Sunday, September 14, 2025
HomeUncategorizedಲವ್​ ಮ್ಯಾರೇಜ್ ಆಗ್ಬಹುದಾ ಅಂತ ಕೇಳ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ..!

ಲವ್​ ಮ್ಯಾರೇಜ್ ಆಗ್ಬಹುದಾ ಅಂತ ಕೇಳ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ..!

ಸ್ಯಾಂಡಲ್​ವುಡ್​ನಲ್ಲೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಹವಾ ಸಿಕ್ಕಾಪಟ್ಟೆ ಹೆಚ್ಚಿದೆ..! ಒಂದರ ಹಿಂದೊಂದರಂತೆ ಬಿಗ್ ಹಿಟ್ ಮೂವಿಗಳನ್ನು ಕೊಡ್ತಿರೋ ಮುರಳಿಯ ‘ಭರಾಟೆ’ ಜೋರಾಗಿದೆ. ಈಗ ಯೂಟ್ಯೂಬ್​ನಲ್ಲಿ ಭರಾಟೆ ಹಾಡಿನದ್ದೇ ರಾಯಭಾರ…! 

ಹೌದು, ಶ್ರೀಮುರಳಿ ಉಗ್ರಂನಿಂದ ಕಮ್​ಬ್ಯಾಕ್ ಆದ್ಮೇಲೆ ಹಿಂತಿರುಗಿಲ್ಲ. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡ್ತಿದ್ದಾರೆ. ಉಗ್ರಂ ಆದ್ಮೇಲೆ ರಥಾವರ, ಮಫ್ತಿ ಕೂಡ ಹಿಟ್ ಸಿನಿಮಾಗಳು..! ಇದೀಗ ಭರಾಟೆ ನಿರೀಕ್ಷೆ ಬೆಟ್ಟದಷ್ಟಿದೆ. ಸಿನಿಮಾ ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸೌಂಡು ಮಾಡ್ತಿದ್ದು, ಈಗ ಯೂಟ್ಯೂಬ್​ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಭರಾಟೆ ಹಾಡುಗಳದ್ದೇ ಸೌಂಡು..!

ಇತ್ತೀಚೆಗೆ ಬಿಡುಗಡೆಯಾಗಿದ್ದ ಮೊದಲನೇ ಹಾಡು ಯಾವ ಮಟ್ಟಿಗೆ ಸೌಂಡು ಮಾಡ್ತಿದೆ ಅನ್ನೋದು ನಿಮ್ಗೆ ಗೊತ್ತೇ ಇದೆ. ಇಂದು ಮತ್ತೊಂದು ಹಾಡು  ರಿಲೀಸ್ ಆಗಿದ್ದು ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿಬಿಟ್ಟಿದೆ. ‘ದಿನ ನಿನ್ನ ನೋಡ್ದೆ ಇದ್ರೆ ನಂಗೆ ಬ್ಲಡ್ ಸ್ವಲ್ಪ ಕಮ್ಮಿ ಆದಂಗೆ’ ಅನ್ನೋ ಸಾಲುಗಳು ಪ್ರೇಮಿಗಳ ಬಾಯಲ್ಲಿ ಈಗಾಗಲೇ ಗುನುಗುಟ್ಟಲಾರಂಭಿಸಿದೆ.

ಯೂಟ್ಯೂಬ್​ನಲ್ಲಿ ಹಾಡು  ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಯೂಟ್ಯೂಬ್​ನಲ್ಲಿ ಅಬ್ಬರ ಶುರುವಿಟ್ಟಿರುವ ಈ ಹಾಡು ಲವ್ವರ್ಸ್ ಆ್ಯಂಥಮ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಇನ್ಮುಂದೆ ಕಾಲೇಜು ಕಾರ್ಯಕ್ರಮಗಳಲ್ಲಂತೂ ಈ ಹಾಡಿನದ್ದೇ ಕಾರುಬಾರು ಬಿಡಿ..!

ಇಂದು ಬೆಳಗ್ಗೆ ಬೆಂಗಳೂರಿನ ತ್ಯಾಗರಾಜ ನಗರದ ರಾಮಾಜಿಂನಯಾ ದೇವಸ್ಥಾನದಲ್ಲಿ ಚಿತ್ರತಂಡ ಹಾಡನ್ನು ರಿಲೀಸ್​ ಮಾಡಿದೆ. ಈ ಕಾರ್ಯಕ್ರಮದಲ್ಲಿ ನಟಿಯರಾದ ರಚಿತಾ ರಾಮ್​, ಅಧಿತಿ ಪ್ರಭುದೇವ್​ ಪಾಲ್ಗೊಂಡಿದ್ರು.

ಈ ಹಾಡಿನ ಲಿರಿಕ್ಸ್​ ಅನ್ನು ಚಿತ್ರದ ನಿದೇರ್ಶಕ ಚೇತನ್​ ಕುಮಾರ್​ ಅವರೇ ಬರೆದಿದ್ದು, ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಹಾಡಿಗೆ ಧ್ವನಿ ನೀಡಿದ್ದಾರೆ. ಚೇತನ್​​ ಬರೆದಿದ್ದ ಶ್ಯಾನೆ ಟಾಪ್​ಗವ್ಳೆ ಹಾಗೂ ಎನಮ್ಮಿ ಎನಮ್ಮ, ಹಾಡಿನಂತೆ, ಈ ಯೋ ಯೋ ಹಾಡು ಕೂಡ ಸಖತ್ ಸದ್ದು ಮಾಡೋದ್ರಲ್ಲಿ ನೋ ಡೌಟ್.

ಇನ್ನು ಈಗಾಗಲೇ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿರುವ ಭರಾಟೆ ಸೆಪ್ಟೆಂಬರ್ 27ರಂದು ತೆರೆಗೆ ಬರಲಿದ್ದು, ಅಂದಿನಿಂದ ಬೆಳ್ಳಿ ಪರದಯಲ್ಲಿ ತನ್ನ ದರ್ಬಾರು ಶುರುಮಾಡಲಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments