Tuesday, September 16, 2025
HomeUncategorizedತವರಿನಲ್ಲಿ ಯುವರಾಜ್ ಸಿಂಗ್ ಪ್ರತಿಮೆ ಅನಾವರಣ!

ತವರಿನಲ್ಲಿ ಯುವರಾಜ್ ಸಿಂಗ್ ಪ್ರತಿಮೆ ಅನಾವರಣ!

ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಅವರ ಪ್ರತಿಮೆ ಪಂಜಾಬ್​ನ ಫಿರೋಜ್ಪುರ್​ ಕ್ರಿಕೆಟ್​ ಸ್ಟೇಡಿಯಂ ಬಳಿ ತಲೆ ಎತ್ತಿದೆ. ವಿಶ್ವಕಂಡ ಅದ್ಭುತ ಕ್ರಿಕೆಟಿಗ ಯುವಿಯ ತವರಲ್ಲೇ ಅವರ ಪ್ರತಿಮೆ ಅನಾವರಣಗೊಂಡಿದ್ದು, ಯುವ ಕ್ರಿಕೆಟಿಗರಿಗೆ ಪ್ರೇರಣೆ ಆಗಲಿ ಅನ್ನೋ ಉದ್ದೇಶದಿಂದ ನಿರ್ಮಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ 2007ರ ಟಿ20 ಹಾಗೂ 2011ರ ಒಡಿಐ ವರ್ಲ್ಡ್​ಕಪ್ ಗೆಲ್ಲುವಲ್ಲಿ ಪ್ರಮುಖಪಾತ್ರವಹಿಸಿದ್ದ ಯುವರಾಜ್​ ಸಿಂಗ್​ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ. ರಿಯಲ್ ಫೈಟರ್ ಯುವಿ ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅವರ ಹಾದೀಲಿ ಯುವ ಕ್ರಿಕೆಟಿಗರು ಸಾಗಲಿ ಎಂಬ ಕನಸು ಫಿರೋಜ್ಪುರ್​ ಕ್ರಿಕೆಟ್​ ಸ್ಟೇಡಿಯಂ ಅಧಿಕಾರಿಗಳದ್ದು. ಹೀಗಾಗಿ ತವರಿನ ಕಣ್ಮಣಿ ಯುವಿಗೆ ಗೌರವ ನೀಡುವ ಇಚ್ಛೆ ಹಾಗೂ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಪ್ರತಿಮೆ ಅನಾವರಣ ಮಾಡಲಾಗಿದೆ.
ಯುವಿ ಟೀಮ್ ಇಂಡಿಯಾ ಪರ 304 ಏಕದಿನ ಪಂದ್ಯಗಳಿಂದ 14 ಶತಕ ಹಾಗೂ 52 ಅರ್ಧಶತಕಗಳು ಸೇರಿದಂತೆ ಒಟ್ಟು 8,701ರನ್, 40 ಟೆಸ್ಟ್​ ಪಂದ್ಯಗಳಿಂದ 3 ಶತಕ ಮತ್ತು 11 ಅರ್ಧಶತಕದೊಂದಿಗೆ 1,900ರನ್ ಹಾಗೂ 58 ಟಿ20 ಪಂದ್ಯಗಳಿಂದ 8 ಅರ್ಧಶತಕದೊಂದಿಗೆ 1,177ರನ್ ಗಳಿಸಿದ್ದು, ಸಿಕ್ಸರ್ ಕಿಂಗ್ ಎಂದೇ ಜನಪ್ರಿಯರು.
ಕ್ಯಾನ್ಸರಿಂದ ಬಳಲುತ್ತಿದ್ದರೂ ಛಲ ಬಿಡದೆ 2011ರ ವರ್ಲ್ಡ್​​ಕಪ್​ನಲ್ಲಿ ಅತ್ಯುತ್ತಮ ಆಲ್​ರೌಂಡ್​ ಪ್ರದರ್ಶನ ನೀಡಿದ್ದರು. ಬಳಿಕ ಕ್ಯಾನ್ಸರ್ ವಿರುದ್ಧ ಹೋರಾಡಿ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಆಗಿದ್ದೂ ಕೂಡ ನಿಜಕ್ಕೂ ಸ್ಫೂರ್ತಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments