Wednesday, August 27, 2025
Google search engine
HomeUncategorizedಕಾಂಗ್ರೆಸ್ 'ಹಿಂದೂ ಹೆಣ್ಮಕ್ಕಳ ಹಣೆಯ ಕುಂಕುಮ' ಅಳಿಸೋದಕ್ಕೂ ಹೇಸಲ್ಲ : ಆರ್.ಅಶೋಕ್

ಕಾಂಗ್ರೆಸ್ ‘ಹಿಂದೂ ಹೆಣ್ಮಕ್ಕಳ ಹಣೆಯ ಕುಂಕುಮ’ ಅಳಿಸೋದಕ್ಕೂ ಹೇಸಲ್ಲ : ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಹೆಣ್ಣು ಮಕ್ಕಳ ಹಣೆಯ ಕುಂಕುಮ ಅಳಿಸೋದಕ್ಕೂ ಹೇಸೋದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪದ ಬಗ್ಗೆ ಮಾತನಾಡಿರುವ ಅವರು, ಬಜರಂಗದಳ ನಿಷೇಧಿಸುವ ಕುರಿತು ಕಾಂಗ್ರೆಸ್‌ ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಗಿಮಿಕ್ ಎಂದು ಲೇವಡಿ ಮಾಡಿದ್ದಾರೆ.

ಮಸಲ್ಮಾನರು ಟಿಪ್ಪು ಜಯಂತಿ ಆಚರಿಸಿ ಅಂತ ಅರ್ಜಿ ಕೊಟ್ಟಿರಲಿಲ್ಲ. ಅವರ ಧರ್ಮದಲ್ಲಿ ಮೂರ್ತಿ ಪೂಜೆ, ಜಯಂತಿಗಳನ್ನು ಮಾಡಲು ಅವಕಾಶವಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿದ ಪರಿಣಾಮ ಕೊಲೆ, ಗಲಭೆಗಳಾಯ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಧರ್ಮಯುದ್ಧದಲ್ಲಿ ‘ಸತ್ಯ ಗೆಲ್ಲಬೇಕು, ಅಧರ್ಮ’ ಸೋಲಬೇಕು : ಡಾ.ಕೆ ಸುಧಾಕರ್

ಕಾಂಗ್ರೆಸ್​ನವರು ಮಣ್ಣು ತಿನ್ನುತ್ತಿದ್ದಾರೆ

ಕಾಂಗ್ರೆಸ್​​ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಬಗ್ಗೆ ಉಲ್ಲೇಖ ವಿಚಾರ, ಇದು ಭಾರೀ ವಿವಾದಕ್ಕೀಡಾಗಿತ್ತು. ಇದಕ್ಕೆ ಭಜರಂಗದಳ ‌ಸಿಂಬಲ್ ಹನುಮಂತ, ಅದಕ್ಕೆ ಕಾಂಗ್ರೆಸ್​ನವರು ಕೊಡಲಿ ಪೆಟ್ಟು ಹಾಕಿದ್ದಾರೆ. ಜೊತೆಗೆ ಅದನ್ನು ಸಮರ್ಥನೆ ಮಾಡುತ್ತಿದ್ದಾರೆ. ಭಜರಂಗದಳ ಪ್ರಾರಂಭವಾಗಿ 40-50 ವರ್ಷ ಆಗಿದೆ ಆವಾಗಿನಿಂದಲೂ ಕಾಂಗ್ರೆಸ್​ನವರು ಮಣ್ಣು ತಿನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿರಿಯಾನಿ ಕೊಟ್ಟು ಇಟ್ಟುಕೊಂಡಿದ್ದೀರಿ

ಸಂಬಂಧ ಇರುವವರನ್ನು ನಿಮ್ಮ ಜೊತೆ ಇಟ್ಟುಕೊಂಡಿದ್ದೀರಿ. ಪಿಎಫ್​ಐ ಅವರಿಗೆ ಬಿರಿಯಾನಿ ಕೊಟ್ಟು ಇಟ್ಟುಕೊಂಡಿದ್ದೀರಿ. ಹಿಂದೂ ಸಂಘಟನೆ ಬಗ್ಗೆ ಕಣ್ಣು ಹಾಕಿರುವುದು ದ್ರೋಹ. ಜನರೇ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದಾರೆ. ನಾನು ಬೆಂಬಲ ಕೊಡುತ್ತೇನೆ. ಸಂಜೆ ನಾನು ಕೂಡ ಪಾಲ್ಗೊಳ್ಳುತ್ತೇನೆ. ನಾನು ಕೂಡ ಭಜರಂಗದಳದವನೇ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments