Sunday, August 24, 2025
Google search engine
HomeUncategorizedRamadan 2023 : ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್

Ramadan 2023 : ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್

ದಾನ, ಧರ್ಮದ ಪವಿತ್ರ ಹಬ್ಬ ರಂಜಾನ್ ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದಾಗಿದೆ.

ನಮ್ಮ ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಈ ದಿನದಂದು ದೇವರಿಂದ ಜನರಿಗೆ ಬಹಿರಂಗವಾಯಿತು ಎಂಬ ನಂಬಿಕೆ ಜನರಲ್ಲಿದೆ.

​ಹೌದು,ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ(ರೋಜಾ)ವನ್ನು ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಅವರಿಗೆ ಆರೋಗ್ಯ ಮತ್ತು ಪ್ರತಿರೋಧಕವನ್ನು ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ, ದಾನ ಮಾಡುತ್ತಾರೆ, ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.

ಈದ್-ಉಲ್-ಫಿತಾರ್ ಹಬ್ಬದ ಇತಿಹಾಸ ಮತ್ತು ಮಹತ್ವ 

ಪವಿತ್ರ ಕುರಾರ್​​​ನ್ನು ಪ್ರವಾದಿ ಮುಹಮ್ಮದ್ ಅವರಿಗೆ ರಂಜಾನ್ ತಿಂಗಳಲ್ಲಿ ಬಹಿರಂಗಪಡಿಸಲಾಯಿತು ಎಂದು ನಂಬಲಾಗಿದೆ. ಆ ಕಾರಣದಿಂದ ಮುಸ್ಲಿಮರು ಈ ತಿಂಗಳನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮತ್ತು ಈ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು ಹಿಡಿಯುತ್ತಾರೆ. ಅಲ್ಲಾಹನಿಗೆ ಪ್ರಾರ್ಥಿಸಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುತ್ತಾರೆ.

ಈದ್-ಉಲ್-ಫಿತಾರ್ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಮತ್ತು ಅವರು ರುಚಿಕರವಾದ ಊಟದೊಂದಿಗೆ ಉಪವಾಸವನ್ನು ಮುಗಿಸುತ್ತಾರೆ. ಈದ್-ಉಲ್-ಫಿತಾರ್ ದಿನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments