Sunday, August 24, 2025
Google search engine
HomeUncategorized'ಉಪ್ಪಿ'ಗಿಂತ ರುಚಿಯಿಲ್ಲ, ಸ್ಪೀಲ್ ಬರ್ಗ್-ಕ್ಯಾಮೆರಾನ್ ಗಿಂತ 'ಉಪ್ಪಿ'ಯೇನು ಕಮ್ಮಿಯಲ್ಲ!

‘ಉಪ್ಪಿ’ಗಿಂತ ರುಚಿಯಿಲ್ಲ, ಸ್ಪೀಲ್ ಬರ್ಗ್-ಕ್ಯಾಮೆರಾನ್ ಗಿಂತ ‘ಉಪ್ಪಿ’ಯೇನು ಕಮ್ಮಿಯಲ್ಲ!

ಬೆಂಗಳೂರು : ವಿಶ್ವ ಸಿನಿದುನಿಯಾದ ಮಹಾನ್ ಮಾಂತ್ರಿಕರು ಎಂದಾಕ್ಷಣ ಥಟ್ಟನೆ ಕೇಳಿಬರುವ ಹೆಸರು ಸ್ಟೀವನ್ ಸ್ಪೀಲ್ ​​ಬರ್ಗ್ ಹಾಗೂ ಜೇಮ್ಸ್ ಕ್ಯಾಮೆರಾನ್. ಇವರು ಆಲ್​ಟೈಂ ಟ್ರೆಂಡ್​ ಸೆಟ್ಟರ್ಸ್​. ಬಾಲಿವುಡ್​ ಸೇರಿದಂತೆ ಬಹುತೇಕ ಎಲ್ಲಾ ವುಡ್​ಗಳ ಟಾಪ್ ಡೈರೆಕ್ಟರ್​ಗಳಿಗೆ ಸ್ಪೂರ್ತಿಯ ಚಿಲುಮೆ ಎಂದ್ರೆ ಅತಿಶಯೋಕ್ತಿಯಲ್ಲ. ಇಂಥ ಘಟಾನುಘಟಿಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಹೋಲಿಸಲಾಗಿದೆ.

ಹೌದು, ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಹಾಡುಗಾರ.. ಚಂದನವನದ ಈ ಎಲ್ಲಾ ಕ್ಷೇತ್ರದಲ್ಲಿಯೂ ರಿಯಲ್ ಸ್ಟಾರ್ ಉಪ್ಪಿ ಮಿಸ್ಟರ್ ಫರ್ಪೆಕ್ಟ್. ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ತೊಡಗಿಸಿಕೊಂಡಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಸದ್ಯ ಕಬ್ಜ ಚಿತ್ರದಿಂದ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ.

ಮುಂಬೈ, ಚೆನ್ನೈ, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಉಪ್ಪಿ ಪ್ರಮೋಷನ್ಸ್​ನಿಂದ ಧೂಳೆಬ್ಬಿಸಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ರೀಸೆಂಟ್ ಆಗಿ ಹೈದ್ರಾಬಾದ್​​ಗೆ ತೆರಳಿದ್ದ  ಉಪ್ಪಿಯನ್ನು ಟಾಲಿವುಡ್ ಸಿನಿಮಾ ವಿಮರ್ಶಕರು ಹಾಡಿ ಹೊಗಳಿದ್ದಾರೆ.

ಉಪ್ಪಿನೇ ನಮ್ಮ ಪಾಲಿನ ಗಾಡ್

ಹಾಲಿವುಡ್​​ನ ಗಾಡ್​ಫಾದರ್​​ಗಳಾಗಿರೋ ದಿ ಗ್ರೇಟ್ ಸ್ಟೀವನ್ ಸ್ಪೀಲ್ ​​ಬರ್ಗ್ ಹಾಗೂ ಜೇಮ್ಸ್ ಕ್ಯಾಮೆರಾನ್​​ಗಿಂತ ನೀವೇ ನಮ್ಮ ಪಾಲಿನ ಗಾಡ್ ಎಂದು ಹೇಳಿದ್ದಾರೆ. ನಾವು ನಿಮ್ಮ ಸಿನಿಮಾಗಳನ್ನು ನೋಡುತ್ತಾ ಬೆಳೆದವರು. ಹೀಗಾಗಿ, ನೀವೇ ಗಾಡ್ ಎಂದಾಕ್ಷಣ ಸ್ವತಃ ಉಪ್ಪಿಯೇ ಕಕ್ಕಾಬಿಕ್ಕಿ ಆಗಿದ್ದಾರೆ.

ಜೇಮ್ಸ್ ಕ್ಯಾಮೆರಾನ್, ಪಿರಾನ್ಹಾ, ದಿ ಟರ್ಮಿನೇಟರ್, ಟೈಟಾನಿಕ್, ಅವತಾರ್ ಅಂತಹ ವರ್ಲ್ಡ್​ ಕ್ಲಾಸ್ ಸಿನಿಮಾಗಳನ್ನು ನೀಡಿದ ಮಾಂತ್ರಿಕ. ಜುರಾಸಿಕ್ ಪಾರ್ಕ್​, ET ದಿ ಎಕ್ಸ್​ಟ್ರಾ ಟೆರೆಸ್ಟ್ರಿಯಲ್, ಸ್ಕಿಂಡ್ಲರ್ಸ್​ ಲಿಸ್ಟ್, ಜಾಸ್, ಕ್ಯಾಚ್ ಮಿ ಇಫ್ ಯು ಕ್ಯಾನ್, ದಿ ಫ್ಯಾಬಲ್​ಮ್ಯಾನ್ಸ್, ರೈಡರ್ಸ್​ ಆಫ್ ದಿ ಲಾಸ್ಟ್ ಆರ್ಕ್​ ಹೀಗೆ ಇಡೀ ವಿಶ್ವ ನಿಬ್ಬೆರಗಾಗೋ ಅಂತಹ ಚಿತ್ರಗಳನ್ನು ಸ್ಟೀವನ್ ಸ್ಪೀಲ್ ​​ಬರ್ಗ್ ಕೊಟ್ಟಿದ್ದಾರೆ. ಈ ಇಬ್ಬರಿಗೆ ಉಪೇಂದ್ರರನ್ನು ಹೋಲಿಸಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಕಾರಣ ಉಪ್ಪಿ ಅವರ ಜಾನರ್ ಸಿನಿಮಾಗಳು, ಅವರ ಥಾಟ್ ಪ್ರಾಸಸಿಂಗ್, ಸ್ಟೋರಿ ಎಕ್ಸಿಕ್ಯೂಷನ್ ಎಲ್ಲವೂ ಡಿಫರೆಂಟ್ ಎನ್ನಬಹುದು.

ಇದನ್ನೂ ಓದಿ : IMDB ಟ್ರೆಂಡಿಂಗ್ ನಲ್ಲಿ ಕಬ್ಜ ನಂ.1 : ಗ್ಲೋಬಲ್ ಮಾರ್ಕೆಟ್ ಕಬ್ಜಾಗೆ ಉಪ್ಪಿ ರೆಡಿ

ಚಿತ್ರರಂಗದ ಅದ್ಭುತ ಉಪ್ಪಿ

ಉಪೇಂದ್ರ ಕನ್ನಡ ಚಿತ್ರರಂಗದ ಅದ್ಭುತ ಎಂದರೆ ತಪ್ಪಾಗಲಾರದು. ತರ್ಲೆ ನನ್ಮಗ ಸಿನಿಮಾದಿಂದ ಶ್..!, ಓಂ, ಎ, ಉಪೇಂದ್ರ, ಉಪ್ಪಿ 2, ಸೂಪರ್ ಸೇರಿದಂತೆ ಅವರು ಕಟ್ಟಿಕೊಟ್ಟ ಚಿತ್ರಗಳು ಸಿನಿಪ್ರೇಕ್ಷಕರಿಗೆ ರಸದೌತಣ ನೀಡಿದ. ಒಂದೊಂದು ಸಿನಿಮಾ ಕೂಡ ಒಂದೊಂದು ಬಗೆಯ ಫೀಲ್ ಕೊಟ್ಟಿದೆ. ಹೀಗಾಗಿಯೇ, ಉಪೇಂದ್ರ ಅಕ್ಷರಶಃ ನಮ್ಮ ಪಾಲಿನ ಸ್ಪೀಲ್​ಬರ್ಗ್​ ಹಾಗೂ ಕ್ಯಾಮೆರಾನ್ ಎಂದಿರುವುದು ಅತಿಶಯೋಕ್ತಿಯೇನಲ್ಲ.

ಸದ್ಯ ಯು & ಐ ಸಿನಿಮಾದಲ್ಲಿ ತನ್ನನ್ನು ತಾನು ತಿಡಗಿಸಿಕೊಂಡಿರುವ ಉಪ್ಪೇಂದ್ರ ಈ ಬಾರಿ ಮತ್ತಷ್ಟು ಅಡ್ವಾನ್ಸ್ ಆಗಿ ಕಥೆಯನ್ನು ಸಿನಿಪ್ರಿಯರಿಗೆ ಪ್ರೆಸೆಂಟ್ ಮಾಡಲಿದ್ದಾರೆ. ಆ ಮೂಲಕ ನಿರ್ದೇಶಕನ ಗ್ಲಾಮರ್ ನಲ್ಲಿ ತಾನೆಷ್ಟು ಪಕ್ಕಾ ಅನ್ನೊದನ್ನು ಸಾಬೀತುಪಡಿಸಲಿದ್ದಾರೆ ಎನ್ನುವುದು ಉಪ್ಪಿ ಅಭಿಮಾನಿಗಳ ಮಾತಾಗಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments