ಕರ್ನಾಟಕ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ

ಬೆಂಗಳೂರು: ಕರ್ನಾಟಕ ಇತಿಹಾಸದಲ್ಲಿ ಸಿದ್ದರಾಮಯ್ಯ ಹೊಸ ದಾಖಲೆಯ ಮುನ್ನುಡಿ ಬರೆಯಲು ಇಂದು ಸಿದ್ದರಾಗಿದ್ದಾರೆ .ಹೌದು ರಾಜದ ರಾಕಕೀಯ ಇತಿಹಾಸದಲೇ ಸಿಎಂ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್​ ಮಂಡನೆ ಮಾಡಿ ಹೊಸ ದಾಖಲೆ ಬರೆಯಲಿದ್ದಾರೆ.

ಇದುವರೆಗೂ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ 13 ಬಾರಿ ಬಜೆಟ್​ ಮಂಡನೆ ಮಾಡಿ ಇಂದು 14ನೇ ಬಾರಿ ಬಜೆಟ್​ ಮಂಡಿಸಲಿದ್ದು, 13 ಬಾರಿ ಬಜೆಟ್‌ ಮಂಡಿಸಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗೆಡೆ ಹಿಂದೆ ಹಾಕಿ ಹೊಸ ದಾಖಲೆ ಸೃಷ್ಟಿಸಲಿದ್ದಾರೆ.

ಇದನ್ನೂ ಓದಿ: Karnataka Budget 2023: ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಹೆಗಡೆ ದಾಖಲೆ ಅಂತ್ಯ

ಈವರೆಗೆ 13 ಬಜೆಟ್ ಮಂಡಿ ಸಿದ್ದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮುರಿಯುತ್ತಿದ್ದಾರೆ. ಸಿದ್ದರಾಮಯ್ಯ ಡಿಸಿಎಂ, ಹಣ ಕಾಸು ಸಚಿವರಾಗಿ 1995-96ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿ ದ್ದರು. 2018-19ರಲ್ಲಿ ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 13ನೇ ಬಾರಿಯ ಆಯವ್ಯಯ ಮಂಡಿಸಿದ್ದರು.

ರಾಜ್ಯದಲ್ಲಿ ಹೆಚ್ಚು ಬಜೆಟ್‌ ಮಂಡಿಸಿರುವ ಹಣಕಾಸು ಸಚಿವ

ಮಾಜಿ ಸಿಎಂ ರಾಮಕೃಷ್ಣ ಹೆಗೆಡೆ 13 ಬಾರಿ , ಯಡಿಯೂರಪ್ಪ 8 ಬಾರಿ,  ವೀರಪ್ಪ ಮೊಯ್ಲಿ 5 ಬಾರಿ, ಎಸ್‌.ಎಂ.ಕೃಷ್ಣ 5 ಬಾರಿ, ಸಿದ್ದರಾಮಯ್ಯ 13 ಬಾರಿ (ಇಂದು ಬಜೆಟ್‌ ಸೇರಿದ್ರೆ 14 ಬಾರಿ) ಬಜೆಟ್​ ಮಂಡನೆ ಮಾಡಿದ್ದಾರೆ.

14ನೇ ಬಾರಿ ರಾಜ್ಯದಲ್ಲಿ ಬಜೆಟ್​ ಮಂಡನೆ ಮಾಡಿದ ಹೆಗ್ಗಳಿಕೆ ಇಂದು ಸಿಎಂ ಸಿದ್ದರಾಮಯ್ಯ ಸಾಕ್ಷಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES