Saturday, August 23, 2025
Google search engine
HomeUncategorizedಅಪಘಾತ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ!

ಅಪಘಾತ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ!

ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಹಿನ್ನೆಲೆ ಸಚಿವ ಮಹದೇವಪ್ಪ ಹಾಗೂ ಚೆಲುವರಾಯಸ್ವಾಮಿ ಅವರ ಮನವಿ ಮೇರೆಗೆ ನಾಲ್ವರ ಕುಟುಂಬಗಳಿಗೆ ಸಿಎಂ ನಿಧಿಯಿಂದ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

ಮೈಸೂರು ಜಿಲ್ಲೆಯ ಗೊರವನಹಳ್ಳಿ ಗ್ರಾಮದ ಮಮತಾ, ರೇಖಾ, ಸಂಜನಾ ಹಾಗೂ ಮಹದೇವಮ್ಮ ಮೃತ ದುರ್ದೈವಿಗಳು. ಶ್ರೀರಂಗಪಟ್ಟಣದ ಗಾಮನಹಳ್ಳಿ ಬಳಿ ಹೋಗುವ ವೇಳೆ ಕಾರು ನಾಲೆಗೆ ಬಿದ್ದು ನಾಲ್ವರು ಸಾವನ್ನಪ್ಪಿದ್ದರು. ಮೃತರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆಸ್ಪತ್ರೆಯ ಶವಗಾರದ ಬಳಿ ಮೃತ ಸಂಬಂಧಿಕರ ಆಕ್ರಮಂದನ ಮುಗಿಲು ಮುಟ್ಟಿತ್ತು .

ಇದನ್ನು ಓದಿ : 7 ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆ!

ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಮಹದೇವಪ್ಪ ಹಾಗೂ ಶಾಸಕ ರಮೇಶ್​ ಬಂಡಿಸಿದ್ದೇಗೌಡ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸರ್ಕಾರದ ತಲಾ 2 ಲಕ್ಷ ನೆರವಿನ ಜೊತೆಗೆ ವೈಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ಸಚಿವ ಚಲುವರಾಯಸ್ವಾಮಿ ಘೋಷಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments