Tuesday, August 26, 2025
Google search engine
HomeUncategorizedಇಂದಿನಿಂದ 7 ದಿನಗಳ ಕಾಲ ಶತ ಚಂಡಿಕಾ ಯಾಗ : ಜು.15ರಂದು ಹೆಚ್‌ಡಿಕೆ ಭಾಗಿ

ಇಂದಿನಿಂದ 7 ದಿನಗಳ ಕಾಲ ಶತ ಚಂಡಿಕಾ ಯಾಗ : ಜು.15ರಂದು ಹೆಚ್‌ಡಿಕೆ ಭಾಗಿ

ರಾಮನಗರ : ಲೋಕ ಕಲ್ಯಾಣಕ್ಕಾಗಿ ಚನ್ನಪಟ್ಟಣದ ಗೌಡಗೆರೆ ಚಾಮುಂಡೇಶ್ವರಿ ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಏಳು ದಿನಗಳ ಕಾಲ ಶತ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ.

ಇಂದಿನಿಂದ ಜುಲೈ 17ರ ವರೆಗೆ ವಿಶ್ವಶಾಂತಿ ಹಾಗೂ ಭಕ್ತ ಸಂಕುಲದ ಸಂಕಷ್ಟ ನಿವಾರಣೆಗಾಗಿ ತಂತ್ರಭಾಗ ಶತ ಚಂಡಿಕಾ ಮಹಾಯಾಗವನ್ನು ಆಯೋಜಿಸಲಾಗಿದೆ.

60 ಅಡಿಯ ಪಂಚಲೋಹದಿಂದ ನಿರ್ಮಾಣವಾಗಿರುವ ಚಾಮುಂಡೇಶ್ವರಿ ಪ್ರತಿಮೆ ಮುಂಭಾಗ ಮಹಾಯಾಗ ನಡೆಯುತ್ತಿದ್ದು ಸಾವಿರಾರು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬದರೀನಾಥ, ಕೇದಾರನಾಥ ದಿಂದ ನಾಗಾಸಾಧುಗಳು, ಆಗೋರಿಗಳು, ಸಂತರು ಆಗಮಿಸಿ ಯಾಗಕ್ಕೆ ಪೂರ್ಣಾಹುತಿ ನೀಡಲಿದ್ದಾರೆ.

ಇದನ್ನೂ ಓದಿ : ಇನ್ನೂ ಬಾರದ ವರುಣ : ಕತ್ತೆಗಳ ಮದುವೆ ಮಾಡಿದ ಭತಗುಣಕಿ ಗ್ರಾಮಸ್ಥರು

ಒಂದು ಲಕ್ಷ ಪಾರಾಯಣ

ಕಡೂರಿನ ವಿನಯ್ ಶಾಸ್ತ್ರೀ ನೇತೃತ್ವದಲ್ಲಿ ಯಾಗ ನಡೆಯುತ್ತಿದ್ದು ಪ್ರತಿನಿತ್ಯ ನೂರೆಂಟು ಚಂಡಿ ಹೋಮ, ಒಂದು ಲಕ್ಷ ಪಾರಾಯಣ, ಏಳು ಲಕ್ಷ ಬೀಜಾಕ್ಷರಗಳ ಪಠಣ ನಡೆಯುತ್ತಿದೆ. ಭೀಮನ ಅಮವಾಸ್ಯೆ ದಿನ ಯಾಗ ಕೊನೆಗೊಳ್ಳಲಿದೆ.

ಜುಲೈ15ರಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಯಾಗದಲ್ಲಿ ಭಾಗವಹಿಸಲಿದ್ದಾರೆ. ಇನ್ನೂ, ಜುಲೈ 17ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments