Friday, September 12, 2025
HomeUncategorizedಭಾರತ ತಂಡವೇ ವಿಶ್ವಕಪ್ ಗೆಲ್ಲುತ್ತದೆ : ಮೊಹಮ್ಮದ್ ಅಜರುದ್ದೀನ್ ಭವಿಷ್ಯ

ಭಾರತ ತಂಡವೇ ವಿಶ್ವಕಪ್ ಗೆಲ್ಲುತ್ತದೆ : ಮೊಹಮ್ಮದ್ ಅಜರುದ್ದೀನ್ ಭವಿಷ್ಯ

ಧಾರವಾಡ : ಭಾರತ ತಂಡವೇ ವಿಶ್ವಕಪ್ ಗೆಲ್ಲುತ್ತದೆ. ನಮ್ಮದು ಒಳ್ಳೆಯ ತಂಡ ಇದೆ, ಒಳ್ಳೆಯ ನಾಯಕ ಇದಾರೆ. ಹೀಗಾಗಿ, ವಿಶ್ವಕಪ್ ಗೆಲ್ಲುವ ವಿಶ್ವಾಸ ಇದೆ ಎಂದು ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಭವಿಷ್ಯ ನುಡಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ತಂಡದ ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹೋಗುವಾಗ ಜೈ ಶ್ರೀರಾಮ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ರೀತಿಯ ವಿಚಾರಗಳಿಗೆ ಪ್ರತಿಕ್ರಿಯೆಸಲು ನಾನು ಇಷ್ಟಪಡುವುದಿಲ್ಲ. ಈ ತರಹದ ಘಟನೆಗಳು ಪುನರಾವರ್ತನೆ ಆಗುತ್ತಲೇ ಇವೆ ಎಂದು ಬೇಸರಿಸಿದರು.

ಪಂಚ ರಾಜ್ಯ ಚುನಾವಣೆ ವಿಚಾರ ಕುರಿತು ಮಾತನಾಡಿ, ಈ ಸಲ ನಾವೇ ಸರ್ಕಾರ ಮಾಡುತ್ತೇವೆ. ನಮ್ಮ ಪ್ರಯತ್ನ ಹೆಚ್ಚು ವಿಶ್ವಾಸ ಮೂಡಿಸಿದೆ. ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಸದ್ಯ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನ ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದಾರೆ

ಕರ್ನಾಟಕದ ಉಚಿತ ಗ್ಯಾರಂಟಿ ಯೋಜನೆ, ತೆಲಂಗಾಣ ಗ್ಯಾರಂಟಿ ಯೋಜನೆಗಳಲ್ಲಿ ವ್ಯತ್ಯಾಸವಿದೆ. ಎರಡರಲ್ಲಿಯೂ ಬಹಳಷ್ಟು ವ್ಯತ್ಯಾಸವಿದೆ. ಎರಡಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ.ಕರ್ನಾಟಕದಲ್ಲಿ ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಇಲ್ಲಿನ ಜನ ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ, ಇಲ್ಲಿ ಅಭಿವೃದ್ಧಿ ಕಾರ್ಯಗಳು ಚೆನ್ನಾಗಿ ಆಗುತ್ತಿವೆ ಎಂದು ಮೊಹಮ್ಮದ್​ ಅಜರುದ್ದೀನ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments