ಶಿವಮೊಗ್ಗ : ಶಿಕಾರಿಪುರ ಪಟ್ಟಣದ ಆಡಳಿತ ಸೌಧ ಕಟ್ಟಡದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಅವರ ಕಚೇರಿಯನ್ನು ಉದ್ಘಾಟಿಸಲಾಯಿತು.
ಕೊಠಡಿ ನಂ.6ರಲ್ಲಿ ಶ್ರೀ ಲಕ್ಷ್ಮೀ ಹಾಗೂ ಶ್ರೀ ವಿಘ್ನೇಶ್ವರನ ಪೂಜೆಯೊಂದಿಗೆ ಶಾಸಕರ ಜನಸಂಪರ್ಕ ಕಚೇರಿಯನ್ನು ಆರಂಭಿಸಲಾಯಿತು.
ಈ ಕುರಿತು ಮಾತನಾಡಿರುವ ಶಾಸಕ ಬಿ.ವೈ. ವಿಜಯೇಂದ್ರ ಅವರು, ಜನಸೇವೆಯೇ ದೇವರ ಸೇವೆ, ಅದು ಪೂರ್ವಜನ್ಮದ ಸುಕೃತ. ಇಂದು ಆಡಳಿತ ಸೌಧದಲ್ಲಿ ತಾಲ್ಲೂಕಿನ ಜನತೆಯ ಕಷ್ಟಕಾರ್ಪಣ್ಯಗಳನ್ನು ಆಲಿಸಿ, ಉತ್ತಮ ಹಾಗೂ ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಿಂದ ಕಚೇರಿ ಪ್ರಾರಂಭಿಸಲಾಯಿತು ಎಂದು ಹೇಳಿದ್ದಾರೆ.
'ಜನಸೇವೆಯೇ ದೇವರ ಸೇವೆ, ಅದು ಪೂರ್ವಜನ್ಮದ ಸುಕೃತ'. ಇಂದು ನಮ್ಮ ಶಿಕಾರಿಪುರದ ಆಡಳಿತ ಸೌಧದಲ್ಲಿ ಶ್ರೀ ಲಕ್ಷ್ಮೀ ಹಾಗೂ ಶ್ರೀ ವಿಘ್ನೇಶ್ವರನ ಪೂಜೆಯೊಂದಿಗೆ ಶಾಸಕರ ಜನಸಂಪರ್ಕ ಕಛೇರಿಯನ್ನು ಆರಂಭಿಸಲಾಯಿತು. ತಾಲ್ಲೂಕಿನ ಜನತೆಯ ಕಷ್ಟಕಾರ್ಪಣ್ಯಗಳನ್ನು ಆಲಿಸಿ, ಉತ್ತಮ ಹಾಗೂ ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಿಂದ ಕಛೇರಿ ಕಾರ್ಯನಿರ್ವಹಿಸಲಿದೆ. 1/2 pic.twitter.com/EuBy9pH4Nv
— Vijayendra Yediyurappa (@BYVijayendra) August 18, 2023
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಕ್ಷೇತ್ರದ ಹಾಗೂ ಜಿಲ್ಲೆಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.