Monday, September 15, 2025
HomeUncategorizedಮೈತ್ರಿ ಸರ್ಕಾರದ ಪತನಕ್ಕೆ ಅಪ್ಪ-ಮಕ್ಕಳೇ ಕಾರಣ : ದೇವೇಗೌಡ್ರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಫುಲ್​ ಗರಂ..!

ಮೈತ್ರಿ ಸರ್ಕಾರದ ಪತನಕ್ಕೆ ಅಪ್ಪ-ಮಕ್ಕಳೇ ಕಾರಣ : ದೇವೇಗೌಡ್ರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಫುಲ್​ ಗರಂ..!

ಬೆಂಗಳೂರು : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ್ರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮೇಲೆ ಮಾಡಿದ್ದ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅಪ್ಪ-ಮಕ್ಕಳು, ವಚನ ಭ್ರಷ್ಟರು, ನೀಚರು, ಹುಟ್ಟುಗುಣ, ದ್ರೋಹ, ನಾಟಕ, ಸುಳ್ಳು ಹೀಗೆ ಅನೇಕ ಪದಗಳನ್ನು ಯತೇಚ್ಛವಾಗಿ ಬಳಸಿ ಗೌಡರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಪ್ರೆಸ್ ಮೀಟ್ ಮಾಡಿದ ಸಿದ್ದರಾಮಯ್ಯ, ದೇವೇಗೌಡ್ರು, ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲರಾದ್ರು. ಮೈತ್ರಿ ಸರ್ಕಾರದ ಪತನಕ್ಕೆ ಅಪ್ಪ-ಮಕ್ಕಳೇ ಕಾರಣ. ದೇವೇಗೌಡ್ರು ತಮ್ಮ ಮಕ್ಕಳನ್ನು,ಕುಟುಂಬದವರನ್ನು ಬಿಟ್ರೆ ಯಾರನ್ನು ಬೆಳೆಸಿಲ್ಲ. ಸ್ವಜಾತಿಯವರನ್ನು ಕೂಡ ಬೆಳೆಸಲ್ಲ ಎಂದರು.
ದೇವೇಗೌಡ್ರು ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ, ರಾಜಕೀಯ ದುರದ್ದೇಶದಿಂದ ನನ್ನ ಮೇಲೆ ಆರೋಪ ಮಾಡ್ತಿದ್ದಾರೆಯೇ ವಿನಃ ಅವೆಲ್ಲಾ ಆಧಾರ ರಹಿತವಾದವು ಎಂದು ಸಿಡಿದರು.
ಮೈತ್ರಿ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರಕ್ಕೆ ಬರಲು ಹೆಚ್​.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್​.ಡಿ ರೇವಣ್ಣ ನೇರ ಕಾರಣ. ನಂಗೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದಿತ್ತು. ಅದಕ್ಕಾಗಿ ಹೈಕಮಾಂಡ್ ತೀರ್ಮಾನ ಒಪ್ಪಿಕೊಂಡೆ. 80 ಜನ ಶಾಸಕರಿದ್ರೂ 37 ಶಾಸಕರಿದ್ದ ಜೆಡಿಎಸ್​ಗೆ ಅಧಿಕಾರ ಬಿಟ್ಟುಕೊಟ್ಟೆವು. ಮರು ಮಾತಾಡ್ದೆ ಹೈಕಮಾಂಡ್ ನಿರ್ಧಾರ ಒಪ್ಪಿಕೊಂಡು, 16 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೀನಿ. ಅಧಿಕಾರದಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡಿಲ್ಲ ಎಂದು ಹರಿಹಾಯ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments