Sunday, August 24, 2025
Google search engine
HomeUncategorizedರಹಾನೆ ಸ್ಫೋಟಕ ಬ್ಯಾಟಿಂಗ್ : ಮುಂಬೈ ತವರಲ್ಲಿ ಚೆನ್ನೈಗೆ ಭರ್ಜರಿ ಜಯ

ರಹಾನೆ ಸ್ಫೋಟಕ ಬ್ಯಾಟಿಂಗ್ : ಮುಂಬೈ ತವರಲ್ಲಿ ಚೆನ್ನೈಗೆ ಭರ್ಜರಿ ಜಯ

ಬೆಂಗಳೂರು : ತವರು ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಮುಖಭಂಗವಾಗಿದ್ದು, ರೋಹಿತ್ ಪಡೆ ವಿರುದ್ಧ ಧೋನಿ ಬಳಗ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.  

158 ರನ್‌ಗಳ ಸುಲಭ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಚೆನ್ನೈ ಪರ ಅಜಿಂಕ್ಯ ರಹಾನೆ 27 ಎಸೆತಗಳಲ್ಲಿ 61 ರನ್ (3 ಸಿಕ್ಸ್, 7 ಫೋರ್) ಸಿಡಿಸಿದ, ಮುಂಬೈ ಗೆಲುವಿಗೆ ವಿಲನ್ ಆದರು.

ಋತುರಾಜ್ ಗಾಯಕ್ವಾಡ್ ಅಜೇಯ 40*, ಶಿವಂ ದುಬೆ 28, ಅಂಬಟಿ ರಾಯುಡು ಅಜೇಯ 20* ಸಿಡಿಸಿದರು. ಇದಕ್ಕೂ ಮೊದಲು 3 ವಿಕೆಟ್ ಪಡೆದ ಜಡೇಜಾ ಬೌಲಿಂಗ್‌ನಲ್ಲಿ ಮಿಂಚಿದರು. ಅಂಕಪಟ್ಟಿಯಲ್ಲಿ ಚೆನ್ನೈ 4ನೇ ಸ್ಥಾನಕ್ಕೆ ಜಿಗಿದರೆ, ಮುಂಬೈ ಇನ್ನೂ ಖಾತೆಯನ್ನೇ ತೆರೆದಿಲ್ಲ.

19 ಎಸೆತಗಳಲ್ಲಿ ಅರ್ಧಶತಕ

ಅಜಿಂಕ್ಯ ರಹಾನೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಬೌಲಿಂಗ್ ಉಡೀಸ್ ಆಯಿತು. ಕೇವಲ 19 ಎಸೆತಗಳಲ್ಲಿ ರಹಾನೆ ಅರ್ಧಶತಕ ಪೂರೈಸಿದರು. ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್​ನ ಅತ್ಯಂತ ವೇಗದ ಅರ್ಧಶತಕವಾಗಿದೆ. ರಹಾನೆಗೂ ಮೊದಲು ಜೋಸ್ ಬಟ್ಲರ್ ಹಾಗೂ ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments