ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ಒಂದರ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಲೇ ಇರುತ್ತಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ರವರ ಹೆಸರಲ್ಲಿದ್ದ ದಾಖಲೆಗಳನ್ನು ಕೂಡ ವಿರಾಟ್ ಮುರಿಯುತ್ತಿದ್ದಾರೆ. ರನ್ ಮಷಿನ್ ಕೊಹ್ಲಿ ಸಚಿನ್ ಅವರ ಎಲ್ಲಾ ದಾಖಲೆಗಳನ್ನು ಮುರಿಯುತ್ತಾರೆ..ಆ ಒಂದು ದಾಖಲೆಯನ್ನು ಮಾತ್ರ ಬಿಟ್ಟು ಅಂತ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.
ಈಗಿನ ತಲೆಮಾರಿನ ಒಬ್ಬ ಪ್ರಬುದ್ಧ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. ದೀರ್ಘಾವಧಿ ಸ್ಥಿರ ಬ್ಯಾಟಿಂಗ್ ಮಾಡಬಲ್ಲವರು. ಸಚಿನ್ ಅವರ ಹಲವಾರು ದಾಖಲೆಗಳನ್ನು ವಿರಾಟ್ ಮುರಿಯಬಲ್ಲರು. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ದಾಖಲಿಸಿದ ಶತಕ ಮತ್ತು ರನ್ ಗಳಿಸುವ ಹಾದಿ ನೋಡಿದ್ರೆ ಅವರೊಬ್ಬ ಅದ್ಭುತ ಆಟಗಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ವಿರಾಟ್ ಸಚಿನ್ ತೆಂಡೂಲ್ಕರ್ ಅವರ ಬಹುತೇಕ ಎಲ್ಲಾ ರೆಕಾರ್ಡ್ಗಳನ್ನು ಬ್ರೇಕ್ ಮಾಡಬಲ್ಲರು. ಆದರೆ ಸಚಿನ್ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ದಾಖಲೆಯನ್ನು ಮಾತ್ರ ವಿರಾಟ್ ಮುರಿಯುವುದು ಕಷ್ಟ. ಅವರು ಈಗಿನ್ನೂ ಅವರು 77 ಮ್ಯಾಚ್ಗಳನ್ನು ಮಾತ್ರ ಆಡಿದ್ದು, 200 ಟೆಸ್ಟ್ ಆಡುವುದು ಕಷ್ಟ ಎಂದಿದ್ದಾರೆ ಸೆಹ್ವಾಗ್.
ಆ ದಾಖಲೆಯೊಂದನ್ನು ಬಿಟ್ಟು ಸಚಿನ್ ಎಲ್ಲಾ ರೆಕಾರ್ಡ್ಗಳನ್ನು ಕೊಹ್ಲಿ ಬ್ರೇಕ್ ಮಾಡಬಲ್ಲರು : ಸೆಹ್ವಾಗ್
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


