು ಮುಗಿಯಬೇಕಿತ್ತು. ಆದರೆ, ಕಲಾಪವನ್ನು ಒಂದು ದಿನ ಮುಂದೂಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments