Monday, August 25, 2025
Google search engine
HomeUncategorizedನನಗೆ ಒಂದು ಮಾತು ಹೇಳದೇ ದೆಹಲಿಗೆ ಹೋದ್ರಿ : HDK ನಡೆಗೆ ಇಬ್ರಾಹಿಂ ಬೇಸರ

ನನಗೆ ಒಂದು ಮಾತು ಹೇಳದೇ ದೆಹಲಿಗೆ ಹೋದ್ರಿ : HDK ನಡೆಗೆ ಇಬ್ರಾಹಿಂ ಬೇಸರ

ಬೆಂಗಳೂರು : ಕುಮಾರಸ್ವಾಮಿಯವರೇ, ನನಗೆ ಒಂದು ಮಾತು ಹೇಳದೇ ದೆಹಲಿಗೆ ಹೋದ್ರಿ. ಏನು ಚರ್ಚಿಸಿದ್ದೀರಿ, ಈವರೆಗೂ ಮಾಹಿತಿ ಬಂದಿಲ್ಲ. ನಾನು ಪಕ್ಷದ ಅಧ್ಯಕ್ಷ, ಪಕ್ಷದಲ್ಲಿ ಎಲ್ಲಿ ಚರ್ಚೆಯಾಗಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಹೆಚ್​ಡಿಕೆ ನಡೆಗೆ ಸಿ.ಎಂ. ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಜತೆ ಇಲ್ಲಿಯವರೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ಸಹೋದರ, ದೇವೇಗೌಡರು ತಂದೆ ಸಮಾನ ಎಂದು ಹೇಳಿದ್ದಾರೆ.

ಶೇಕಡಾ 20ರಷ್ಟು ಮುಸ್ಲಿಂ ಮತ ಜೆಡಿಎಸ್​ಗೆ ಬಂದಿದೆ. ಒಕ್ಕಲಿಗ ಮತ ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ. ಪಕ್ಷದ ತೀರ್ಮಾನ ಅಂತ ಕರೆಯಲು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಬೇಕು. ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಸಭೆ ನಡೆಸಿ ತೀರ್ಮಾನ ಅಂದ್ರಿ. ಆದ್ರೆ, ನನ್ನ ಜತೆ ಮಾತನಾಡಿಲ್ಲ. ಅಕ್ಟೋಬರ್ 16ನೇ ತಾರೀಖು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಜೆಡಿಎಸ್​ ಪಕ್ಷ ಸೇರಲು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಕಾರಣ. ಸೆಕ್ಯುಲರ್ ಸಿದ್ಧಾಂತ ಅಂತ ಪಕ್ಷಕ್ಕೆ ಹೋದೆ. ಅಂದು ವಿಧಾನ ಪರಿಷತ್ ಸದಸ್ಯ ಸ್ಥಾನ ಬಿಟ್ಟು ಹೋದೆ. ಪಕ್ಷದ ಅಧ್ಯಕ್ಷ ನಾಗಿದ್ದೇನೆ ಎಂದು ಬಹಿರಂಗವಾಗಿಯೇ ದಳಪತಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments