Sunday, August 24, 2025
Google search engine
HomeUncategorizedಮಟನ್.. ಚಿಕನ್.. : ಸರ್ಕಾರಿ ಕಚೇರಿ ಆವರಣದಲ್ಲಿ ಭರ್ಜರಿ ಬಾಡೂಟ!

ಮಟನ್.. ಚಿಕನ್.. : ಸರ್ಕಾರಿ ಕಚೇರಿ ಆವರಣದಲ್ಲಿ ಭರ್ಜರಿ ಬಾಡೂಟ!

ಹುಬ್ಬಳ್ಳಿ : ಸರ್ಕಾರಿ ಕಚೇರಿಗೆ ತನ್ನದೇ ಆದ ಘನತೆ ಇರುತ್ತೆ. ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕೆಲ ನಿಯಮಗಳಿರುತ್ತವೆ. ಆದರೆ, ಪಾಲಿಕೆಯ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಸರ್ಕಾರಿ ಕಚೇರಿ ಆವರಣ ಎಂದರೆ ಒಂದು ಶಿಸ್ತು ಬದ್ದ ವ್ಯವಸ್ಥೆ, ನೀತಿ-ನಿಯಮಗಳು ಇರುತ್ತವೆ. ಹೀಗಿರುವಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿ ಮತ್ತೆ ಬಾಡೂಟ ಸದ್ದು ಮಾಡಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 59ನೇ ವಾರ್ಡ್​ನ ಕಾಂಗ್ರೆಸ್ ಪಕ್ಷದ ಸದಸ್ಯೆ ಸುವರ್ಣ ಕಲಗುಂಟ್ಲಾ ವಿರೋಧ ಪಕ್ಷದ ನಾಯಕಿಯಾಗಿದ್ದಾರೆ. ಇವರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಡೂಟ ಹಾಕಿಸಲಾಗಿದೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾದ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ದೋರೆರಾಜು ಮಣಿಕುಂಟ್ಲಾ ಹೀಗೆ ಆವರಣದಲ್ಲಿ ಬಾಡೂಟ ಹಾಕಿಸಿ ವಿವಾದಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಸುವರ್ಣ ಕಲಗುಂಟ್ಲಾ ಬಾಡೂಟ ಹಾಕಿಸಿ ಅವರದೇ ಪಕ್ಷದ ಶಾಸಕರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿ : ಗೃಹ ಜ್ಯೋತಿ ನೋಂದಣಿಗೆ ಇಂದೇ ಕೊನೆಯ ದಿನಾಂಕ! : ಮುಂದೇನು?

ಮಟನ್, ಚಿಕನ್ ಸೇರಿ ಭರ್ಜರಿ ಬಾಡೂಟ

ಸರ್ಕಾರಿ ಕಚೇರಿ ಆವರಣದಲ್ಲಿ ಹೀಗೆ ಭರ್ಜರಿ ಬಾಡೂಟ ಹಾಕಿಸಿ ವಿರೋಧ ಪಕ್ಷದ ನಾಯಕಿ ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಮಟನ್, ಚಿಕನ್ ಸೇರಿದಂತೆ ಹಲವಾರು ಮಾಂಸಾಹಾರಿ ಖಾಧ್ಯಗಳ ಬಾಡೂಟ ಕಂಡು ಬಂದಿತು. ಸರ್ಕಾರಿ ಕಚೇರಿಯ ಆವರಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಭುಗಿಲೆದ್ದಿದೆ. ಪಾಲಿಕೆಯಲ್ಲಿ ಏನೇಆದ್ರೂ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments