Saturday, August 23, 2025
Google search engine
HomeUncategorizedವಿದೇಶಿಯರಿಗೆ ರಾಹುಲ್ ‘ಪಪ್ಪು' ಅಂತಾ ಗೊತ್ತಿಲ್ಲ : ಕಿರಣ್ ರಿಜಿಜು ಲೇವಡಿ

ವಿದೇಶಿಯರಿಗೆ ರಾಹುಲ್ ‘ಪಪ್ಪು’ ಅಂತಾ ಗೊತ್ತಿಲ್ಲ : ಕಿರಣ್ ರಿಜಿಜು ಲೇವಡಿ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್‌ ಪ್ರವಾಸದ ಸಂದರ್ಭದಲ್ಲಿ ಚೀನಾವನ್ನು ಹೊಗಳುತ್ತಾ, ಭಾರತವನ್ನು ನಿಂದಿಸಿದ್ದಾರೆ ಎಂದು ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೌದು, ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಭಾರತವನ್ನು ನಿಂದಿಸಿ, ಭಾರತಕ್ಕೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಸಿಡಿಮಿಡಿಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಡೆಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, ದೇಶವನ್ನು ವಿಭಜಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಯನಾಡ್ ಸಂಸದರು ರಾಷ್ಟ್ರೀಯ ಏಕತೆಗೆ ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸುವ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ರಿಜಿಜು ತಿರುಗೇಟು ಕೊಟ್ಟಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ರಿಜಿಜು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿಗೆ ಅನುರಾಗ್ ಠಾಕೂರ್ ತಿರುಗೇಟು

ಸ್ವಯಂ ಘೋಷಿತ ಕಾಂಗ್ರೆಸ್ ರಾಜಕುಮಾರ

“ಸ್ವಯಂ ಘೋಷಿತ” ಕಾಂಗ್ರೆಸ್ ರಾಜಕುಮಾರ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಭಾರತದ ಜನರಿಗೆ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ತಿಳಿದಿದ್ದಾರೆ. ಆದರೆ ವಿದೇಶಿಯರಿಗೆ ಅವರು ನಿಜವಾಗಿ ‘ಪಪ್ಪು’ ಎಂದು ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಮೂರ್ಖ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದು ಅನಿವಾರ್ಯವಲ್ಲ .ಆದರೆ, ಸಮಸ್ಯೆಯೆಂದರೆ ಅವರ ಭಾರತ ವಿರೋಧಿ ಹೇಳಿಕೆಗಳನ್ನು ಭಾರತ ವಿರೋಧಿ ಪಡೆಗಳು ಭಾರತದ ಇಮೇಜ್ ಅನ್ನು ಕಳಂಕಗೊಳಿಸಲು ದುರುಪಯೋಗಪಡಿಸಿಕೊಂಡಿವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments