Sunday, August 24, 2025
Google search engine
HomeUncategorizedರೆಸಾರ್ಟ್ ರಾಜಕೀಯ : 'ಗುಪ್ತಚರವಾಗಿ ನಾನು ಮಾಹಿತಿ ಪಡೆದಿದ್ದೇನೆ' ಎಂದ ಬಿ.ಸಿ ಪಾಟೀಲ್

ರೆಸಾರ್ಟ್ ರಾಜಕೀಯ : ‘ಗುಪ್ತಚರವಾಗಿ ನಾನು ಮಾಹಿತಿ ಪಡೆದಿದ್ದೇನೆ’ ಎಂದ ಬಿ.ಸಿ ಪಾಟೀಲ್

ಬೆಂಗಳೂರು : ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ರೆಸಾರ್ಟ್ ರಾಜಕೀಯ ವಿಷಯ ಕುರಿತು ವ್ಯಂಗ್ಯವಾಡಿದ್ದು, ರೆಸಾರ್ಟ್ ರಾಜಕೀಯ ಎನ್ನುವುದೇ ಹಾಸ್ಯಾಸ್ಪದ ಎಂದಿದ್ದಾರೆ.

ಹಿರೆಕೇರೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೂಸು ಹುಟ್ಟುವ ಮುನ್ನ ಕೂಲಾಯಿ ಹೊಲಸಿದರು ಅಂದ ಹಾಗೇ ಆಗಿದೆ. ಎಲ್ಲರ ಬಳಿ ಕಾರು ಇದಾವೆ. ಬಸ್ ಬುಕ್ ಮಾಡೋದು, ಅದರಲ್ಲಿ ಹೋಗೊಕೆ. ಇದೇನೂ ಸಮಾವೇಶಕ್ಕೆ ಹೋಗೋದಾ ಹೇಗೆ? ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಲೀಡ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕೆಲವರು ಬಿಜೆಪಿ, ಕೆಲವರು ಕಾಂಗ್ರೆಸ್ ಲೀಡ್ ಅಂದಿದಾರೆ. ಅಂತಿಮವಾಗಿ ಮತದಾರರು ತೀರ್ಪು ಮೇಲಾಗೋದು. ಖಂಡಿತಾ ಈ ಭಾರಿ ಬಿಜೆಪಿ ಸರ್ಕಾರ ಬರುತ್ತದೆ ಎಂದು ಬಿ.ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದ್ನೂ ಓದಿ : ಎಕ್ಸಿಟ್ ಪೊಲ್ಸ್ ಏನೇ ಹೇಳಿದರೂ ‘ನಾವೇ ಕಿಂಗ್’ ಆಗುತ್ತೇವೆ : ಸಿಎಂ ಬೊಮ್ಮಾಯಿ

25 ಸಾವಿರಕ್ಕೂ ಅಧಿಕ ಲೀಡ್

ಹಿರೆಕೇರೂರು ಕ್ಷೇತ್ರ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ. ನನಗೆ ಭರವಸೆ ಇದೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿದಿವೆ. ಜನರು ಆಶಿರ್ವಾದ ಮಾಡಿದ್ದಾರೆ. ಈ ಬಾರಿ ನಾನು 20ರಿಂದ 25 ಸಾವಿರ ಮತಗಳಿಂತ ಅಧಿಕ ಲೀಡ್ ತಗೋತೀನಿ. ಗುಪ್ತಚರವಾಗಿ ನಾನು ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅತಂತ್ರ ಬರೋ ಮಾತೇ ಇಲ್ಲಾ. ಸ್ಪಷ್ಟ ಬಹುಮತ ಸರ್ಕಾರ ಬರಲಿದೆ. ನಾವೇ ಆಡಳಿತಕ್ಕೆ ಬರೋದು. ಮೇ 13ರ ತನಕ ಮಾತ್ರ ಕಾಂಗ್ರೆಸ್ ನವರ ಉತ್ಸಾಹ. ಆಮೇಲೆ ಬಿಜೆಪಿಯ ಉತ್ಸಾಹ, ಕಾದು ನೋಡಿ ಎಂದು ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಮೊಮ್ಮಗಳ ಜೊತೆ ಕೌರವ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆಯಲ್ಲಿದ್ದ ಸಚಿವ ಬಿ.ಸಿ ಪಾಟೀಲ್ ಇದೀಗ ರಿಲ್ಯಾಕ್ಸ್ ಮೂಡಲ್ಲಿದ್ದಾರೆ. ಹಿರೇಕೆರೂರಿನ‌ ನಿವಾಸದಲ್ಲಿ ಮೊಮ್ಮಗಳು ಸಾನ್ವಿ ಜೊತೆ ಇಂದು ಸಮಯ ಕಳೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments