Friday, August 22, 2025
Google search engine
HomeUncategorizedH3N2 : ರಾಜ್ಯಕ್ಕೆ ಹೊಸ ಗೈಡ್ ಲೈನ್ಸ್ : ಇವರಿಗೆ ಮಾತ್ರ ಅನ್ವಯ

H3N2 : ರಾಜ್ಯಕ್ಕೆ ಹೊಸ ಗೈಡ್ ಲೈನ್ಸ್ : ಇವರಿಗೆ ಮಾತ್ರ ಅನ್ವಯ

ಬೆಂಗಳೂರು : ಕೊರೋನಾ ರೂಪಾಂತರ ತಳಿ ಎಂದೇ ಹೇಳಲಾಗುತ್ತಿರುವ H3N2 ಸೋಂಕು ಹರಡುವಿಕೆ ಸಂಬಂಧ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಎಲ್ಲಾ ಆರೋಗ್ಯ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದೆ. ಮಕ್ಕಳು ಹಾಗೂ ಗರ್ಭಿಣಿಯರು ವೀಶೇಷ ಮುಂಜಾಗೃತಾ ಕ್ರಮವನ್ನು ತೆಗದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿರುವ ಅವರು, H3N2 ಸೋಂಕಿನ ಬಗ್ಗೆ ರಾಜ್ಯದ ಜನರು ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ. ಆದರೆ, ಎಲ್ಲರೂ ಇಂದಿನಿಂದಲೇ ಮಾಸ್ಕ್ ಜೊತೆಗೆ ಕೆಲವು ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

H3N2 ಹೆಚ್ಚಳದ ಬಗ್ಗೆ ಸುಧಾಕರ್ ಏನಂದ್ರು?

ಕೆಲವು ದಿನಗಳಿಂದ ಸೀಸನಲ್ ಪ್ಲೋ H3N2 ಹೆಚ್ಚಾಗಿದೆ. ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಕಳೆದ 6 ತಿಂಗಳಿಂದ ಆಸ್ಪತ್ರೆ ಗಳಲ್ಲಿ ಕೂಡ ಮಾಸ್ಕ್ ನಿರ್ಲಕ್ಷ್ಯ ಆಗಿದೆ. ಎಲ್ಲಾ ಹೆಲ್ತ್ ಕೇರ್ ಸ್ಟಾಫ್ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ಹೆಲ್ತ್ ಕೇರ್ ಸ್ಟಾಫ್ ಗೆ ಕಡ್ಡಾಯ (influenza) ಲಸಿಕೆ ಪಡೆಯಲು ಸೂಚನೆ ನಿಡಲಾಗಿದೆ. ICMR ನಲ್ಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಲಸಿಕೆ ಕೊಡಲು ಸೂಚನೆ ಕೊಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಎಲ್ ಐ (ILI) ಹಾಗೂ SARI ಕೇಸ್ ಗಳಿಗೆ H3N2 ಟೆಸ್ಟ್ ಮಾಡಲಾಗುತ್ತದೆ. ವಾರಕ್ಕೆ 25 ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

H3N2 ವೈರಸ್ ಲಕ್ಷಣಗಳು

  • ತೀವ್ರ ಜ್ವರ
  • ನಿರಂತರ ಕೆಮ್ಮು
  • ನೆಗಡಿ
  • ವಾಕರಿಕೆ
  • ಮೈ-ಕೈ ನೋವು
  • ಗಂಟಲು ಕೆರೆತ
  • ಸ್ನಾಯು ಸೆಳೆತ
  • ಅತಿಸಾರ

ಮುಂಜಾಗ್ರತಾ ಕ್ರಮಗಳು 

  • ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು
  • ಹೊರಗಡೆ ಓಡಾಡುವವರು ಮಾಸ್ಕ್​​ ಹಾಕಿಕೊಳ್ಳಬೇಕು
  • ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬಾರದು
  • ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬಾರದು
  • ಕೆಮ್ಮುವಾಗ, ಸೀನುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ

*ದೇಹದಲ್ಲಿ ನೀರಿನಾಂಶ ಹೆಚ್ಚಿರುವಂತೆ ನೋಡಿಕೊಳ್ಳಿ

* ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು

* ಆದಷ್ಟೂ ಬೆಚ್ಚನೆಯ ಉಡುಪು ಧರಿಸಬೇಕು

* ಮಾಲ್​, ಮೆಟ್ರೋಗಳಲ್ಲಿ ಓಡಾಡುವವರು ಎಚ್ಚರ ವಹಿಸಬೇಕು

* ಆದಷ್ಟು ಬೆಚ್ಚಗಿನ ನೀರನ್ನೇ ಕುಡಿಯಬೇಕು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments