Monday, August 25, 2025
Google search engine
HomeUncategorizedಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್ ಫಿಕ್ಸ್?: ನನ್ನ ಸೀಟ್ ಸೋಮಣ್ಣಗೆ ಎಂದ ಜಿ.ಎಸ್ ಬಸವರಾಜ್

ಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್ ಫಿಕ್ಸ್?: ನನ್ನ ಸೀಟ್ ಸೋಮಣ್ಣಗೆ ಎಂದ ಜಿ.ಎಸ್ ಬಸವರಾಜ್

ತುಮಕೂರು : ಮಾಜಿ ಸಚಿವ ವಿ. ಸೋಮಣ್ಣ ಅವರು ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಸಂಸದ ಸಂಸದ ಜಿ.ಎನ್ ಬಸವರಾಜ್ ಹೇಳಿದ್ದಾರೆ.

ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ವೀರಶೈವ ಸಮಾಜದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿ.ಸೋಮಣ್ಣರ ಬೆಂಬಲಕ್ಕೆ ನಿಲ್ಲಿ ಎಂದು ವೀರಶೈವ ಸಮಾಜಕ್ಕೆ ಕರೆ ಕೊಟ್ಟಿದ್ದಾರೆ.

ಸಮಾಜ ಒಗ್ಗಟ್ಟಾಗಿದ್ರೆ ಏನಾಬೇಕಾದ್ರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದ್ರೆ, ನಿಮ್ಮನ್ನೇ ಒದ್ದು  ಓಡಿಸುತ್ತಾರೆ. ಅದು ಕೂಡ ಸನ್ನಿತವಾಗಿದೆ. ಯಾವಾಗ ಒಗ್ಗಟ್ಟು ಮುರಿಯುತ್ತೆ, ಏನೇನು ಮಾಡ್ಬೇಕು ಅನ್ನೋದು ಅವರಿಗೆ ಗೊತ್ತಿದೆ.ಕೆಲವೇ ಜನ ಇದ್ದೀರಾ, ಒಟ್ಟಾಗಿರಿ ಎಚ್ಚರಿಕೆ ಕೊಡ್ತಿದ್ದಿನಿ ಎಂದು ಹೇಳಿದ್ದಾರೆ.

ನನ್ನದಾಯ್ತು, ನನ್ನ ಸೀಟ್ ನಾ ಸೋಮಣ್ಣಗೆ ಕೊಡ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ನಾನು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ. ಮುಂದೆ ಬರೋರನ್ನು ಉಪಯೋಗಿಸಿಕೊಳ್ಳಿ. ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಇವರ ಮೇಲೆ ಅವರನ್ನು, ಅವರ ಮೇಲೆ ಇವರನ್ನು ಎತ್ತಿಕಟ್ಟ ಬೇಡಿ. ಮುಂದೆ ತುಂಬಾ ಜನ ಬರಬೇಕು ಎಂದು ಜಿ.ಎಸ್ ಬಸವರಾಜ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ, ಇದರಲ್ಲಿ ಮುಚ್ಚುಮರೆ ಏನಿದೆ? : ಹೆಚ್.ಡಿ ದೇವೇಗೌಡ

ನಮ್ಮವರೇ ನನ್ನ ಸೋಲಿಸಿದ್ರು

ನಾನು 8 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. 5 ಸಲ ಗೆದ್ದಿದ್ದೇನೆ, ಮೂರು ಬಾರಿ ಸೋತ್ತಿದ್ದೇನೆ. ನಮ್ಮವರೇ ನನ್ನ ಸೋಲಿಸಿದ್ರು. ನಾನು ಸೋತು ಒಂದೆ, ಗೆದ್ರು ಒಂದೇ ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ. ಮಾಜಿ ಸಚಿವ ವಿ.ಸೋಮಣ್ಣಗೆ ತುಮಕೂರು ಲೋಕಸಭೆಯ ಟಿಕೆಟ್ ಫಿಕ್ಸ್ ಎನ್ನುವ ಮೂಲಕ ಪರೋಕ್ಷವಾಗಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಗುಟ್ಟು ಬಿಚ್ಚಿಟ್ಟ ಬಸವರಾಜ್

ಸಂಸದ ಜಿ.ಎಸ್. ಬಸವರಾಜ್ ಹೇಳಿಕೆ ತುಮಕೂರು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸೋಮಣ್ಣಗೆ ಟಿಕೆಟ್ ಎಂಬ ಗುಟ್ಟು ಬಿಚ್ಚಿಟ್ಟ ಕಾರಣ ಕಮಲ ಪಾಳಯದಲ್ಲಿ ಬಂಡಾಯ ಏಳುವ ಸಾಧ್ಯತೆಯಿದೆ. ಬಸವರಾಜ್ ಅವರ ಈ ಹೇಳಿಕೆ ಲೋಕಸಭಾ ಚುನಾವಣೆ ಗೆಲುವಿಗಾಗಿ ತಯಾರಿ ನಡೆದಿದೆಯಾ ಎಂದು ಕುತೂಹಲ ಹುಟ್ಟುಹಾಕಿದೆ.

ವರ್ಷಕ್ಕಿಂತ ಮೊದಲೇ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಹುಡುಕಾಟ ನಡೆದಿದೆಯಾ?ಎನ್ನುವುದಕ್ಕೆ ತುಮಕೂರು ಸಂಸದರ ಭಾಷಣದ ಆಡಿಯೋ ಪುಷ್ಠಿ ನೀಡಿದಂತಿದೆ. ಲೋಕಸಭೆಗೆ ತುಮಕೂರಲ್ಲೇ ವಿ.ಸೋಮಣ್ಣ ಸ್ಪರ್ಧೆ ಮಾಡ್ತಾರೆ ಎಂಬು ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments