Tuesday, August 26, 2025
Google search engine
HomeUncategorizedಡಿ.4ರಿಂದ ಸಂಸತ್ ಚಳಿಗಾಲದ ಅಧಿವೇಶನ : ಸರ್ವ ಪಕ್ಷಗಳ ಸಹಕಾರ ಕೋರಿದ ಕೇಂದ್ರ ಸರ್ಕಾರ

ಡಿ.4ರಿಂದ ಸಂಸತ್ ಚಳಿಗಾಲದ ಅಧಿವೇಶನ : ಸರ್ವ ಪಕ್ಷಗಳ ಸಹಕಾರ ಕೋರಿದ ಕೇಂದ್ರ ಸರ್ಕಾರ

ನವದೆಹಲಿ : ಡಿಸೆಂಬರ್ 4ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಹೀಗಾಗಿ, ದೆಹಲಿಯಲ್ಲಿ ಇಂದು ಸರ್ವ ಪಕ್ಷಗಳ ಸಭೆಯನ್ನು ಕೇಂದ್ರ ಸರ್ಕಾರ ಕರೆದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 30ಕ್ಕೂ ಹೆಚ್ಚು ಸರ್ವ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎರಡು ಕಲಾಪಗಳು ಸುಗಮವಾಗಿ ನಡೆಯುವಂತೆ ಕೇಂದ್ರ ಸರ್ಕಾರ ಸಹಕಾರವನ್ನು ಕೋರಿದೆ.

ಸೋಮವಾರದಿಂದ ಮೋದಿ ಸರ್ಕಾರದ ಸಂಸತ್​ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಇದಕ್ಕೂ ಮುನ್ನ ಸಂಸತ್ತಿನ ಉಭಯ ಪಕ್ಷಗಳ ಸಭೆಯನ್ನು ನಡೆಸಲಾಯಿತು. ಸಂಸತ್ ನ ಲೈಬ್ರರಿ ಬಿಲ್ಡಿಂಗ್ ನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗಿಯಾಗಿದ್ದರು. ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪ್ರಮೋದ್ ತಿವಾರಿ, ಜೆಎಂಎಂ ಸಂಸದ ಮಹುವಾ ಮಜಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಸದ್ಯ ಸಂಸತ್ತಿನಲ್ಲಿ 37 ವಿಧೇಯಕಗಳು ಅನುಮೋದನೆಗೆ ಬಾಕಿ ಉಳಿದಿವೆ. ಅವುಗಳಲ್ಲಿ 12 ಮಸೂದೆಗಳನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ವಿಧೇಯಕಗಳಿವೆ. ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಸಾಕ್ಷಿ ಕಾಯಿದೆಯು ಒಳಗೊಂಡಿದೆ. ಜೊತೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ್ದಾಗಿದೆ. ಈ ಮಸೂದೆಯು CEC ಮತ್ತು ECಗಳ ಸ್ಥಾನಮಾನವನ್ನು ಕ್ಯಾಬಿನೆಟ್ ಕಾರ್ಯದರ್ಶಿಯ ಸ್ಥಾನಮಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ಈ ಎರಡು ಹುದ್ದೆಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದೆ.

6:4 ಬಹುಮತದೊಂದಿಗೆ ಮೊದಲ ವರದಿ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗೆ ಲಂಚ ಆರೋಪದ ಕುರಿತು ನೈತಿಕ ಸಮಿತಿಯ ವರದಿಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಮಂಡಿಸಲು ಸಿದ್ದತೆ ಮಾಡಿ ಮಾಡಲಾಗಿದೆ.ಲೋಕಸಭೆಯ ಸೆಕ್ರೆಟರಿಯೇಟ್‌ನಿಂದ ಪ್ರಸಾರವಾದ ಅಜೆಂಡಾ ಪೇಪರ್‌ಗಳ ಪ್ರಕಾರ, ನೀತಿಶಾಸ್ತ್ರ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು 6:4 ಬಹುಮತದೊಂದಿಗೆ ಸಮಿತಿಯ ಮೊದಲ ವರದಿಯನ್ನು ಸದನದಲ್ಲಿ ಮಂಡಿಸಲಿದ್ದಾರೆ.

ಮಹುವಾ ಪ್ರಕರಣ ಸದ್ದು ಮಾಡುವುದು ಗ್ಯಾರಂಟಿ

ಮೊಹಿತ್ರಾಗೆ ಸಂಬಂಧಿಸಿದ ವರದಿಯನ್ನು ಬೆಂಬಲಿಸುವ ಸದಸ್ಯರಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಮೊದಲಿಗರು. ಸದ್ಯ ಈಗ ಬಿಜೆಪಿಯಲ್ಲಿದ್ದಾರೆ. ಕರಡು ವರದಿಯ ಪ್ರಕಾರ ಮಹುವಾ ಮೊಯಿತ್ರಾ ಅವರು ಕಠಿಣ ಶಿಕ್ಷೆಗೆ ಗುರಿಯಾಗುವ ಗಂಭೀರ ಕೃತ್ಯ ಎಸಗಿರುವುದು ವರದಿಯಲ್ಲಿದೆ. ಈ ವರದಿಯಿಂದಾಗಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಹದಿನೇಳನೇ ಲೋಕಸಭೆಯ ಸದಸ್ಯತ್ವದಿಂದ ಹೊರಹಾಕಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ‌. ಹಾಗಾಗಿ, ಈ ಸಲ ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹುವಾ ಪ್ರಕರಣ ಸದ್ದು ಮಾಡುವುದಂತೂ ಗ್ಯಾರಂಟಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments