Saturday, September 13, 2025
HomeUncategorizedಅಕ್ಕ-ಪಕ್ಕದ ಜನರದ್ದು 'ನಾಯಿಪಾಡು' - ಮನೆ ಬಿಟ್ಟ ಪತ್ನಿ, ಮಕ್ಕಳು!

ಅಕ್ಕ-ಪಕ್ಕದ ಜನರದ್ದು ‘ನಾಯಿಪಾಡು’ – ಮನೆ ಬಿಟ್ಟ ಪತ್ನಿ, ಮಕ್ಕಳು!

ಈ ಪ್ರಪಂಚದಲ್ಲಿ ಎಂಥೆಂಥಾ ವಿಚಿತ್ರ ಮಂದಿ ಇದ್ದಾರೆ ಸ್ವಾಮಿ? ಇಂಥಾ ವಿಚಿತ್ರ ಜನ ತಮಗೆ ಸರಿ ಅಂದಿದ್ದನ್ನೇ ಮಾಡೋದು. ಅದರಿಂದ ಯಾರಿಗೆ ಹಿಂಸೆ ಅನಿಸಿದ್ರು, ಕಿರಿಕಿ ಅನಿಸಿದ್ರೂ ಅವರು ಮಾತ್ರ ಬದಲಾಗಲ್ಲ! ತಪ್ಪು ತಿದ್ದುಕೊಳ್ಳುವುದರಲಿ, ಯಾರು? ಯಾಕೆ ಹೇಳ್ತಿದ್ದಾರೆ ಅಂತನೂ ಅರ್ಥ ಮಾಡಿಕೊಳ್ಳಲ್ಲ. ತಮ್ಮ ಹುಚ್ಚಾಟದ ಪ್ರತಿಷ್ಠಿಯೇ ಅವರಿಗೆ ದೊಡ್ಡದಾಗಿರುತ್ತೆ.
ಈ ಪೀಠಿಕೆ ಹಾಕೋಕೆ ಕಾರಣ ಶಿವಮೊಗ್ಗದ ಒಬ್ಬ ವಿಚಿತ್ರ ನಾಯಿ ಪ್ರೇಮಿ, ಬೀದಿ ನಾಯಿಗಳನ್ನು ಮನೆಗೆ ತುಂಬಿಸಿಕೊಂಡು, ಪತ್ನಿ-ಮಕ್ಕಳನ್ನೇ ಮನೆಯಿಂದ ಕಳುಹಿಸಿಕೊಟ್ಟಿರೋ ಭೂಪ!
ಹೌದು, ರೀ ಶಿವಮೊಗ್ಗದ ಜೆಹೆಚ್​ ಪಟೇಲ್ ಬಡಾವಣೆಯ ನಿವಾಸಿ ಗಿರೀಶ್ ಎಂಬ ಪುಣ್ಯಾತ್ಮನ ಹುಚ್ಚು ಹುಂಬುತನದ ಕಥೆ ಕಣ್ರಿ ಇದು. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡ್ತಿರೋ ಗಿರೀಶಿಗೆ ಹೆಂಡ್ತಿ, ಮಕ್ಕಳು, ಸಂಬಂಧಿಕರಿಗಿಂತ ಬೀದಿ ನಾಯಿಗಳೇ ಹೆಚ್ಚು! ಈತನ ಮನೆ ತುಂಬಾ ಬರೀ ಬೀದಿನಾಯಿಗಳೇ! ಒಂದಲ್ಲ ಎರಡಲ್ಲ 9 ಬೀದಿ ನಾಯಿಗಳನ್ನು ಸಾಕಿಕೊಂಡಿದ್ದಾನೆ. ಆ ನಾಯಿಗಳಿಗೊಂದು ಬೋನು ಮಾಡಿ ಕೂಡಿಟ್ಟು, ಊಟ-ತಿಂಡಿ ಉಪಚಾರ ಮಾಡ್ತಾನಾ? ಇಲ್ಲ, ಇವನ ಮನೆಯೇ ಅವುಗಳಿಗೆ ಆಶ್ರಯ ತಾಣ!
ಮನೆಯ ಜಗುಲಿ, ಹಾಲ್, ಅಡುಗೆ ಮನೆ, ಬೆಡ್​ರೂಂ, ದೇವರಮನೆ ಹೀಗೆ ಎಲ್ಲಿ ನೋಡಿದ್ರು ಬರೀ ಬೀದಿನಾಯಿಗಳೇ! ಮನೆಯೊಳಗೆ ಮನಷ್ಯರಾದವರು ಕಾಲಿಡೋಕೆ ಸಾಧ್ಯವಿಲ್ಲ! ಈ ಬೀದಿ ನಾಯಿಗಳ ಕಾಟ, ಈತನ ಹುಚ್ಚಾಟದಿಂದ ಪತ್ನಿ , ಮಕ್ಕಳು ಊರೇ ಬಿಟ್ಟು ಹೋಗಿದ್ದಾರೆ. ಆದರೆ, ಅಕ್ಕಪಕ್ಕದ ಮನೆಯವರು ಮಾತ್ರ ನರಕ ಯಾತನೆ ಅನುಭಿಸ್ತಿದ್ದಾರೆ.
ಗಿರೀಶನ ಬೀದಿ ನಾಯಿಗಳ ಮೇಲಿನ ಹುಚ್ಚು ಪ್ರೀತಿಯಿಂದ ಜನ ಹೈರಾಣಾಗಿದ್ದಾರೆ. ಈ ಬೀದಿನಾಯಿಗಳ ಗಬ್ಬು ವಾಸನೆ, ಹಗಲು-ರಾತ್ರಿ ಎನ್ನದೆ 24 ಗಂಟೆಗಳ ಕಾಲ ಅವುಗಳು ಬೊಗಳುವುದರಿಂದ ಅಕ್ಕ-ಪಕ್ಕದ ನಿವಾಸಿಗಳು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ. ಯಾಕಪ್ಪಾ ಗಿರೀಶ್ ಹೀಗೆ ಮಾಡ್ತೀಯಾ ಅಂತ ಜನ ಕೇಳಿದ್ರೆ, ‘ಅಯ್ಯೋ ನನ್ ಇಷ್ಟ, ನನ್ ಮನೆ, ಅದನ್ನು ಕೇಳೋಕೆ ನೀವ್ಯಾರು’ ಅಂತಾನಂತೆ ಈ ಆಸಾಮಿ!
ಈತನ ಬೀದಿನಾಯಿ ಪ್ರೇಮದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದು, ಬೇರೆ ದಾರಿ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪಾಪ ಪ್ರಾಣಿಗಳು ನಮ್ಮಂತೆಯೇ ಅವುಗಳಿಗೆ ಪ್ರೀತಿ ಕೊಡೋಣ, ಊಟ ಹಾಕಣ ಆದ್ರೆ ಯಾರಾದ್ರು ಹೀಗೆ ಮನೆಯನ್ನೇ ಬೀದಿನಾಯಿಗಳ ಅಡ್ಡ ಮಾಡಿಕೊಳ್ತಾರಾ. ಹುಚ್ಚು ಪ್ರಾಣಿ ಪ್ರೀತಿ ಬೇರೆಯವರಿಗೆ ಹಿಂಸೆ ಆಗಬಾರದಲ್ಲವೇ?

https://www.facebook.com/powertvnews/videos/410653189864030/

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments