Thursday, August 21, 2025
Google search engine
HomeUncategorizedಎಂಎಲ್ಎ ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ

ಎಂಎಲ್ಎ ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆ ಹಂಗಾಮ ಎಲ್ಲೆಡೆ ಜೋರಾಗಿದೆ. ಇತ್ತ, ಹಲವು ನಾಯಕರು ಈ ಬಾರಿ ಚುನಾವಣಾ ಅಖಾಡಕ್ಕೆ ದುಮುಕುವ ಹಿರಾದೆ ವ್ಯಕ್ತಪಡಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ಎಂಎಲ್ಎ ಚುನಾವಣೆ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸುಮಲತಾ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಥವಾ ಪಕ್ಷ ಸೇರುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಮೌನ ಮುರಿದಿದ್ದಾರೆ.

ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕವಾಗಿದೆ. ಪೂರ್ಣ ಪ್ರಮಾಣದಲ್ಲಿ ಇಲ್ಲಿರುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ಇನ್ನು ಚುನಾವಣೆಗೆ ಸ್ಪರ್ಧಿಸಬೇಕೆನ್ನುವುದು ಸುಲಭದ ಮಾತಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪರನ್ನ ಜೈಲಿಗೆ ಹಾಕಿದ್ದೇ ಕಾಂಗ್ರೆಸ್​ : ಆರ್. ಅಶೋಕ್

ವಿಧಾನಸಭೆ ಚುನಾವಣೆಗೆ ಸ್ಪರ್ಧೆಗೆ ಅನುಕೂಲಕರವಾದ ವಾತಾವರಣ ಎಷ್ಟಿದೆ ಎಂಬುದು ಮುಖ್ಯ. ಹೀಗಾಗಿ, ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನಲು ಇದು ಸಮಯವಲ್ಲ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ. ಆ ಮೂಲಕ ಎಂಎಲ್ಎ ಎಲೆಕ್ಷನ್​ನಿಂದ ತಾವು ದೂರ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕೈ-ಕಮಲ ನಾಯಕರೊಂದಿಗೆ ಉತ್ತಮ ಸಂಬಂಧವಿದೆ

ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರುಗಳು ಪಕ್ಷಾತೀತವಾಗಿ ನನಗೆ ಬೆಂಬಲ ನೀಡಿದ್ದರು. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆ ಉತ್ತಮವಾದ ಸಂಬಂದವಿದೆ. ಚುನಾವಣೆ ಸ್ಪರ್ಧೆ ಹಾಗೂ ಪಕ್ಷ ಸೇರ್ಪಡೆ ಬಗೆಗಿನ ನನ್ನ ತೀರ್ಮಾನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

ದಳಪತಿಗಳ ವಿರುದ್ದ ಗುಡುಗಿದ ಸುಮಲತಾ

ಇದೇ ವೇಳೆ ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ಗುಡುಗಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರಿಗೆ ಸುಮಲತಾ ಖಡಕ್ ವಾರ್ನಿಂಗ್ ನೀಡಿದ್ದಾರೆ. ತನ್ನ ಬೆಂಬಲಿಗರಾದ ಇಂಡವಾಳು ಸಚ್ಚಿದಾನಂದ ಕುರಿತು ಶ್ರೀಕಂಠಯ್ಯ ಉಡಾಫೆ ಉತ್ತರ ಕೊಟ್ಟಿದ್ದರು. ರಸ್ತೆ ಗುದ್ದಲಿ ಪೂಜೆಗೆ ಹೋಗಿದ್ದ ವೇಳೆ ರವೀಂದ್ರ ಶ್ರೀಕಂಠಯ್ಯರನ್ನು ಗ್ರಾಮಸ್ಥರು ವಾಪಸ್ ಕಳುಹಿಸಿದ್ದರು. ಈ ವಿಚಾರವನ್ನ ಪ್ರಸ್ಥಾಪಿಸಿ ಜೆಡಿಎಸ್ ಶಾಸಕನಿಗೆ ಮಾತಿನಲ್ಲೇ ತಿರುಗೇಟು ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments