Sunday, August 24, 2025
Google search engine
HomeUncategorizedಎಲ್ಲರೂ ಕೈ ಎತ್ತಿ ಫೋಟೋಶೂಟ್​ ಮಾಡ್ತಾರೆ, ಹೋಗ್ತಾರೆ : ಆರ್. ಅಶೋಕ್

ಎಲ್ಲರೂ ಕೈ ಎತ್ತಿ ಫೋಟೋಶೂಟ್​ ಮಾಡ್ತಾರೆ, ಹೋಗ್ತಾರೆ : ಆರ್. ಅಶೋಕ್

ಬೆಂಗಳೂರು : ಇದು‌ ಫೋಟೋಶೂಟ್ ಅಷ್ಟೇ. ಎಲ್ಲರೂ ಕೈ ಎತ್ತಿ ಫೋಟೋಶೂಟ್ ಮಾಡ್ತಾರೆ, ಹೋಗ್ತಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವವರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದೀನಿ. ಇದೊಂದು ಫೋಟೋಶೂಟ್ ಅಷ್ಟೆ ಎಂದು ಕುಟುಕಿದರು.

ದಾರಿಯುದಕ್ಕೂ ಫ್ಲೆಕ್ಸ್​ಗಳನ್ನು ಹಾಕಿದ್ದಾರೆ, ನೋಡಿದ್ದೇನೆ. ಯುಪಿಎ ಲೀಡರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಸಿದ್ಧಾಂತಗಳಿಲ್ಲ. ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡುತ್ತಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕೇರಳದಲ್ಲಿ ಒಬ್ಬೊರಿಗೊಬ್ಬರು ಜಗಳ ಆಡ್ತಾರೆ. ಅವರಿಗೆ ಟಾರ್ಗೆಟ್ ಇಲ್ಲ, ಅದೊಂದೆ ಅಜೆಂಡಾ ಇರೋದು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಜಾರಿಕೊಳ್ಳುವ ಪ್ರಯತ್ನ ಮಾಡ್ತಿದಾರೆ : ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ವಿರುದ್ಧ ನಾವಿದ್ದೇವೆ ಅನ್ನೊದು ಅಷ್ಟೇ ಅವರಿಗೆ. ದೇಶದ ಬಡವರಿಗೆ ಮೋದಿ‌ ಏನು ಅಂತ ಗೊತ್ತಿದೆ. ಮೋದಿ ಅವರಿಂದ ವಿಶ್ವಮಟ್ಟದಲಿ ಭಾರತಕ್ಕೆ ಹೆಸರು ಬಂದಿದೆ. ಚಂದ್ರಯಾನ 3 ಯಶಸ್ವಿಯಾಗಿದೆ. ಫೋಟೋಶೂಟ್ ಅಷ್ಟೆ ಸಭೆಯಿಂದ ಏನು ಉಪಯೋಗ ಆಗೊಲ್ಲ ಎಂದು ಆರ್. ಅಶೋಕ್ ಹೇಳಿದರು.

ಬೆಂಗಳೂರಿಗೆ ಸ್ಟಾಲಿನ್ ಆಗಮನ

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಟಾಲಿನ್ ಅವರನ್ನು ಬರಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮಿತ್ರ ಪಕ್ಷಗಳ ಔತಣ ಕೂಟ ಹಿನ್ನೆಲೆಯಲ್ಲಿ ಸ್ಟಾಲಿನ್ ಆಗಮಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments