Monday, August 25, 2025
Google search engine
HomeUncategorizedಅಳು ಅವಮಾನವಲ್ಲ - ಪುರುಷರಿಗೆ ಸಚಿನ್ ಬರೆದ ಭಾವುಕ ಪತ್ರ ಓದಲೇಬೇಕು..!

ಅಳು ಅವಮಾನವಲ್ಲ – ಪುರುಷರಿಗೆ ಸಚಿನ್ ಬರೆದ ಭಾವುಕ ಪತ್ರ ಓದಲೇಬೇಕು..!

ಪುರುಷರು ಅಳ್ಬಾರ್ದು…ಅತ್ತರೆ ಅದು ಅವಮಾನ..! ಸಮಾಜದಲ್ಲಿ ಇಂತಹದ್ದೊಂದು ತಪ್ಪು ಯೋಚನೆ ಗಟ್ಟಿಯಾಗಿದೆ. ಆದ್ರೆ, ಗಂಡ್ಮಕ್ಕಳಿಗೂ ಭಾವನೆಗಳಿವೆ.. ಅವರ ಮನಸ್ಸಿಗೂ ಖುಷಿಯಂತೆ ನೋವೂ ಆಗುತ್ತೆ ಅನ್ನೋದನ್ನು ಪ್ರತಿಯೊಬ್ಬರು ಅರ್ಥ ಮಾಡ್ಕೋಬೇಕು. ಪುರಷರೂ ಕೂಡ ಭಾವನೆಗಳನ್ನು ಹೊರಹಾಲು ಅರ್ಹರು.. ಅಳು ಪುರುಷರಿಗೆ ಅವಮಾನವಲ್ಲ..!
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಮಾತಿಗೆ ಧ್ವನಿಯಾಗಿದ್ದಾರೆ. ಪುರುಷರ ದಿನಾಚರಣೆ ಪ್ರಯುಕ್ತ ಸಚಿನ್ ಪುರುಷರಿಗೆ ಒಂದು ಭಾವುಕ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಇಂದಿನ ಹಾಗೂ ನಾಳೆಯ ಪುರಷರಿಗಾಗಿ ಸಚಿನ್ ಪತ್ರ
”ನೀವು ಸದ್ಯದಲ್ಲೇ ತಂದೆ, ಪತಿ ಆಗಲಿದ್ದೀರಿ. ಸಹೋದರ, ಗೆಳೆಯ, ಮಾರ್ಗದರ್ಶಕ ಅಥವಾ ಶಿಕ್ಷಕರಾಗಲಿದ್ದೀರಿ. ಇನ್ನೊಬ್ರಿಗೆ ಮಾದರಿ ಆಗುವವರು. ಧೈರ್ಯಶಾಲಿಗಳು, ಶಕ್ತಿಶಾಲಿಗಳು, ಬುದ್ಧಿವಂತರು ಮತ್ತು ಪುಟಿದೇಳುವಂತಹವರು. ಅಷ್ಟೇ ಅಲ್ಲದೆ ನೀವು ಗೊಂದಲ ಹಾಗೂ ಭಯವನ್ನು ಎದುರಿಸಬೇಕಾದ ಸಂದರ್ಭಗಳು ಕೂಡ ನಿಮ್ಮ ಜೀವನದಲ್ಲಿ ಬರಲಿವೆ. ಬಹಳಷ್ಟು ಕಷ್ಟಗಳನ್ನು ಅನುಭವಿಸೋ ಪರಿಸ್ಥಿತಿಯೂ ಬರ್ಬಹುದು. ಅದ್ರಲ್ಲಿ ಅನುಮಾನವೇ ಇಲ್ಲ! ನೀವು ಸೋಲನುಭವಿಸುವ ಟೈಮ್ ಕೂಡ ಬರಲಿದೆ. ನೀವು ಸೋತಾಗ ಅತ್ತು ಭಾವನೆಗಳನ್ನೆಲ್ಲಾ ಹೊರಗೆ ಹಾಕ್ಬೇಕು ಅಂತ ನಿಮ್ಗೆ ಅನ್ಸುತ್ತೆ.
ಆದ್ರೆ, ನೀವು ಖಂಡಿತವಾಗಿಯೂ ಕಣ್ಣೀರು ಹಿಡಿದಿಟ್ಟುಕೊಂಡು, ಏನೂ ಆಗಿಲ್ಲ ಅನ್ನುವಂತೆ ನಟಿಸುವ ಪ್ರಯತ್ನ ಮಾಡ್ತೀರಿ. ಯಾಕಂದ್ರೆ ಪುರುಷರು ಮಾಡೋದೇ ಹೀಗೆ. ಇದು ನಾವೆಲ್ಲಾ ಬೆಳೆದುಕೊಂಡು ಬಂದ ರೀತಿ. ಗಂಡಸರು ಅಳುವಂತಿಲ್ಲ. ಅತ್ತರೆ ಅವಮಾನ. ಅದು ಅವರನ್ನು ದುರ್ಬಲಗೊಳಿಸುತ್ತದೆ ಅನ್ನೋದನ್ನೇ ನಂಬಿಕೊಂಡು ನಾನು ದೊಡ್ಡವನಾದೆ. ನಾನೇನು ನಂಬಿದ್ನೋ ಅದು ತಪ್ಪಂತ ನಂಗೆ ಅರ್ಥವಾಯ್ತು. ನಾನಿಂದು ಏನಾಗಿದ್ದೇನೋ ಅದಕ್ಕೆಲ್ಲಾ ನನ್ನ ಲೈಫಲ್ಲಿ ಎದುರಾದ ಅಡೆತಡೆಗಳು ಮತ್ತು ಅನುಭವಿಸಿದ ನೋವುಗಳೇ ಕಾರಣ. ಇವೇ ನನ್ನನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸಿದ್ವು.
ನೀವು ಅಳುವುದರಲ್ಲಿ ತಪ್ಪೇನು ಇಲ್ಲ. ಕಣ್ಣೀರು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುವಾಗ ಅವುಗಳನ್ನೇಕೆ ಅಡಗಿಸಿಡಬೇಕು. ನೋವು ಮತ್ತು ದೌರ್ಬಲ್ಯಗಳನ್ನು ತೋರಿಸೋಕೆ ಸಿಕ್ಕಾಪಟ್ಟೆ ಧೈರ್ಯಬೇಕು. ರಾತ್ರಿ ಕಳೆದ್ಮೇಲೆ ಹಗಲು ಬರುವಂತೆ ನೀವು ನೋವು, ದೌರ್ಬಲ್ಯಗಳಿಂದ ಬಲಿಷ್ಠರಾಗಿಯೂ, ಉತ್ತಮರಾಗಿಯೂ ಬೆಳೆಯುತ್ತೀರಿ. ಆದ್ರಿಂದ ಪುರುಷರು ಏನ್ಮಾಡ್ಬೇಕು. ಏನ್ ಮಾಡ್ಬಾರ್ದು ಅನ್ನೋ ತಪ್ಪು ಕಲ್ಪನೆಗಳನ್ನು ಬದಿಗೊತ್ತಲು ನಿಮ್ಗೆ ಪ್ರೋತ್ಸಾಹಿಸ್ತಿದ್ದೇನೆ. ನೀವು ಯಾರೇ ಆಗಿರಿ, ಎಲ್ಲಿಯೇ ಇರಿ, ಯಾವತ್ತಿಗೂ ಧೈರ್ಯ ಜೊತೆಗಿರಲಿ ಅಂತ ನಾನು ವಿಶ್ ಮಾಡ್ತೀನಿ.” ಅಂತ ಸಚಿನ್ ಪತ್ರ ಸಂದೇಶ ನೀಡಿದ್ದಾರೆ. ಇದೇ ಪತ್ರದಲ್ಲಿ ತಾವು ಅಂತರಾಷ್ಟ್ರೀಯ ಕ್ರಿಕೆಟಿಗೆ (16/11/2013) ಹೇಳಿದ ದಿನವನ್ನು ಕೂಡ ಸ್ಮರಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments