Monday, August 25, 2025
Google search engine
HomeUncategorizedಸರಳವಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟ ಪ್ರಥಮ್‌

ಸರಳವಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟ ಪ್ರಥಮ್‌

ಬೆಂಗಳೂರು: ಯಾರಿಗೂ ತಿಳಿಯದೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಒಳ್ಳೆಯ ಹುಡುಗ ಪ್ರಥಮ್ (Pratham) ಸರ್ಪ್ರೈಸ್ ಕೊಟ್ಟಿದ್ದಾರೆ.

ಹೌದು, ಸರಳವಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡು ಮಂಡ್ಯದ ಅಳಿಯನಾಗಿದ್ದಾರೆ. ಇನ್ನೂ ಪ್ರಥಮ್ ಮಂಡ್ಯ (Mandya) ಮೂಲದ ಭಾನುಶ್ರೀ (Bhanushree) ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ಪ್ರಥಮ್ ಮದುವೆಯಾಗುತ್ತಿದ್ದಾರೆ.

ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ನಾನು ಅರೇಂಜ್ ಮ್ಯಾರೇಜ್​ ಆಗಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಮದುವೆಯಲ್ಲಿ ಯಾವುದೇ ಆಡಂಬರ ಕೂಡ ಇರುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಮದುವೆ ಆಗೋಳು ಸಿದ್ದರಾಮಯ್ಯ, ರವಿಚಂದ್ರನ್‌ ಹೆಂಡ್ತಿ ಥರ

ಇನ್ನೂ ಅವರು ಪತ್ನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಪತ್ನಿಗೆ ಹೋಲಿಸಿದ್ದಾರೆ. ‘ನನ್ನ ಕೈಹಿಡಿಯುವವರು ಸೋಷಿಯಲ್ ಮೀಡಿಯಾ ಮತ್ತು ಪಬ್ಲಿಸಿಟಿಯಿಂದ ದೂರ. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ರವಿಚಂದ್ರನ್ ಅವರ ಹೆಂಡ್ತಿ ತರಹ ಅಂದ್ಕೊಳ್ಳಿ’ ಎಂದು ಹೆಂಡತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ಶೀಘ್ರದಲ್ಲೇ ಮದುವೆಯಾಗಲಿದ್ದೇನೆ

ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದಿದ್ದಾರೆ. ‘ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್‌ಮೆಂಟ್ ಆಯ್ತು, ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ, ನಾನು ತುಂಬಾ ಸರಳವಾಗಿಯೇ ಬದುಕಿದವನು, ಹಾಗೇ ಇರೋಕೆ ಇಷ್ಟ; ನನ್ನ ಎಂಗೇಜ್‌ಮೆಂಟ್‌ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು ಆತ್ಮೀಯರಿಗೆ ಈ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಮೆ ತಿಳಿಸಿದ್ದೇನೆ ಅಷ್ಟೇ’ ಎಂದಿದ್ದಾರೆ. ‘ಮದುವೆ ಎಷ್ಟು ಅದ್ದೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ತಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ, ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ ಎಂದಿದ್ದಾರೆ.

‘ನನ್ನದು ಪೂರ್ಣ ಅರೆಂಜ್ ಮ್ಯಾರೇಜ್

ಇನ್ನೊಂದು ಪೋಸ್ಟ್‌ನಲ್ಲಿ, ‘ನನ್ನದು ಪೂರ್ಣ ಅರೆಂಜ್ ಮ್ಯಾರೇಜ್. ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ. ಅನ್ನಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್​ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು ನೀವು ಹರಸಿ ಎಂದು ಕೋರಿದ್ದಾರೆ.

ಇನ್ಮುಂದೆ ಮಂಡ್ಯದ ಅಳಿಯ

ಭಾವಿ ಪತ್ನಿಯ ಸಿಂಪ್ಲಿಸಿಟಿ ಬಗ್ಗೆ ಹಾಡಿ ಹೊಗಳಿರುವ ಪ್ರಥಮ್, ಹಳ್ಳಿ ಹುಡುಗಿಯನ್ನು ಮದುವೆ (Marriage) ಆಗುತ್ತಿರುವ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾರೆ. ಮಂಡ್ಯ ಮೂಲದ ಭಾನುಶ್ರೀ ಎನ್ನುವವರ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿರುವ ಪ್ರಥಮ್, ತಾನು ಇನ್ಮುಂದೆ ಮಂಡ್ಯದ ಅಳಿಯ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಭಾನುಶ್ರೀ ಡಿಗ್ರಿ ಮುಗಿಸಿರುವ ಹುಡುಗಿ, ಮುಂದಿನ ದಿನಗಳಲ್ಲಿ ಡಬಲ್ ಡಿಗ್ರಿ ಕೂಡ ಮಾಡಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದೇವಸ್ಥಾನದಲ್ಲಿ ಮದುವೆ ಆಗುವ ಇಂಗಿತವನ್ನೂ ವ್ಯಕ್ತ ಪಡಿಸಿರುವ ಪ್ರಥಮ್, ಈ ಮದುವೆ ಮಾಡೋ ವಿಚಾರದಲ್ಲಿ ಹುಡುಗಿ ಮನೆಯವರಿಗೆ ಬಿಟ್ಟಿದ್ದಾರೆ. ‘ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ’ ಎಂದು ಹೇಳಿಕೊಂಡಿದ್ದಾರೆ.  ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು. ನೀವು ಹರಸಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments