Monday, August 25, 2025
Google search engine
HomeUncategorizedಶಿವಮೊಗ್ಗ ನಗರದ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಹೆಲ್ಪ್ ಲೈನ್ ಆರಂಭ : ನಂಬರ್ ಏನು?

ಶಿವಮೊಗ್ಗ ನಗರದ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಹೆಲ್ಪ್ ಲೈನ್ ಆರಂಭ : ನಂಬರ್ ಏನು?

ಶಿವಮೊಗ್ಗ : ಇನ್ಮುಂದೆ ಶಿವಮೊಗ್ಗ ನಗರದ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಮೂಲಕ ಶಾಸಕರಿಗೆ ನೇರವಾಗಿ ತಿಳಿಸಬಹುದು ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರದ ಜನರು ಇನ್ನು ಮುಂದೆ ಯಾವುದೇ ಸಮಸ್ಯೆ, ಸಲಹೆ ಇದ್ದರೂ ವಾಟ್ಸಪ್ ಮೂಲಕ ಶಾಸಕರ ಕಚೇರಿಗೆ ನೇರವಾಗಿ ತಿಳಿಸಬಹುದು. ಪರಿಹಾರ ಪಡೆಯುವ ನೂತನ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ ಎಂದು ಹೇಳಿದರು.

ಶಿವಮೊಗ್ಗದ ನಾಗರಿಕರು ಸಮಸ್ಯೆ ಹಂಚಿಕೊಳ್ಳಲು ಸ್ಮಾರ್ಟ್ ಶಿವಮೊಗ್ಗ, ನಿಮ್ಮ ನುಡಿ, ನಮ್ಮ ನಡೆ ಎಂಬ ವಾಟ್ಸಪ್ ಹೆಲ್ಪ್ ಲೈನ್ ಆರಂಭಿಸಿದೆ. ಈ ಮೂಲಕ ನಗರದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಮೆಸೇಜ್ ಮೂಲಕ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ

9019901177ಗೆ ಮೆಸೇಜ್ ಮಾಡಿ

ಸಾರ್ವಜನಿಕರು ಮೊಬೈಲ್ ಸಂಖ್ಯೆ 9019901177 ಈ ವಾಟ್ಸಪ್ ನಂಬರ್‍ಗೆ ತಮ್ಮ ಬಡಾವಣೆಯ ಸಮಸ್ಯೆ, ಸಲಹೆಗಳ ಬಗ್ಗೆ ಮೆಸೇಜ್ ಮಾಡಬಹುದು. ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸೂಕ್ತ ಪರಿಹಾರ ದೊರೆಯಲಿದೆ ಎಂದರು.

ಪ್ರತಿ ವಾರ್ಡಿನಲ್ಲಿ ಸಲಹಾ ಪೆಟ್ಟಿಗೆ

ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿನಲ್ಲಿ ಸಲಹಾ ಪೆಟ್ಟಿಗೆ ಇಡಲಾಗುವುದು. ಅಲ್ಲಿಯೂ ಕೂಡ ಸಾರ್ವಜನಿಕರು ಮುಕ್ತವಾಗಿ ಮುಂದಿನ 5 ವರ್ಷ ಶಿವಮೊಗ್ಗ ನಗರ ಹೇಗೆ ಕಾಣಬೇಕು ಎಂಬ ತಮ್ಮ ಸಲಹೆ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments