Sunday, August 24, 2025
Google search engine
HomeUncategorized'ಜಾತಿ ಹೆಸರಲ್ಲಿ ಮತ ಕೊಟ್ಟು, ಯಾವ ಸ್ಥಿತಿಗೆ ಬಂದಿದ್ದೀರಾ' ನೋಡಿ : ಕುಮಾರಸ್ವಾಮಿ ಕಳವಳ

‘ಜಾತಿ ಹೆಸರಲ್ಲಿ ಮತ ಕೊಟ್ಟು, ಯಾವ ಸ್ಥಿತಿಗೆ ಬಂದಿದ್ದೀರಾ’ ನೋಡಿ : ಕುಮಾರಸ್ವಾಮಿ ಕಳವಳ

ಬೆಂಗಳೂರು : ಜಾತಿಯ ಹೆಸರಲ್ಲಿ ಮತ ಕೊಡ್ತೀರಿ ನೀವು. ಜಾತಿ ಹೆಸರಲ್ಲಿ ಮತ ಕೊಟ್ಟು, ನಿಮ್ಮ ಪರಿಸ್ಥಿತಿ ಯಾವ ಸ್ಥಿತಿಗೆ ಬಂದಿದೆ ಯೋಚನೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯ ವೇಳೆ ಮಾತನಾಡಿರುವ ಅವರು, ಇವತ್ತು ಉದ್ಯೋಗದ ಕಥೆ ಏನು? ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಸಾಲ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿ ದಿನ ನನ್ನ ಮನೆ ಹತ್ತರ ಬಡವರು ಬರ್ತಾರೆ. ಅವರ ಕಣ್ಣೀರು ನಾನು ನೋಡ್ತೀದಿನಿ. ಹೀಗಾಗಿ, ಪಂಚರತ್ನ ಯೋಜನೆ  ತಂದಿದ್ದೇವೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಕಷ್ಟ ದೂರ ಮಾಡ್ತೀನಿ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ಗೆ ‘ಕುರಿ ಗಿಫ್ಟ್’ ಕೊಟ್ಟ ಕಾರ್ಯಕರ್ತರು

ಡಬಲ್ ಇಂಜಿನ್ ಸರ್ಕಾರದ ಕೆಲಸ ಏನೂ?

ಬಿಜೆಪಿ ನಾಯಕರು ನಮ್ಮದು ಡಬಲ್‌ ಇಂಜಿನ್ ಸರ್ಕಾರ ಅಂತಾರೆ. ಕಳೆದ 14 ವರ್ಷದಲ್ಲಿ ಎಂಟು ವರ್ಷ ಬಿಜೆಪಿ ಆಡಳಿತ ಮಾಡಿದೆ. ಹುಬ್ಬಳ್ಳಿಯ ಹಲವು ರಸ್ತೆ ನೋಡಿ ನನಗೆ ಆಶ್ಚರ್ಯ ಆಯ್ತು. ಆದ್ರೆ ಹುಬ್ಬಳ್ಳಿಗೆ ಕೋಟ್ಯಾಂತರ ಹಣ ಕೊಟ್ಟಿದ್ದೇವೆ ಅಂತಾರೆ. ಕುಡಿಯುವ ನೀರಿನ ಸರಬರಾಜು ಖಾಸಗಿ ಅವರಿಗೆ ಕೊಟ್ಟಿದ್ದಾರೆ. ಹಾಗಾದ್ರೆ ಡಬಲ್ ಇಂಜಿನ್ ಸರ್ಕಾರದ ಕೆಲಸ ಏನೂ? ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ದೇಶ ಸ್ವಚ್ಛ ಮಾಡಿದ್ದೇವೆ ಅಂತಾರೆ

ಪಂಚರತ್ನ ಯೋಜನೆ ಬಗ್ಗೆ ನಾಡಿನ ಜನರಿಗೆ ತಿಳಿಸಲು ಇಡೀ ರಾಜ್ಯ ಸುತ್ತಿದ್ದೇನೆ. ಹಳ್ಳಿಗಳ ಪರಸ್ಥಿತಿ ಹೇಗಿದೆ ಅನ್ನೋದು ಗೊತ್ತಿದೆ. ಪ್ರಧಾನಿ ಮೋದಿ ದೇಶ ಸ್ವಚ್ಛ ಭಾರತ ಮಾಡಿದ್ದೇವೆ ಅಂತಾರೆ. ಜೋಶಿ ಕಸಬರಿಗೆ ಹಿಡಕೊಂಡು ಸ್ವಚ್ಛ ಮಾಡಿ, ಸ್ವಚ್ಛ ಭಾರತ ಮಾಡಿದ್ದೇವೆ ಎಂದು ಹೇಳಿದ್ದರು. ಇದೇನಾ ನಿಮ್ಮ ಸ್ವಚ್ಛ ಭಾರತ ಎಂದು ಕುಟುಕಿದ್ದಾರೆ.

ಪ್ರತಿನಿತ್ಯ ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ನಾವು ಸರ್ಕಾರದಿಂದ 1 ರಿಂದ 12 ನೇ ತರಗತಿವರೆಗೆ ಉತ್ತಮ ಶಿಕ್ಷಣ ಸಿಗಲು ಪ್ರಮುಖ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments