Monday, September 15, 2025
HomeUncategorizedಕೂಡಿ ಬಾಳಿದರೆ ಸ್ವರ್ಗ : ಸುದೀಪ್​ಗೆ ಜಗ್ಗೇಶ್​ ಟ್ವೀಟ್..!

ಕೂಡಿ ಬಾಳಿದರೆ ಸ್ವರ್ಗ : ಸುದೀಪ್​ಗೆ ಜಗ್ಗೇಶ್​ ಟ್ವೀಟ್..!

ನವರಸ ನಾಯಕ ಜಗ್ಗೇಶ್ ಟ್ವಿಟರ್​ನಲ್ಲಿ ತುಂಬಾ ಆ್ಯಕ್ಟಿವ್ ಆಗಿರ್ತಾರೆ. ಏನದರೂ ಒಂದು ವಿಷಯದ ಕುರಿತು ಆಗಾಗ ಟ್ವೀಟ್ ಮಾಡಿ ಚರ್ಚೆ ಹುಟ್ಟು ಹಾಕುವ ಜಗ್ಗೇಶ್, ಕೆಲವರ ಕಾಲೆಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೆ ಕಿರಿಯ ನಟ -ನಟಿಯರಿಗೆ ಕಿವಿಮಾತು ಹೇಳುತ್ತಿರುತ್ತಾರೆ. ಅವರ ಸಿನಿಮಾಗಳನ್ನು ಮೆಚ್ಚಿ ಟ್ವೀಟ್ ಮಾಡುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರವನ್ನು ಮೆಚ್ಚಿ, ”ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೆಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ.. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರ ತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless..” ಅಂತ ಟ್ವೀಟ್ ಮಾಡಿದ್ದ ಜಗ್ಗೇಶ್ ಸುದೀಪ್ ಅವರಿಗೂ ಇದೇ ರೀತಿ ಟ್ವೀಟ್ ಮಾಡಿದ್ದಾರೆ.
”ಕಾಯುತ್ತಿದೆ ಕರುನಾಡು ಪೈಲ್ವಾನಗಾಗಿ. ನಿನ್ನ ಯತ್ನ ರಂಜಿಸಲಿ ಕನ್ನಡಿಗರ ಮನವ. ನಿಮ್ಮಗಳ ತಲೆಮಾರಿನಲ್ಲಿ ಶ್ರೀಮಂತವಾಗಲಿ ಕನ್ನಡ ಚಿತ್ರರಂಗ. ಜೊತೆಗೆ ಹಳೆತಲೆಮಾರಿನ ಹಿರಿಯ ಕಲಾವಿದರಿಗು ನಿಮ್ಮ ಜೊತೆ ಹೆಜ್ಜೆಹಾಕಿಸಿ. ಅವರ ಉದರಕ್ಕೆ ಆಸರೆಯಾಗಿ ಎಂದು ವಿನಂತಿ. ಕೂಡಿಬಾಳಿದರೆ ಸ್ವರ್ಗ – ಕಿವಿಮಾತು” ಅಂತ ಜಗ್ಗೇಶ್ ಸುದೀಪ್​ಗೆ ಟ್ವೀಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments