ಮೋದಿಯನ್ನು ಕರೆದುಕೊಂಡು ಬಂದು ಬೀದಿ ಬೀದಿ ಸುತ್ತಿಸುತ್ತಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಮ್ಮನೆ ಕರೆದುಕೊಂಡು ಬಂದು ಬೀದಿ ಬೀದಿ ಸುತ್ತಿಸುತ್ತಿದ್ದಾರೆ ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಮಲ್ಲೇಶ್ವರದ ಪೈಪ್ ಲೈನ್ ಬಡಾವಣೆಯಲ್ಲಿ ಶಾಸಕ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರು ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಪಾದಯಾತ್ರೆಯ ನಡುವೆಯೇ ಕಾಂಗ್ರೆಸ್ ಕಾರ್ಯಕರ್ತರು ಹುಟ್ಟುಹಬ್ಬ ಆಚರಣೆ ಮಾಡಿದರು. ಕೇಕ್ ಕತ್ತರಿಸಿ ದಿನೇಶ್‌ ಗುಂಡೂರಾವ್‌ ಸಂಭ್ರಮಿಸಿದರು. ಈ ವೇಳೆ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರ ಮಾಡಿದರು. ದಿನೇಶ್‌ ಗುಂಡೂರಾವ್‌ ಅವರಿಗೆ ಸ್ಥಳೀಯರು ಆರತಿ ಬೆಳಗಿ, ಸನ್ಮಾನ ಮಾಡಿದರು.

ಇದನ್ನೂ ಓದಿ : ಇದು ‘ಸಿದ್ದರಾಮಯ್ಯರ ಕೊನೆ ಚುನಾವಣೆ’, ಪ್ಲೀಸ್.. ಗೆಲ್ಲಿಸಿ

ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ

ಈ ವೇಳೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ತಾವು ಗಾಂಧಿನಗರ ಕ್ಣೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ. ತಮ್ಮ ವಿರುದ್ಧ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳು ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಹಾಗಾಗಿ ಈ ಬಾರಿ ನಾವು ಮೊದಲಿಗಿಂತ ಹೆಚ್ಚು ಬಹುಮತದ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಬಗ್ಗೆ ಪ್ರಸ್ತಾಪಿಸಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿಯವರು ಸುಖಾಸುಮ್ಮನೆ ಪ್ರಧಾನಿಯನ್ನು ಕರೆದುಕೊಂಡು ಬಂದು ಬೀದಿ ಬೀದಿ ಸುತ್ತಿಸುತ್ತಿದ್ದಾರೆ. ಅದರಿಂದ ಏನೂ ಉಪಯೋಗವಿಲ್ಲ ಎಂದು ಕುಟುಕಿದರು.

ಬಿಜೆಪಿಯವರು ತಮ್ಮ ಭ್ರಷ್ಟಾಚಾರ ಹಗರಣಗಳು, 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮುಚ್ಚಿ ಹಾಕಲು ಅನಗತ್ಯವಾಗಿ ಭಜರಂಗದಳ ವಿವಾದವನ್ನು ತರುತ್ತಿದ್ದಾರೆ. ಆಂಜನೇಯನಿಗೂ ಭಜರಂಗದಳಕ್ಕೂ ಸಂಬಂಧವೇ ಇಲ್ಲ ಎಂದು ದಿನೇಶ್‌ ಗುಂಡೂರಾವ್‌ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES