Thursday, August 28, 2025
HomeUncategorizedನನಗೆ ನಿಮ್ಮ ಭಯವಿಲ್ಲ, ಅಣ್ಣಪ್ಪ-ಮಂಜುನಾಥನ ಭಯ ಇದೆ : ಡಾ. ವೀರೇಂದ್ರ ಹೆಗ್ಗಡೆ

ನನಗೆ ನಿಮ್ಮ ಭಯವಿಲ್ಲ, ಅಣ್ಣಪ್ಪ-ಮಂಜುನಾಥನ ಭಯ ಇದೆ : ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ನನಗೆ ಜನರ ಭಯವಿಲ್ಲ. ಅಣ್ಣಪ್ಪ, ಶ್ರೀ ಮಂಜುನಾಥನ ಭಯ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮಸಂರಕ್ಷಣಾ ‌ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ದೇವತೆಗಳ ಮುಂದೆ ನಿಲ್ಲಬೇಕಾದ್ರೆ ನೈತಿಕ ಬಲಬೇಕು. ಸತ್ಯ, ನ್ಯಾಯ ಪರವಾಗಿದ್ದೇನೆ. ನಿಮ್ಮ ತಿಳುವಳಿಕೆಯಿಂದ ತಪ್ಪಾಗಿದ್ರೆ ಕೂಡಲೇ ಶಿಕ್ಷೆ ಕೊಡುತ್ತೇನೆ ಅಂತ ಧರ್ಮ ದೇವತೆಗಳು‌ ಹೇಳುತ್ತಾರೆ. ಆದರೆ, ತಿಳಿಯದೇ ತಪ್ಪಾಗಿದ್ರೆ ವರ್ಷ ಕಾಯುತ್ತೇನೆ ಅಂತ ಹೇಳುತ್ತಾರೆ. ಒಳಗಡೆ ಇರೋ ಮಂಜುನಾಥ ಸ್ವಾಮಿ ತಾಳ್ಮೆಯಲ್ಲಿದ್ದಾರೆ. ಅದಕ್ಕೆ ನಾನು ಶಾಂತವಾಗಿದ್ದೀನಿ ಎಂದು ಹೇಳಿದರು.

ನನಗೆ ನಿಂದನೆಯಿಂದ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸ್ವಾಸ್ತ್ಯ ಸಂಕಲ್ಪವನ್ನು ಮಾಡಬೇಕು. ಭಜನೆ ಸೇರಿ ಎಲ್ಲಾ ಕಾರ್ಯಕ್ರಮವನ್ನು ನಾವು ಮಾಡೋಣ. ಬಿರುಗಾಳಿ ಬಂದಾಗ ಎಲ್ಲಾ ಹಾರಿಹೋಗುತ್ತದೆ. ರಸ್ತೆ ಸೇರಿ ಎಲ್ಲವೂ ಸ್ವಚ್ಚವಾಗುತ್ತದೆ. ಇದೀಗ ನೀವು ಬಿರುಗಾಳಿಯಂತೆ ಬಂದಿದ್ದೀರಿ. ಯಾವ ಹಿಂದೂ ಕ್ಷೇತ್ರಕ್ಕೆ ಹಾನಿಯಾಗಬಾರದು. ಬೆಂಗಳೂರು, ಧಾರವಾಡ ಸೇರಿ ಹಲವು ಭಾಗದಿಂದ ಬಂದಿದ್ದೀರಿ. ದೇಶವನ್ನು ಹಾಳು ಮಾಡಬೇಕಾದ್ರೆ ಸಂಸ್ಕ್ರತಿ ನಾಶ ಮಾಡಿದ್ರೆ ಸಾಕು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಪವರ್​ ಟಿವಿಗೆ ಶ್ರೀಗಳ ಧನ್ಯವಾದ

ನ್ಯಾಯಾಲಯ ಇದೆ, ಎಲ್ಲ ಇದೆ ಅದಕ್ಕೆ ಒಪ್ಪಿಸಿ. ಕಾನೂನಿನ ಪ್ರಕಾರ ಎಲ್ಲವೂ ಆಗಲಿ. ಆದರೆ, ಕಾನೂನು ಬಿಟ್ಟು ಮಾತಾಡೋದು ನಿಲ್ಲಬೇಕು. ಎರಡು ಶಕ್ತಿಗಳ ಉಲ್ಲೇಶಿಸಿದ ಡಾ. ವೀರೇಂದ್ರ ಹೆಗ್ಗಡೆ ಅವರು, ಒಂದು ಬೆಂಗಳೂರು ಮತ್ತೊಂದು ಕುಂದಾಪುರ. ನಿಮ್ಮನ್ನು ಮಂಜುನಾಥ ಸ್ವಾಮಿ ಕಾಯುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಪವರ್ ಟಿವಿ ಎಂ.ಡಿ ರಾಕೇಶ್​ ಶೆಟ್ಟಿಯವರನ್ನ ಉಲ್ಲೇಖಿಸಿ ಧನ್ಯವಾದಗಳನ್ನು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments