Sunday, August 24, 2025
Google search engine
HomeUncategorizedಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ : ಕಂಗಾಲಾದ ರೈತ

ಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ : ಕಂಗಾಲಾದ ರೈತ

ಹಾಸನ : ರಾಜ್ಯದಲ್ಲಿ ಮಳೆಯಿಂದಾಗಿ ಟೊಮೇಟೊ ಬೆಲೆ ಹೆಚ್ಚಳವಾಗಿದೆ.(Tomato Rate Increased) ಇನ್ನೂ ಯಾವ ಜಿಲ್ಲೆಗೆ ಹೋದರೂ 100 ರೂಪಾಯಿಗಿಂತ ಕಡಿಮೆ ಇಲ್ಲ. ಹೀಗಾಗಿ ಖದೀಮರು ಟೊಮೇಟೊ ಕಳ್ಳತನಕ್ಕೆ ಮುಂದಾಗಿದ್ದಾರೆ.

ಹೌದು, ಟೊಮೇಟೊ ಬೆಲೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ನಡುವೆ ಟೊಮೇಟೊ ಕಳ್ಳರ ಹಾವಳಿ ಕೂಡ ಜೋರಾಗಿದೆ.

ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೇಟೊ ಕಳ್ಳತನವಾಗಿದೆ(Tomato Theft). ಐವತ್ತರಿಂದ ಅರವತ್ತು ಬ್ಯಾಗ್‌ನಷ್ಟು ಟೊಮೇಟೊವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮಳೆ ನೀರಿನಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ಸಾವು

ಇನ್ನೂ ರಾತ್ರೋರಾತ್ರಿ  ಧರಣಿ ಎಂಬುವವರ ಹೊಲಕ್ಕೆ ನುಗ್ಗಿ 50-60 ಬ್ಯಾಗ್‌ಗಳಷ್ಟು ಟೊಮ್ಯಾಟೊ ಕೊಯ್ದು ಕಳ್ಳತನ ಮಾಡಿದ್ದಾರೆ.  ಉತ್ತಮ ಬೆಲೆ ಇರುವುದುರಿಂದ ಒಳ್ಳೆಯ ಲಾಭ ಬರುತ್ತೆ ಎಂಬ ಆಸೆಯಲ್ಲಿದ್ದರು. ಬೆಳಿಗ್ಗೆ ಎದ್ದು ಧರಣಿ ಅವರು ತಮ್ಮ ಜಮೀನಿನ ಬಳಿಹೋದಾಗ ಟೊಮೇಟೊ ಕಳ್ಳತನವಾಗಿರುವುದು ತಿಳಿದ್ದು ರೈತ ಕಂಗಾಲಾಗಿದ್ದಾನೆ.

ಲಾಭ ಬರುತ್ತೆ ಎಂದು ಆಸೆಯಲ್ಲಿ ಇದ ರೈತನಿಗೆ ನಿರಾಸೆಯಾಗಿದೆ.ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..! 

1 ಕೆ.ಜಿಗೆ ಟೊಮ್ಯಾಟೊ ಬೆಲೆ ಇದೀಗ 150 ರೂಪಾಯಿ ದಾಟಿದೆ.ಇದರಿಂದ ಖರೀದಿ ನೆಪದಲ್ಲಿ ಗ್ರಾಹಕರಿಂದ ಟೊಮ್ಯಾಟೊ ಕಳ್ಳತನ ಮಾಡುದ್ದು,ಟೊಮ್ಯಾಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿ ಸಿಸಿಟಿವಿ ಕಣ್ಗಾವಲಿನಲ್ಲಿ ವ್ಯಾಪಾರಸ್ಥ ವ್ಯಾಪಾರ ಮಾಡುತ್ತಿದ್ದಾರೆ.

 

 

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments