Wednesday, August 27, 2025
Google search engine
HomeUncategorized'ಪವರ್' ಬೇಟೆ : ಸ್ಟಿಂಗ್ ಆಪರೇಷನ್​ಗೆ 'ಹೈ' ಗ್ರೀನ್ ಸಿಗ್ನಲ್

‘ಪವರ್’ ಬೇಟೆ : ಸ್ಟಿಂಗ್ ಆಪರೇಷನ್​ಗೆ ‘ಹೈ’ ಗ್ರೀನ್ ಸಿಗ್ನಲ್

ಬೆಂಗಳೂರು : ಪವರ್​​​​​​​ ಟಿವಿ ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್ ಸಿಕ್ಕಿದೆ. ಲಂಚಬಾಕರ ವಿರುದ್ಧದ ಸ್ಟಿಂಗ್‌ಗೆ ಐತಿಹಾಸಿಕ ಜಯ ಸಿಕ್ಕಿದ್ದು, ಕುಟುಕು ಕಾರ್ಯಾಚರಣೆಗೆ ಹೈಕೋರ್ಟ್‌ ಸಮ್ಮತಿ ನೀಡಿದೆ.

2022ರ ಜೂನ್ 10ರಂದು ಬೆಂಗಳೂರಿನ 8 ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್​​ಗಳ ಲಂಚಾವತಾರವನ್ನ ನಿಮ್ಮ ಪವರ್ ಟಿವಿ ಬಯಲು ಮಾಡಿತ್ತು. ಲಾರಿಗಳನ್ನ ತಡೆದು ಲಂಚ ಸ್ವೀಕರಿಸುತ್ತಿದ್ದ ದೃಶ್ಯ ಸೆರೆ ಹಿಡಿದು, ಲಂಚಾವತಾರದ ದೃಶ್ಯ ಆಧರಿಸಿ ಪ್ರಕರಣ ದಾಖಲು ಮಾಡಲಾಗಿತ್ತು. ಇನ್ನು ಪ್ರಕರಣ ರದ್ದುಕೋರಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.

ಆದ್ರೆ ಇದೀಗ ಸ್ಟಿಂಗ್ ಆಪರೇಷನ್‌ಗೆ ಹೈಕೋರ್ಟ್ ಅನುಮತಿ ಕೊಟ್ಟಿದೆ. ನ್ಯಾ.ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದಲ್ಲಿ ಸ್ಟಿಂಗ್‌ ಆಪರೇಷನ್‌ ಮಾಡಬಹುದು ಎಂದು ಹೈಕೋರ್ಟ ತಿಳಿಸಿದೆ. ಈ ಮೂಲಕ ಪವರ್‌ ಟಿವಿ ಬೇಟೆಯಿಂದ ಭ್ರಷ್ಟರಿಗೆ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ. ಇದು ಪವರ್​ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್.

ಸಿಕ್ಕಿಬಿದ್ದಿದ್ದ ಲಂಚಬಾಕ ಅಧಿಕಾರಿಗಳು

  • ಯಲಹಂಕ ಸಂಚಾರಿ ಉಪ ವಿಭಾಗ ACP ಅಶೋಕ್
  • ಮಲ್ಲೇಶ್ವರ ಸಂಚಾರಿ ಉಪ ವಿಭಾಗ ACP ನಾಗೇಶ್
  • ದಕ್ಷಿಣ ವಿಭಾಗದ ಟ್ರಾಫಿಕ್‌ ACP ಶ್ರೀನಿವಾಸ್‌
  • ಹೆಬ್ಬಾಳ ಸಂಚಾರಿ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್
  • ಚಿಕ್ಕಜಾಲ ಟ್ರಾಫಿಕ್‌ ಠಾಣೆ ಇನ್ಸ್‌ಪೆಕ್ಟರ್‌ ಜಗದೀಶ್
  • ರಾಜಾಜಿನಗರ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಶಿವರತ್ನ
  • ಬ್ಯಾಟರಾಯನಪುರ ಠಾಣೆ ಇನ್ಸ್‌ಪೆಕ್ಟರ್‌ ರೂಪಾ ಹಡಗಲಿ
  • ಹುಳಿಮಾವು ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್
  • ಕುಮಾರಸ್ವಾಮಿ ಲೇಔಟ್‌ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ವೆಂಕಟೇಶ್
  • ಸುಬ್ರಮಣ್ಯನಗರ ಟ್ರಾಫಿಕ್ ಇನ್ಸ್‌ಪೆಕ್ಟರ್‌ ಗಿರೀಶ್‌ ಕುಮಾರ್
  • ಕೆಂಗೇರಿ ಠಾಣೆ ಟ್ರಾಫಿಕ್‌ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ್‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments