Thursday, August 21, 2025
Google search engine
HomeUncategorizedರಾಯನ್ ರಾಜ್ ಜೊತೆಗಿನ ಕ್ಯೂಟ್ ವಿಡೀಯೋ ಶೇರ್ ಮಾಡಿದ ಮೇಘನಾ ರಾಜ್

ರಾಯನ್ ರಾಜ್ ಜೊತೆಗಿನ ಕ್ಯೂಟ್ ವಿಡೀಯೋ ಶೇರ್ ಮಾಡಿದ ಮೇಘನಾ ರಾಜ್

ಬೆಂಗಳೂರು: ನಟಿ ಮೇಘನಾ ರಾಜ್ ಅವರು ಒಂದು ದೊಡ್ಡ ಗ್ಯಾಪ್​ನ ಬಳಿಕ ಮತ್ತೆ ಚಂದನವನಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆ ಮೂಲಕ ಹೊಸ ಸಿನಿಮಾ ಜೊತೆಗೆ ತಮ್ಮ ಹೊಸ ಕನಸುಗಳ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ, ಮಗ ರಾಯನ್ ರಾಜ್ ಜೊತೆ ಸಮಯ ಕಳೆಯುತ್ತಿರುವ ವಿಡಿಯೋ ಒಂದನ್ನು ಮೇಘನಾ ರಾಜ್ ಶೇರ್ ಮಾಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಅವರ ನಿಧನದ ಬಳಿಕ ನಟಿ ಮೇಘನಾ ರಾಜ್ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಚಿರು ಅಕಾಲಿಕ ನಿಧನ ಮೇಘನಾ ಹಾಗೂ ಅವರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು. ಆದ್ರೆ, ಮಗ ರಾಯನ್ ರಾಜ್ ಆಗಮನದಿಂದ ಮೇಘನಾ ರಾಜ್ ಅವರಿಗೆ ಹೊಸ ಚೈತನ್ಯ ತುಂಬಿತ್ತು.

ಮಗ ರಾಯನ್ ರಾಜ್ ಆಗಮನದಿಂದ ಮೇಘನಾ ಜೀವನದಲ್ಲಿ ಇನ್ನಿಲ್ಲದ ಜೀವನೋತ್ಸಾಹ ಬಂದಿದೆ. ಚಿರು ಸರ್ಜಾರ ಆ ಕಿರುನಗು ಮಗ ರಾಯನ್ ರಾಜ್​ರಲ್ಲಿ ಕಾಣುತ್ತಿದ್ದಾರೆ. ಇದು ಇಡೀ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬದ ನೋವನ್ನು ಮರೆಸಿದೆ ಎಂದರೆ ತಪ್ಪಾಗಲಾರದು. ರಾಯನ್ ರಾಜ್ ನಟಿ ಮೇಘನಾ ರಾಜ್ ಅವರ ಬಾಳಿಗೆ ಬೆಳಕಾಗಿ ಬಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಆಕ್ಟಿವ್
ಮಗ ರಾಯನ್ ರಾಜ್ ಲಾಲನೆ, ಪಾಲನೆಯಲ್ಲಿ ನಟಿ ಮೇಘನಾ ರಾಜ್ ತುಂಬಾನೇ ಬ್ಯುಸಿ ಆಗಿದ್ದಾರೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮಗನ ಜೊತೆಗಿನ ಕೆಲವು ಕ್ಷಣಗಳ ಫೋಟೋ ಹಾಗು ವಿಡಿಯೋಗಳನ್ನು ಇನ್ಸ್​ಟಾ ಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುದ್ದು ಮಗನ ಜೊತೆಗೆ ಮೇಘನಾ ಸಮಯ ಕಳೆಯುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.

ಇದನ್ನೂ ಓದಿ: ಸರ್ಕಾರಿ ನೌಕರರ ಮುಷ್ಕರ ಅಂತ್ಯ, ನಾಳೆಯಿಂದ ಎಂದಿನಂತೆ ಕೆಲಸಕ್ಕೆ ಹಾಜರ್

ಇಡೀ ಚಿತ್ರರಂಗದಿಂದ ಮೇಘನಾಗೆ ಸಾಥ್
ಇದರ ಹೊರತಾಗಿ ನಟಿ ಮೇಘನಾ ರಾಜ್ ಚಂದನವನಕ್ಕೆ ಕಂಬ್ಯಾಕ್ ಮಾಡಿರುವುದಕ್ಕೆ ಸ್ಯಾಂಡಲ್​ವುಡ್ ಮಂದಿ ಶುಭ ಹಾರೈಸಿದ್ದಾರೆ. ನಟಿ ಮೇಘನಾ ರಾಜ್ ಅವರ ತತ್ಸಮ-ತದ್ಭವ ಎನ್ನುವ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಇದಕ್ಕೆ ಇಡೀ ಚಿತ್ರರಂಗ ಸಾಥ್ ನೀಡಿದೆ. ಈ ಬಗ್ಗೆ ಖುದ್ದು ಮೇಘನಾ ರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ತಮ್ಮ ಅನಿಸಿಕೆ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.

ಒಟ್ನಲ್ಲಿ, ನಟಿ ಮೇಘನಾ ರಾಜ್ ಮಗ ರಾಯನ್ ರಾಜ್​ಗೆ ಹೆಚ್ಚು ಸಮಯ ನೀಡುವ ಮೂಲಕ ತಮ್ಮ ಹಳೆಯ ಕಹಿ ಘಟನೆಗಳಿಂದ ಹೊರಬರುತ್ತಿದ್ದಾರೆ. ಮಗನ ಮುಂದಿನ ಜೀವನ ಹಾಗೂ ಬಣ್ಣದ ಲೋಕದ ಬಗ್ಗೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments