ಬೆಂಗಳೂರು: ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ. ಹಿಂದುತ್ವವೆಂದರೆ ದಲಿತರನ್ನು ಹೊರಗಿಡುವ ಜಾತಿತ್ವ ಅಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ. ಚುನಾವಣೆಗೆ ಮೊದಲು ಮತ್ತು ನಂತರದಲ್ಲಿ ದಲಿತರಿಗೆ ಸ್ಥಾನ ನೀಡಿ ಎನ್ನುತ್ತಿದ್ದ ಬಿಜೆಪಿಗರು ವಿಪಕ್ಷೀಯ ಸ್ಥಾನಕ್ಕೆ ಅಥವಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನೇ ನೇಮಿಸಬಹುದು ಎಂದುಕೊಂಡಿದ್ದೆ.ಆದರೆ ಅದು ಹಾಗಾಗಲಿಲ್ಲ ಎಂದರು.
ಇದನ್ನೂ ಓದಿ: ಭಾರತದ 3ನೇ ವಿಕೆಟ್ ಪತನ : ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಔಟ್
ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ ಎಂದು ಮತ್ತೊಮ್ಮೆ ಸಾಬೀತಾಯಿತು. ದಲಿತ ವಿರೋಧಿ ಬಿಜೆಪಿ ಎಂದು ಡಾ. ಹೆಚ್.ಸಿ. ಮಹದೇವಪ್ಪ ಹೇಲಿದ್ಧಾರೆ.
ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ pic.twitter.com/zzLYkPS7Vj
— Dr H C Mahadevappa(Buddha Basava Ambedkar Parivar) (@CMahadevappa) November 18, 2023