Saturday, August 23, 2025
Google search engine
HomeUncategorizedBJP-RSS ನಾಯಕರ 3 ಸುಳ್ಳುಗಳು ಬಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ

BJP-RSS ನಾಯಕರ 3 ಸುಳ್ಳುಗಳು ಬಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು ನೂತನ ಸಂಸತ್​ ಭವನದ ಉದ್ಘಾಟಿಸಿದ್ದಾರೆ. ಇತ್ತ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, ಬಿಜೆಪಿ ನೂತನ ಸಂಸತ್ ಭವನ ಉದ್ಘಾಟನೆಯ ಹಕ್ಕನ್ನು ರಾಷ್ಟ್ರಪತಿಯಿಂದ ಕಸಿದುಕೊಂಡಿದೆ ಎಂದು ಕುಟುಕಿದ್ದಾರೆ.

ಮಹಿಳಾ ಆಟಗಾರ್ತಿಯರು ಬೀದಿಗಿಳಿದು ಸತ್ಯಾಗ್ರಹ ನಡೆಸುತ್ತಿದ್ದು, ಅವರನ್ನು ಸರ್ವಾಧಿಕಾರದ ಬಲದಿಂದ ಥಳಿಸಲಾಗಿದೆ. ಈ ಮೂಲಕ ಬಿಜೆಪಿ ಹಾಗೂ ಆರ್.ಎಸ್.ಎಸ್ ಆಡಳಿತಗಾರರ 3 ಸುಳ್ಳುಗಳು ಈಗ ದೇಶದ ಮುಂದೆ ಬಯಲಾಗಿದೆ ಎಂದು ಖರ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ : ಹೊಸ ಸಂಸತ್ ಭವನದಲ್ಲಿ 75ರೂ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ

ಪ್ರಜಾಪ್ರಭುತ್ವ ಅಂದ್ರೆ ಕೇವಲ ಕಟ್ಟಡಗಳಲ್ಲ

ಒಂದು ಪ್ರಜಾಪ್ರಭುತ್ವ(Democracy), ಎರಡನೆಯದು ರಾಷ್ಟ್ರೀಯತೆ(Nationalism) ಹಾಗೂ ಮೂರನೆಯದು ಮಗಳನ್ನು ಉಳಿಸಿ(Save daughter). ಪ್ರಧಾನಿ ಮೋದಿ ಅವರೇ, ನೆನಪಿರಲಿ.. ಪ್ರಜಾಪ್ರಭುತ್ವ ಎಂದರೆ ಕೇವಲ ಕಟ್ಟಡಗಳಲ್ಲ. ಸಾರ್ವಜನಿಕರ ಧ್ವನಿಯಿಂದ ಸಾಗುತ್ತಿದೆ ಎಂದು ಛೇಡಿಸಿದ್ದಾರೆ.

ಇನ್ನೂ, ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಸಂಸತ್ ಭವನ ಉದ್ಘಾಟನೆ ಸಮಾರಂಭಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿ ಪ್ರಸ್ತಾಪಿಸುವ ಮೂಲಕ ‘ಪ್ರಚೋದನಾಕಾರಿ’ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್ ನ್ಯಾಯವಾದಿಯೊಬ್ಬರು ಆರೋಪಿಸಿದ್ದಾರೆ. ಜೊತೆಗೆ, ಮಲ್ಲಿಕಾರ್ಜುನ ಖರ್ಗೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ದೂರು ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments