Thursday, August 28, 2025
HomeUncategorizedದೇಶಪ್ರೇಮಿ ರಾಯಣ್ಣನ ಹೆಸರಲ್ಲಿ 110 ಎಕರೆಯಲ್ಲಿ ಸೈನಿಕ ಶಾಲೆ : ಸಿಎಂ ಸಿದ್ದರಾಮಯ್ಯ

ದೇಶಪ್ರೇಮಿ ರಾಯಣ್ಣನ ಹೆಸರಲ್ಲಿ 110 ಎಕರೆಯಲ್ಲಿ ಸೈನಿಕ ಶಾಲೆ : ಸಿಎಂ ಸಿದ್ದರಾಮಯ್ಯ

ಮೈಸೂರು: ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15, ನೇಣು ಹಾಕಿದ್ದು ಜನವರಿ 26. ಅಂದೇ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇದು ಕಾಕತಾಳೀಯವಾದರೂ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ಉತ್ತನಹಳ್ಳಿಯ ಶ್ರೀ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಸಂಗೊಳ್ಳಿಯಲ್ಲಿ 110 ಎಕರೆ ಜಾಗನೀಡಿ ಅಲ್ಲಿ ಸೈನಿಕ ಶಾಲೆಯನ್ನು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ತೆರೆಯಲಾಗಿದೆ. ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ, ಪ್ರಾಧಿಕಾರ ಮಾಡಲಾಗಿದ್ದು 285 ಕೋಟಿ ರೂ.ಗಳ ವೆಚ್ಚದಲ್ಲಿ ಆಗಿದೆ. ಅವರ ಜ್ಞಾಪಕಾರ್ಥವಾಗಿ ಇದನ್ನು ಮಾಡಲಾಗಿದೆ. ಜನರು ಅಲ್ಲಿಗೆ ಭೇಟಿ ನೀಡಬೇಕಂದು ಸಲಹೆ ನೀಡಿದರು. ಅಪ್ರತಿಮ ದೇಶಭಕ್ತನ ಪ್ರತಿಮೆಯನ್ನು ಸ್ಥಾಪಿಸಿ ಅನಾವರಣವಾಗಿರುವುದು ಸಂತಸದ ಸಂಗತಿ ಎಂದರು.

ಹೆಲಗೆಹುಂಡಿಯಲ್ಲಿ ಕೆಲಸಗಳಾಗಿಲ್ಲ. ವಿಶೇಷ ಅನುದಾನ ನೀಡಿ ಇಲ್ಲಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments