Sunday, August 24, 2025
Google search engine
HomeUncategorizedಪತ್ನಿಯ ಎದುರೇ ಗಂಡನನ್ನು ಇರಿದು ಕೊಲೆ

ಪತ್ನಿಯ ಎದುರೇ ಗಂಡನನ್ನು ಇರಿದು ಕೊಲೆ

ಬೆಳಗಾವಿ : ವೈಯಕ್ತಿಕ ದ್ವೇಷ ಕಾರಣದಿಂದ ಪತ್ನಿಯ ಎದುರೇ ಗಂಡನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ವಡೇರಟ್ಟಿ ಗ್ರಾಮದಲ್ಲಿ ನಡೆದಿದೆ.

ಶಂಕರ ಸಿದ್ದಪ್ಪ ಜಗಮತ್ತಿ ಕೊಲೆಯಾದ ವ್ಯಕ್ತಿ. ವೈಯಕ್ತಿಕ ಕಾರಣದಿಂದ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಈ ಸಬಂಧ ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಮೃತ ಶಂಕರ ಸಿದ್ದಪ್ಪ ತನ್ನ ಪತ್ನಿ ಜೊತೆ ಬನಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ವಾಪಸ್ ಬರುವಾಗ ಕತ್ತಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಸದ್ಯ ಕೊಲೆ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನ ವಶಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ : ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ತಂದೆ 

ಕೊಲೆಗೆ ಉಪಯೋಗಿಸಿದ್ದ ಆಯುಧ(ಚಾಕು)ವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಕೊಲೆಗೆ ಯಾರಾದರೂ ಸಹಕರಿಸಿದ್ರೆ ಅದರ ಬಗ್ಗೆಯೂ ತನಿಖೆ ಮಾಡಲಾಗುತ್ತದೆ. ಕೊಲೆಯಾದವ ಕೃಷಿ ಜೊತೆಗೆ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯಲ್ಲಿ ಹೆಂಡತಿ ಪಾತ್ರದ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಶಂಕರ ಸಿದ್ದಪ್ಪ ಜಗಮತ್ತಿ ಹತ್ಯೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ಮೋಲ್ನೋಟಕ್ಕೆ ವೈಯಕ್ತಿಕ ಕಾರಣದಿಂದ ಕೃತ್ಯ ನಡೆದಂತೆ ಕಂಡುಬಂದಿದೆ. ಮತ್ತೊಂದು ದೃಷ್ಟಿಕೋನದಲ್ಲಿ ನೋಡಿದಾಗ ಪತ್ನಿಯ ಪಾತ್ರ ಏನಾದರೂ ಇದೆಯೇ ಎಂಬ ಶಂಕೆಯೂ ಇದೆ. ಸದ್ಯ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ತನಿಖೆ ಪೂರ್ಣಗೊಂಡ ನಂತರವಷ್ಟೇ ಸತ್ಯಾಂಶ ಹೊರಬರಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments