Saturday, August 23, 2025
Google search engine
HomeUncategorizedಮುಂದಿನ ತಿಂಗಳು ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ

ಮುಂದಿನ ತಿಂಗಳು ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ

ಬೆಂಗಳೂರು: ಈಗಲೇ ಸರಕಾರಿ ಶಾಲೆಗಳು ಆರಂಭವಾಗಿದ್ದು, ‘ಸಮವಸ್ತ್ರ’, ‘ಪಠ್ಯಪುಸ್ತಕ’ ವಿದ್ಯಾರ್ಥಿಗಳ ಕೈಸೇರಿದೆ. ಇನ್ನೂ ‘ಶೂ ಮತ್ತು ಸಾಕ್ಸ್‌, ಮಾತ್ರ ನೀಡಬೇಕಿದೆ. ಆದರೆ ಈ ಬಾರಿ ಶಾಲಾ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್‌ ಹಾಕಿಕೊಳ್ಳಬೇಕಾದರೆ ಒಂದೆರಡು ತಿಂಗಳು ಕಾಯಲೇಬೇಕು.

ಹೌದು, 2023-24ನೇ ಸಾಲಿನಲ್ಲಿ ಶೂ ಮತ್ತು ಸಾಕ್ಸ್‌ಗಾಗಿ 125 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದು ಎಸ್‌ಡಿಎಂಸಿ ಅಧ್ಯಕ್ಷರ ಕೈ ಸೇರಬೇಕಾದಲ್ಲಿ ಕನಿಷ್ಠ ಒಂದು ತಿಂಗಳು ಬೇಕಿದೆ. ಆನಂತರ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಸೇರಬೇಕಾದಲ್ಲಿ ಮತ್ತೊಂದು ತಿಂಗಳ ಅವಶ್ಯಕತೆ ಇದೆ. ಎರಡು ತಿಂಗಳು ವಿದ್ಯಾರ್ಥಿಗಳು ಕಳೆದ ವರ್ಷದ ಶೂ ಅಥವಾ ಬರಿಗಾಲಿನಲ್ಲೇ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ಓಡಾಡ್ತೀರಾ ಆಗಿದ್ರೆ ಈ ರೂಲ್ಸ್ ಫಾಲೋ ಮಾಡ್ಲೇ ಬೇಕು

ಶೂ ಮತ್ತು ಸಾಕ್ಸ್‌ ನೀಡುವುದಕ್ಕೆ ರಾಜ್ಯ ಸರಕಾರ 1 ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂಗೆ 265 ರೂ., 6 ರಿಂದ 8ನೇ ತರಗತಿ ಮಕ್ಕಳಿಗೆ 295 ರೂ., 9 ಮತ್ತು 10ನೇ ತರಗತಿ ಮಕ್ಕಳಿಗೆ 325 ರೂ. ನಿಗದಿಪಡಿಸಿದೆ. ಅಲ್ಲದೆ, ಇದರ ಜತೆಗೆ ಒಬ್ಬ ವಿದ್ಯಾರ್ಥಿಗೆ ಎರಡು ಜೊತೆ ಸಾಕ್ಸ್‌ಗಾಗಿ ಒಟ್ಟಾರೆ 125 ಕೋಟಿ ರೂ.ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. 45.45 ಲಕ್ಷ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ.

ಸಾಮಾನ್ಯವಾಗಿ ವಿಧಿಸುವ ಷರತ್ತುಗಳು
– ಬಾಟಾ, ಲಿಬರ್ಟಿ, ಪ್ಯಾರಾಗಾನ್‌ನಂತಹ ಒಳ್ಳೆಯ ಕಂಪೆನಿಗಳ ಶೂ ನೀಡಬೇಕು
– ಅನುದಾನ ಕಮ್ಮಿಯಾದಲ್ಲಿ, ದಾನಿಗಳಿಂದ ಪಡೆಯಬಹುದು
– ವಾರಂಟಿ ಇರಬೇಕು
-ಐಎಸ್‌ಐ ಮಾರ್ಕ್ ಇರಬೇಕು

2017-18 ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಶಾಲಾ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ ಯೋಜನೆ 

ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಹುತೇಕ ಬಡವರಾಗಿದ್ದು, ಪೋಷಕರಿಗೆ ತಮ್ಮ ಮಕ್ಕಳಿಗೆ ಶೂ-ಚಪ್ಪಲಿ ಖರೀದಿಸಿ ಕೊಡುವುದು ಕೂಡ ಕಷ್ಟ. ಇದರಿಂದ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ನಗರ ಪ್ರದೇಶದ ಸರಕಾರಿ ಶಾಲೆಗಳಲ್ಲೂ ಮಕ್ಕಳಿಗೆ 2017-18ನೇ ಸಾಲಿನಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರ ಸರಕಾರಿ ಶಾಲಾ ಮಕ್ಕಳಿಗಾಗಿ ಶೂ ಮತ್ತು ಸಾಕ್ಸ್‌ ನೀಡುವ ಯೋಜನೆ ಜಾರಿಗೆ ತಂದಿತು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments