Saturday, August 23, 2025
Google search engine
HomeUncategorizedರೈತರಿಗೆ 'ಅನ್ನ' ಕೊಡಲಿಲ್ಲ ಅಂದ್ರೂ 'ಗಂಜಿ' ಕೊಟ್ಟಿದ್ದೇವೆ : ಬಿ.ಸಿ ಪಾಟೀಲ

ರೈತರಿಗೆ ‘ಅನ್ನ’ ಕೊಡಲಿಲ್ಲ ಅಂದ್ರೂ ‘ಗಂಜಿ’ ಕೊಟ್ಟಿದ್ದೇವೆ : ಬಿ.ಸಿ ಪಾಟೀಲ

ಹಾವೇರಿ : ಬಿಜೆಪಿ ಸರ್ಕಾರ ರೈತರಿಗೆ ಅನ್ನ ನೀಡಲಿಲ್ಲ ಅಂದ್ರೂ ಗಂಜಿಯನ್ನು ಕೊಟ್ಟಷ್ಟು ಸಮಾಧಾನ ಇದೆ ಎಂದು ಕೃಷಿ ಸಚಿವ ಹಾಗೂ ಹಿರೆಕೇರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ ಅವರು ತಿಳಿಸಿದ್ದಾರೆ.

ಹಿರೆಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಬೇಟೆ ಮುಂದುವರಿಸಿರುವ ಸಚಿವ ಬಿ.ಸಿ ಪಾಟಿಲ ಅವರು ಇಂದು ಅನೇಕ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ನೆರೆದಿದ್ದ ಜನರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ರಾಜ್ಯದ ಈ ಬಾರಿ ರೈತರು ಅತ್ಯಂತ ಸಂಕಷ್ಟಕ್ಕೆ ತುತ್ತಾಗಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ನಿಂತುಕೊಂಡಿದೆ. ರಾಜ್ಯಕ್ಕೆ 635 ಕೋಟಿ ರೂಪಾಯಿ ಬೆಳೆ ಪರಿಹಾರ ಬಂದಿದೆ. ಅದರಲ್ಲಿ ಹಿರೆಕೇರೂರು ಕ್ಷೇತ್ರಕ್ಕೆ 104 ಕೋಟಿ ರೂ. ಬಂದಿದೆ. ರೈತರಿಗೆ ಅನ್ನ ಕೊಡಲಿಲ್ಲ ಎಂದರೂ ಗಂಜಿ ಕೊಟ್ಟ್ ಸಮಾಧಾನ ನಮಗಿದೆ ಎಂದು ಹೇಳಿದ್ದಾರೆ.

3-4 ತಿಂಗಳಲ್ಲಿ ತುಂಗಭದ್ರಾ ನೀರು

ಹಿರೆಕೇರೂರು ಹಾಗೂ ಲಿಂಗಾಪುರ ಗ್ರಾಮದ ಜನತೆ ಎಂದಿಗೂ ನನ್ನ ಮೇಲೆ ಎತ್ತಿದ್ದೀರಿ. ಎಂದೂ ಕೈಬಿಟ್ಟಿಲ್ಲ. ತುಂಗಾಭದ್ರಾ ನದಿಯಿಂದ ನೀರು ತರುವ ಯೋಜನೆ ಕಾರ್ಯರೂಪದಲ್ಲಿದೆ. 335 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ನಿಮ್ಮ ಗ್ರಾಮಗಳಿಗೆ ತುಂಗಭದ್ರಾ ನದಿ ನೀರು ಬರುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಬಂಜಾರ ಸಮುದಾಯದ ಅಭಿವೃದ್ಧಿ ಬದ್ಧ : ಬಿ.ಸಿ ಪಾಟೀಲ

ಹೋದಲೆಲ್ಲಾ ಅಭೂತಪೂರ್ವ ಬೆಂಬಲ

ಸಚಿವ ಬಿ.ಸಿ ಪಾಟೀಲ ಅವರು ಹಿರೆಕೇರೂರು ಕ್ಷೇತ್ರದಲ್ಲಿ ಮತ ಬೇಟೆ ಮುಂದುವರೆಸಿದ್ದಾರೆ. ಕೌರವನ ಅಬ್ಬರದ ಪ್ರಚಾರಕ್ಕೆ ಸಾವಿರಾರು ಜನಸ್ತೋಮ ಸಾಕ್ಷಿಯಾಗಿದೆ. ಹಿರೆಕೇರೂರು ಕ್ಷೇತ್ರದಲ್ಲಿ ಅಭಿವೃದ್ಧಿ  ಪರ್ವ ಮುಂದುವರೆದೆ. ಕ್ಷೇತ್ರದ ಜನ್ರ ಆಸಿರ್ವಾದದಿಂದ ಅಭಿವೃದ್ಧಿ, ಯೋಜನೆ ಗಳನ್ನ ತರಲು ಸಾಕಾರವಾಗಿದ್ದು ಮತ್ತೊಮ್ಮೆ ಬಿ.ಸಿ ಪಾಟೀಲ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.

ಪತ್ನಿ, ಪುತ್ರಿ ಬೆಂಬಲ

ಕೌರವ ಬಿಸಿ ಪಾಟೀಲ್ ಪ್ರಚಾರಕ್ಕೆ ಹೊದ ಗ್ರಾಮಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.  ಇಂದು ಕೂಡ  ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್, ಚಿನ್ನಮುಳಗುಂದ ತಾಂಡಾ ಹಾಗೂ ಲಿಂಗಾಪುರ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಪಟಾಕಿ ಹೊಡೆದು, ಆರತಿ ಬೆಳಗಿ  ಅದ್ದೂರಿಯಾಗಿ ಸ್ವಾಗತಿಸಿದರು. ಪತ್ನಿ ವನಜಾಕ್ಷಿ ಪಾಟೀಲ, ಪುತ್ರಿ ಸೃಷ್ಟಿ ಪಾಟೀಲ ಹಾಗೂ ಬಿಜೆಪಿ ಪ್ರಮುಖ ಮುಖಂಡರು ಬಿ.ಸಿ ಪಾಟೀಲ ಅವರಿಗೆ ಸಾಥ್ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments