Wednesday, August 27, 2025
HomeUncategorizedಇಸ್ರೋ ಸಾಧನೆಗೆ ಮೋದಿ ಬಹುಪರಾಕ್

ಇಸ್ರೋ ಸಾಧನೆಗೆ ಮೋದಿ ಬಹುಪರಾಕ್

ಬೆಂಗಳೂರು : ಚಂದಿರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಹೆಜ್ಜೆಯಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ವಿಕ್ರಮ್ ಲ್ಯಾಂಡರ್ ಸಂಜೆ 6.04ಕ್ಕೆ ಸರಿಯಾಗಿ ಚಂದಿರನನ್ನು ಸ್ಪರ್ಶಿಸಿತು. ಬಳಿಕ, ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಇದು ಚಾರಿತ್ರಿಕ ಸ್ಥಳ ಎಂದು ಬಣ್ಣಿಸಿದ್ದಾರೆ.

ಭೂಮಿಯನ್ನು ತೆಗೆದುಕೊಂಡ ಸಂಕಲ್ಪವನ್ನು ಚಂದಿರನ ಅಂಗಳದಲ್ಲಿ ಅನುಷ್ಠಾನಗೊಳಿಸಿದ್ದೇವೆ. ಯಶಸ್ವಿ ಚಂದ್ರಯಾನ ಹೊಸ ಭಾರತದ ಪ್ರತೀಕ. ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

140 ಕೋಟಿ ಬಡಿತಗಳ ಶಕ್ತಿ

ಈ ಕ್ಷಣ ಅವಿಸ್ಮರಣೀಯ. ಈ ಕ್ಷಣವು ಅಸಾಮಾನ್ಯವಾಗಿದೆ. ಈ ಕ್ಷಣವು ಅಭಿವೃದ್ಧಿ ಹೊಂದಿದ ಭಾರತದ ಶಂಖ. ಇದು ನವಭಾರತದ ಸಂಭ್ರಮದ ಕ್ಷಣ. ಕಷ್ಟಗಳ ಸಾಗರವನ್ನು ದಾಟುವ ಕ್ಷಣವಿದು, ಗೆಲುವಿನ ಚಂದ್ರನ ಹಾದಿಯಲ್ಲಿ ನಡೆಯುವ ಕ್ಷಣವಿದು. ಈ ಕ್ಷಣವು 140 ಕೋಟಿ ಬಡಿತಗಳ ಶಕ್ತಿಯಾಗಿದೆ. ಭಾರತದಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ, ಹೊಸ ಪ್ರಜ್ಞೆಯ ಕ್ಷಣ ಇದು. ಇದು ಭಾರತದ ಉದಯೋನ್ಮುಖ ಭವಿಷ್ಯಕ್ಕಾಗಿ ಕರೆ ನೀಡುವ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹುರುಪು ತುಂಬಿದ್ದಾರೆ.

ಯಶಸ್ಸಿನ ಅಮೃತ ಸುರಿಮಳೆ

ಅಮೃತ ಕಾಲದ ಮೊದಲ ಬೆಳಕಲ್ಲಿ ಈ ಯಶಸ್ಸಿನ ಅಮೃತ ಸುರಿಮಳೆಯಾಗಿದೆ. ನಾವು ಭೂಮಿಯ ಮೇಲೆ ಪ್ರತಿಜ್ಞೆ ತೆಗೆದುಕೊಂಡೆವು ಮತ್ತು ಅದನ್ನು ಚಂದ್ರನ ಮೇಲೆ ನನಸಾಗಿಸಿದೆವು. ನಮ್ಮ ವಿಜ್ಞಾನಿ ಸಹೋದ್ಯೋಗಿಗಳು ಹೇಳಿದರು, ಭಾರತ ಈಗ ಚಂದ್ರನ ಮೇಲೆ ಅಂತ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments