Monday, August 25, 2025
Google search engine
HomeUncategorizedಐಪಿಎಲ್ ಹಬ್ಬಕ್ಕೆ ಕ್ಷಣಗಣನೆ : GT vs CSK ಪೈಕಿ ಯಾವ ತಂಡ ಬಲಿಷ್ಠ?

ಐಪಿಎಲ್ ಹಬ್ಬಕ್ಕೆ ಕ್ಷಣಗಣನೆ : GT vs CSK ಪೈಕಿ ಯಾವ ತಂಡ ಬಲಿಷ್ಠ?

ಬೆಂಗಳೂರು : ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಾಯ್ತು. ಇಂದಿನಿಂದ ಐಪಿಎಲ್-16 ಅದ್ದೂರಿ ಆರಂಭ ಕಾಣಲಿದೆ.

ಹೌದು, ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಎದುರಿಸಲಿದೆ.

ಅದಕ್ಕೂ ಮೊದಲು ಗ್ರ್ಯಾಂಡ್ ಓಪನಿಂಗ್ ಸೆರಮನಿ ನಡೆಯಲಿದೆ. ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ತಾರೆಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಐಪಿಎಲ್‌ನಲ್ಲಿ ಒಟ್ಟು 70 ಲೀಗ್, 3 ಪ್ಲೇ-ಆಫ್ ಹಾಗೂ ಒಂದು ಫೈನಲ್ ಪಂದ್ಯ ನಡೆಯಲಿದೆ.

GT vs CSK: ಯಾವ ತಂಡ ಬಲಿಷ್ಠ?

16ನೇ ಆವೃತ್ತಿಯ ಐಪಿಎಲ್‌ ನ ಮೊದಲ ಪಂದ್ಯ ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿ ಆಗಲಿದೆ.

ಕಳೆದ ಸೀಸನ್‌ನ ಲೀಗ್ ಸುತ್ತಿನಲ್ಲಿ ಟೈಟಾನ್ಸ್ ಮತ್ತು ಚೆನ್ನೈ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿದ್ದವು. ಈ ಎರಡೂ ಪಂದ್ಯಗಳಲ್ಲೂ ಹಾರ್ದಿಕ್ ನಾಯಕತ್ವದ ಗುಜರಾತ್ ತಂಡ ಚೆನ್ನೈ ತಂಡವನ್ನು ಸೋಲಿಸಿತ್ತು. ಹೊಸ ಜೋಶ್ ನೊಂದಿಗೆ ಗ್ರೇಟ್ ಕಂಬ್ಯಾಕ್ ಮಾಡುತ್ತಿರುವ ಎಂ.ಎಸ್ ಧೋನಿ ಮುಂದೆ ಹಾರ್ದಿಕ್ ಪಡೆ ಯಾವ ರೀತಿ ಪೈಪೋಟಿ ನೀಡಲಿದೆ ಎಂದು ಕಾದುನೋಡಬೇಕಿದೆ.

ಮೊದಲ ಪಂದ್ಯದಿಂದ ಧೋನಿ ಔಟ್?

ಇಂದಿನಿಂದ ಐಪಿಎಲ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಚೆನ್ನೈ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಸಿಎಸ್‌ಕೆ ಇಂದು ಆಡಲಿದ್ದು, ಪಂದ್ಯಕ್ಕೆ ಧೋನಿ ಅನುಮಾನ ಎನ್ನಲಾಗಿದೆ.

ಈ ಕುರಿತಂತೆ ಚೆನ್ನೈ (ಸಿಎಸ್‌ಕೆ) ಸಿಇಒ ವಿಶ್ವನಾಥನ್ ಮಾಹಿತಿ ನೀಡಿದ್ದು, ನನಗೆ ತಿಳಿದಿರುವ ಮಾಹಿತಿಯ ಪ್ರಕಾರ, ಧೋನಿ ಖಂಡಿತವಾಗಿಯೂ ಪಂದ್ಯವನ್ನು ಆಡುತ್ತಾರೆ. ಆದರೆ, ಈ ಬಗ್ಗೆಯೂ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಧೋನಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೆ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments